ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡಲಿದ್ದೇನೆ- ಬಿಎಸ್​ವೈ

ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡಲಿದ್ದೇನೆ- ಬಿಎಸ್​ವೈ

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಸಾಧನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಭಾವುಕರಾದರು.. ನಂತರ ರಾಜೀನಾಮೆ ಘೋಷಿಸಿದ ಬಿಎಸ್​ವೈ ರಾಜಭವನಕ್ಕೆ ಹೋಗಿ ರಾಜೀನಾಮೆ ಕೊಡಲು ತೀರ್ಮಾನಿಸಿದ್ದೇನೆ. ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡಲಿದ್ದೇನೆ ಎಂದರು.

75 ವರ್ಷ ದಾಟಿದ ಯಾವುದೇ ವ್ಯಕ್ತಿಗೂ ಪಕ್ಷದಲ್ಲಿ ಸ್ಥಾನ ಇಲ್ಲ.. ಆದ್ರೆ ಯಡಿಯೂರಪ್ಪನ ಬಗ್ಗೆ ಪ್ರೀತಿ ಇಟ್ಟು ಅವಕಾಶ ಮಾಡಿಕೊಟ್ಟರು. ಪ್ರೀತಿ, ನಂಬಿಕೆ ಇಟ್ಟು ನನಗೆ ಎರಡು ವರ್ಷ ಅವಕಾಶ ನೀಡಿದ್ದರು. ನಡ್ಡಾ, ಅಮಿತ್ ಶಾರವರಿಗೆ ಶಬ್ಧಗಳಲ್ಲಿ ಅಭಿನಂದನೆ ಸಲ್ಲಿಸಲಾಗಲ್ಲ. ಮುಂದೆಯೂ ನಾವೆಲ್ಲರೂ ಒಗ್ಗಟ್ಟಿನೊಂದಿಗೆ ಕೆಲಸ ಮಾಡೋಣ ಎಂದರು

The post ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡಲಿದ್ದೇನೆ- ಬಿಎಸ್​ವೈ appeared first on News First Kannada.

Source: newsfirstlive.com

Source link