ಶ್ರೀಲಂಕಾ ರಾಷ್ಟ್ರಗೀತೆ ಹಾಡಿ, ಮನ ಗೆದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ..!

ಶ್ರೀಲಂಕಾ ರಾಷ್ಟ್ರಗೀತೆ ಹಾಡಿ, ಮನ ಗೆದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ..!

ಕ್ರಿಕೆಟ್.. ಜಾತಿ, ಧರ್ಮಕ್ಕೆ ಮೀರಿದ ಆಟ ಎಂಬುವುದು ಮತ್ತೊಮ್ಮೆ ಫ್ರೂವ್ ಆಗಿದೆ. ನಿನ್ನೆ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ವೇಳೆ, ಇಂಥಹದ್ದೊಂದು ಘಟನೆಗೆ ಸಾಕ್ಷಿಯಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾ ಆಟಗಾರರು ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ, ಟೀಮ್ ಇಂಡಿಯಾ ಆಲ್​ರೌಂಡರ್​ ಹಾರ್ದಿಕ್‌ ಪಾಂಡ್ಯ ದನಿಗೂಡಿಸಿದ್ದಾರೆ. ಪಾಂಡ್ಯ ಲಂಕಾ ರಾಷ್ಟ್ರಗೀತೆ ಹಾಡುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಲಂಕಾ ಕ್ರಿಕೆಟ್ ಬೋರ್ಡ್ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದೆ.

ದೇಶ, ದೇಶಗಳ ಬಗ್ಗೆ ಪ್ರೀತಿ, ಗೌರವ ಇರಬೇಕು ಎಂಬಂತಿರುವ ಪಾಂಡ್ಯರ ಈ ನಡೆಯನ್ನ, ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾಲ್ಲಿ ಸಖತ್ ವೈರಲ್​ ಆಗುವುದರ ಜೊತೆಗೆ, ಎಲ್ಲರ ಪ್ರೀತಿಗೂ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ..!! ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟ್‌ವೊಂದನ್ನ ಶ್ರೀಲಂಕಾ ತಂಡದ ಚಮಿಕಾ ಕರುಣಾರತ್ನೆಗೆ ಕೊಡುಗೆಯಾಗಿ ನೀಡುವುದರೊಂದಿಗೆ, ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.

The post ಶ್ರೀಲಂಕಾ ರಾಷ್ಟ್ರಗೀತೆ ಹಾಡಿ, ಮನ ಗೆದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ..! appeared first on News First Kannada.

Source: newsfirstlive.com

Source link