ದಕ್ಷಿಣದಲ್ಲಿ ಮೊದಲ ಬಾರಿ ಕಮಲ ಅರಳಿಸಿದ ಸಿಎಂ ಯಡಿಯೂರಪ್ಪ ರಾಜೀನಾಮೆ ಸಲ್ಲಿಕೆ

ದಕ್ಷಿಣದಲ್ಲಿ ಮೊದಲ ಬಾರಿ ಕಮಲ ಅರಳಿಸಿದ ಸಿಎಂ ಯಡಿಯೂರಪ್ಪ ರಾಜೀನಾಮೆ ಸಲ್ಲಿಕೆ

ಬೆಂಗಳೂರು: ಸಾಧನಾ ಸಮಾವೇಶದಲ್ಲಿ ರಾಜೀನಾಮೆ ಘೋಷಿಸಿದ ಕೆಲವೇ ಹೊತ್ತಿನಲ್ಲಿ ಬಿ.ಎಸ್. ಯಡಿಯೂರಪ್ಪ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.

ಭಾಷಣದ ವೇಳೆ ತಮ್ಮ ಹೋರಾಟದ ದಿನಗಳನ್ನು ನೆನಪಿಸಿದ ಸಿಎಂ ಬಿಎಸ್​ವೈ ಅವರು, ನಾನೊಬ್ಬನೇ ವಿಧಾನಸಭೆಯೊಳಗೆ ಹೋರಾಡಿದ್ದೇನೆ.. ನನ್ನ ಕರ್ತವ್ಯವನ್ನ ಮಾಡಿದ್ದೇನೆ.. ನನಗೆ ತೃಪ್ತಿ ಸಮಾಧಾನವಿದೆ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಸಂಘದ ಕಾರ್ಯಕರ್ತನಾಗಿ ಕಾರ್ಯ ಪ್ರಾರಂಭಸಿದೆ. ಪುರಸಭೆಯಿಂದ ಗೆದ್ದು ಅಧ್ಯಕ್ಷನಾದೆ. ಆಗ ಮನೆಯಿಂದ ಕಚೇರಿಗೆ ತೆರಳುವ ದಾರಿ ಮದ್ಯದಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು.. ಮುಗಿದೇ ಹೋದೆ ಅಂತ ಕೈ ಮುಗಿದರು. ಬದುಕಿದ್ದರೆ ನಾಡಿನ ಜನತೆಗೆ ನನ್ನ ಬದುಕನ್ನ ಮೀಡಲಿಸಿಡ್ತೇನೆ ಅಂದಿದ್ದೆ. ಆ ಸಮಾಧಾನ ನನಗಿದೆ.. ರೈತಪರ ಹೋರಾಟ ದಲಿತರ ಹೋರಾಟಕ್ಕಾಗಿ ನಾನು ಹೋರಾಡಿದ್ದೇನೆ.

ಶಿವಮೊಗ್ಗದಲ್ಲಿ 50-60 ಸಾವಿರ ಜನರನ್ನ ಸೇರಿಸಿದ್ದೆ ರಾಜನಾಥ ಸಿಂಗ್ ಹೆಮ್ಮೆ ಪಟ್ಟಿದ್ದರು.. ಕರ್ನಾಟಕ ರಾಜ್ಯದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಿದ ಪರಿಣಾಮ ಈ ಸ್ಥಾನದಲ್ಲಿದ್ದೇನೆ. ನಾನು ಅಧಿಕಾರದಲ್ಲಿದ್ದಾಗಲೆಲ್ಲಾ ಅಗ್ನಿಪರೀಕ್ಷೆಗಳನ್ನ ಎದುರಿಸಿದ್ದೇನೆ ಎಂದರು.

The post ದಕ್ಷಿಣದಲ್ಲಿ ಮೊದಲ ಬಾರಿ ಕಮಲ ಅರಳಿಸಿದ ಸಿಎಂ ಯಡಿಯೂರಪ್ಪ ರಾಜೀನಾಮೆ ಸಲ್ಲಿಕೆ appeared first on News First Kannada.

Source: newsfirstlive.com

Source link