ಭೀಕರ ಅಪಘಾತ: ಪರೀಕ್ಷೆ ಮುಗಿಸಿ ವಾಪಸ್​ ಬರ್ತಿದ್ದ ವಿದ್ಯಾರ್ಥಿನಿ ಸಾವು!

ಭೀಕರ ಅಪಘಾತ: ಪರೀಕ್ಷೆ ಮುಗಿಸಿ ವಾಪಸ್​ ಬರ್ತಿದ್ದ ವಿದ್ಯಾರ್ಥಿನಿ ಸಾವು!

ಹಾಸನ: ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿನಿ ವಾಪಸ್​ ಬರುವಾಗ ನಡೆದ ಅಪಘಾತದಲ್ಲಿ ಮೃತಪಟ್ಟ ಧಾರುಣ ಘಟನೆ ಚನ್ನರಾಯಪಟ್ಟಣ ತಾಲೂಕಿನ, ರಾಚೇನಹಳ್ಳಿ ಗೇಟ್ ಬಳಿ ನಡೆದಿದೆ.

ಪೂಜಾ (21) ಮೃತಪಟ್ಟ ವಿದ್ಯಾರ್ಥಿನಿ. ಮೈಸೂರಲ್ಲಿ ಎಂಎಸ್​ಎಸ್ಸಿ ಓದುತ್ತಿದ್ದ ಮೃತ ವಿದ್ಯಾರ್ಥಿ ನಿನ್ನೆ ಪರೀಕ್ಷೆ ಬರೆಯಲೆಂದು ಮೈಸೂರಿಗೆ ತೆರಳಿದ್ದರು. ಪರೀಕ್ಷೆ ಮುಗಿಸಿ ವಾಪಸ್​ ಬರುವದರೊಳಗಾಗಿ ಸಂಜೆಯಾದ ಕಾರಣ ಚನ್ನರಾಯಪಟ್ಟಣಕ್ಕೆ ಬಂದು ತಂದೆಗೆ ಕರೆ ಮಾಡಿ ಬಂದು ಕರೆದುಕೊಂಡು ಹೋಗಲು ಹೇಳಿದ್ದರು ಎನ್ನಲಾಗಿದೆ.

ತಂದೆ ಚನ್ನರಾಯಪಟ್ಟಣಕ್ಕೆ ಬಂದು ಮಗಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದು, ತಂದೆ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

The post ಭೀಕರ ಅಪಘಾತ: ಪರೀಕ್ಷೆ ಮುಗಿಸಿ ವಾಪಸ್​ ಬರ್ತಿದ್ದ ವಿದ್ಯಾರ್ಥಿನಿ ಸಾವು! appeared first on News First Kannada.

Source: newsfirstlive.com

Source link