ಸಾಧನಾ ಸಮಾವೇಶದ ಭಾಷಣದ ವೇಳೆ ಕಣ್ಣೀರಿಟ್ಟ ಸಿಎಂ ಬಿಎಸ್​​ವೈ

ಸಾಧನಾ ಸಮಾವೇಶದ ಭಾಷಣದ ವೇಳೆ ಕಣ್ಣೀರಿಟ್ಟ ಸಿಎಂ ಬಿಎಸ್​​ವೈ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಇವತ್ತಿಗೆ 2 ವರ್ಷ ಪೂರೈಸಿದೆ. ನಾಯಕತ್ವ ಬದಲಾವಣೆ ಬಿಕ್ಕಟ್ಟು ಮಧ್ಯೆಯೇ ಬಿಎಸ್​ವೈ ಸರ್ಕಾರದ ವತಿಯಿಂದ ಇಂದು ಸಾಧನಾ ಸಮಾವೇಶ ಆಯೋಜನೆ ಆಗಿದ್ದು, ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಿಎಸ್​​ವೈ, ತಮ್ಮ ಹಿಂದಿನ ಹೋರಾಟ ನೆನಪುಗಳನ್ನು ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾರೆ.

ತಮ್ಮ ಹೋರಾಟದ ದಿನಗಳನ್ನು ಭಾಷಣದ ವೇಳೆ ನೆನಪಿಸಿದ ಸಿಎಂ ಬಿಎಸ್​ವೈ ಅವರು, ನಾನೊಬ್ಬನೇ ವಿಧಾನಸಭೆಯೊಳಗೆ ಹೋರಾಡಿದ್ದೇನೆ.. ನನ್ನ ಕರ್ತವ್ಯವನ್ನ ಮಾಡಿದ್ದೇನೆ.. ನನಗೆ ತೃಪ್ತಿ ಸಮಾಧಾನವಿದೆ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಸಂಘದ ಕಾರ್ಯಕರ್ತನಾಗಿ ಕಾರ್ಯ ಪ್ರಾರಂಭಸಿದೆ. ಪುರಸಭೆಯಿಂದ ಗೆದ್ದು ಅಧ್ಯಕ್ಷನಾದೆ. ಆಗ ಮನೆಯಿಂದ ಕಚೇರಿಗೆ ದಾರಿ ಮದ್ಯದಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು.. ಮುಗಿದೇ ಹೋದೆ ಅಂತ ಕೈ ಮುಗಿದರು. ಬದುಕಿದ್ದರೆ ನಾಡಿನ ಜನತೆಗೆ ನನ್ನ ಬದುಕನ್ನ ಮೀಡಲಿದಡ್ತೇನೆ ಅಂದಿದ್ದೆ. ಆ ಸಮಾಧಾನ ನನಗಿದೆ.. ರೈತಪರ ಹೋರಾಟ ದಲಿತರ ಹೋರಾಟಕ್ಕಾಗಿ ನಾನು ಹೋರಾಡಿದ್ದೇನೆ.

ಶಿವಮೊಗ್ಗದಲ್ಲಿ 50-60 ಸಾವಿರ ಜನರನ್ನ ಸೇರಿಸಿದ್ದೆ ರಾಜನಾಥ ಸಿಂಗ್ ಹೆಮ್ಮೆ ಪಟ್ಟಿದ್ದರು.. ಕರ್ನಾಟಕ ರಾಜ್ಯದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಿದ ಪರಿಣಾಮ ಈ ಸ್ಥಾನದಲ್ಲಿದ್ದೇನೆ.

ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಿದೆ ದೆಹಲಿಗೆ ಬರಲ್ಲ ಅಂತ ಹೇಳಿದೆ. ಆ ಸಮಯದಲ್ಲಿ ವಾಜಪೇಯಿ, ಅಡ್ವಾಣಿ, ಜೋಶಿ ಇವರ ಕಾರ್ಯಕ್ರಮದಲ್ಲಿ 200-300 ಜನ ಸೇರ್ತಾ ಇರಲಿಲ್ಲ.. ಈ ಸಮಯದಲ್ಲಿ ನಾಡನಾದ್ಯಂತ ಹೋರಾಟ ಮಾಡಿದೆ. ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಲವರು ಜಾತಿಯ ವಿಷಬೀಜ ಬಿತ್ತಿದರೂ ಸಹ ಜನ ನಮ್ಮನ್ನ ಕೈಬಿಡಲಿಲ್ಲ.

ಈ ಸ್ಥಾನದಲ್ಲಿರುವುದಕ್ಕೆ ಲಕ್ಷಾಂತರ ಕಾರ್ಯಕರ್ತರು ಕಾರಣ.. ಪ್ರಧಾನಿ ಮೋದಿಜಿಯವರು, ಕೇಂದ್ರ ಸರ್ಕರ, ಅಮಿತ್ ಶಾ, ನಡ್ಡಾಜೀ ಎಲ್ಲರೂ 75 ವರ್ಷ ದಾಟಿದ ಯಾವುದೇ ವ್ಯಕ್ತಿಗೆ ಸ್ಥಾನಮಾನ ಕೊಡಲ್ಲ ಅಂತ ನಿರ್ಧಾರ ತಗೊಂ್ರು ಆದ್ರೆ ನನಗೆ ಅವಕಾಶ ಮಾಡಿಕೊಟ್ರು.. 2 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ರು.

ಬೈಸಿಕಲ್​​ನಲಲ್ಲಿ ಓಡಾಡಿ ಕೆಲಸ ಮಾಡಿದ್ದೇನೆ.. ಈಗ ನನಗೆ ಆಶ್ವರ್ಯವಾಗುತ್ತೆ.. ಈಗ ಪಕ್ಷ ಸಧೃಡವಾಗಿ ಬೆಳೆದಿದೆ. ಈಶ್ವರಪ್ಪ ಇತರರು ಒಟ್ಟಾಗಿ ಸೇರಿ ಕೆಲಸ ಮಾಡಿದ್ದು ಅಧಿಕಾರಕ್ಕೆ ಬರಲು ಸಾಧ್ಯವಾಯ್ತು.

ದೇವರ ದಯೆ, ಎಲ್ಲರ ಸಹಕಾರದಿಂದ ಬದಲಾವಣೆ ತರಲು ಸಹಕಾರವಾಯ್ತು.. ಇನ್ನು ಮುಂದೆಯೂ ರಾಜ್ಯವನ್ನು ಮುನ್ನಡೆಗೆ ಕರೆದೊಯ್ಯುವ ಕೆಲಸ ಮಾಡಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ. ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ.

The post ಸಾಧನಾ ಸಮಾವೇಶದ ಭಾಷಣದ ವೇಳೆ ಕಣ್ಣೀರಿಟ್ಟ ಸಿಎಂ ಬಿಎಸ್​​ವೈ appeared first on News First Kannada.

Source: newsfirstlive.com

Source link