ರಾಜೀನಾಮೆ ನಿರ್ಧಾರಕ್ಕೂ ಮುನ್ನ ಒಲಂಪಿಕ್ಸ್​ ಕ್ರೀಡಾಪಟುಗಳಿಗೆ ಬಹುಮಾನ ಘೋಷಿಸಿದ ಸಿಎಂ

ರಾಜೀನಾಮೆ ನಿರ್ಧಾರಕ್ಕೂ ಮುನ್ನ ಒಲಂಪಿಕ್ಸ್​ ಕ್ರೀಡಾಪಟುಗಳಿಗೆ ಬಹುಮಾನ ಘೋಷಿಸಿದ ಸಿಎಂ

ಬೆಂಗಳೂರು: ಟೋಕಿಯೋ ಒಲಂಪಿಕ್ಸ್​ನಲ್ಲಿ ಪದಕ ಗಳಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಭರ್ಜರಿ ಬಹುಮಾನವನ್ನು ಘೋಷಿಸಿದ್ದಾರೆ.

ಇಂದು ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು ಚಿನ್ನದ ಪದಕ ಗೆದ್ದವರಿಗೆ 5 ಕೋಟಿ, ಬೆಳ್ಳಿ ಪದಕ ಗೆದ್ದವರಿಗೆ 3 ಕೋಟಿ, ಕಂಚಿನ ಪದಕ ಗೆದ್ದವರಿಗೆ 2 ಕೋಟಿ, ನೀಡುವುದಾಗಿ ಘೋಷಿಸಿದ್ದಾರೆ.

ಮತ್ತು ಪದಕ ಗೆಲ್ಲುವ ಇತರೆ ರಾಜ್ಯದ ಕ್ರೀಡಾಪಟುಗಳಿಗೂ ಸಹ ಬಹುಮಾನ ಘೋಷಿಸಿದ್ದು ಚಿನ್ನದ ಪದಕ ಗೆದ್ದವರಿಗೆ 15 ಲಕ್ಷ, ಬೆಳ್ಳಿ ಗೆದ್ದವರಿಗೆ 10 ಲಕ್ಷ, ಕಂಚಿನ ಪದಕ ಗೆದ್ದವರಿಗೆ 5 ಲಕ್ಷ ನೀಡುವುದಾಗಿ ಹೇಳಿದ್ದಾರೆ.

The post ರಾಜೀನಾಮೆ ನಿರ್ಧಾರಕ್ಕೂ ಮುನ್ನ ಒಲಂಪಿಕ್ಸ್​ ಕ್ರೀಡಾಪಟುಗಳಿಗೆ ಬಹುಮಾನ ಘೋಷಿಸಿದ ಸಿಎಂ appeared first on News First Kannada.

Source: newsfirstlive.com

Source link