ತುಂಗಭದ್ರಾ ಡ್ಯಾಂನಿಂದ 46 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.. ಹಂಪಿ ಸ್ಮಾರಕಗಳು ಜಲಾವೃತ

ತುಂಗಭದ್ರಾ ಡ್ಯಾಂನಿಂದ 46 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.. ಹಂಪಿ ಸ್ಮಾರಕಗಳು ಜಲಾವೃತ

ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ಹಂಪಿ ನದಿ ಪಾತ್ರದ ಸ್ಮಾರಕಗಳು ಜಲಾವೃತಗೊಂಡಿವೆ.

blank

ಇದನ್ನೂ ಓದಿ: ಪ್ರವಾಹದ ಸುಳಿಗೆ ಸಿಲುಕಿದ ವಾನರ ಸೈನ್ಯ.. 4 ದಿನದಿಂದ ಆಹಾರ ಇಲ್ಲದೇ ಪರದಾಟ

ತುಂಗಭದ್ರಾ ಜಲಾಶಯದಿಂದ 46 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದು, ಹಂಪಿಯ ವೈದಿಕ ಮಂಟಪ, ಸ್ನಾನಘಟ್ಟ, ಕೋಟಿಲಿಂಗ, ಪುರಂದರ ದಾಸರ ‌ಮಂಟಪ‌‌ ಮುಳಗಡೆಯಾಗಿದೆ. ಇನ್ನು ಚಕ್ರತೀರ್ಥ ಕೋದಂಡರಾಮ ಸ್ವಾಮಿ ದೇಗುಲದ ಮುಂಭಾಗಕ್ಕೂ ನದಿ ನೀರು ಬಂದಿದ್ದು ಮಳುಗಡೆ ಭೀತಿಯಲ್ಲಿವೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಜಿಲ್ಲಾಡಳಿತ ಬೋಟ್​ ಸಂಚಾರಕ್ಕೆ ನಿರ್ಬಂಧ ಹೇರಿದ್ದು ನದಿ ತಟಕ್ಕೆ ಪ್ರವಾಸಿಗರು ತೆರಳದಂತೆ ಎಚ್ಚರಿಕೆ ನೀಡಿದೆ.

The post ತುಂಗಭದ್ರಾ ಡ್ಯಾಂನಿಂದ 46 ಸಾವಿರ ಕ್ಯೂಸೆಕ್ ನೀರು ಬಿಡುಗಡೆ.. ಹಂಪಿ ಸ್ಮಾರಕಗಳು ಜಲಾವೃತ appeared first on News First Kannada.

Source: newsfirstlive.com

Source link