ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಜಯಂತಿ ಅಂತಿಮ ದರ್ಶನ ವ್ಯವಸ್ಥೆ

ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಜಯಂತಿ ಅಂತಿಮ ದರ್ಶನ ವ್ಯವಸ್ಥೆ

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅವರು ಇಂದು ವಿಧಿವಶರಾಗಿದ್ದು, ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇಂದು ಮಧ್ಯಾಹ್ನ 12 ಗಂಟೆಯಿಂದ 4 ಗಂಟೆವರೆಗೂ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಸಾಯಂಕಾಲ 5:30ಕ್ಕೆ ಅಂತಿಮ ನಮನ ಸಲ್ಲಿಸಿ ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತೆ ಎಂದು ನಟಿ ತಾರಾ ತಿಳಿಸಿದ್ದಾರೆ.

blank

ಬೆಳಗಿನ ಜಾವ ಮೂರು-ನಾಲ್ಕು ಗಂಟೆ ವೇಳೆ ಅಮ್ಮ ಅವರು ಇನ್ನಿಲ್ಲ ಅಂತಾ ಗೊತ್ತಾಯ್ತು. ನಾನು ಊರಿನಲ್ಲಿ ಇರಲಿಲ್ಲ. ಕಳೆದ ವರ್ಷ 40 ದಿನ ಆಸ್ಪತ್ರೆಯಲ್ಲಿ ಇದ್ದರೂ, ಆದರೆ ಅಂದು ಜೀವದ ಜೊತೆಗಿನ ಹೋರಾಟದಲ್ಲಿ ಗೆದ್ದು ಬಂದಿದ್ದರು. ಕಳೆದ 3-4 ವರ್ಷಗಳಿಂದ ಅವರ ಹೋರಾಟ ನಡೆಸುತ್ತಿದ್ದರು. ಆದರೆ ಅವರ ಕುಟುಂಬದೊಂದಿಗೆ ಇರುವಾಗಲೇ ನಿದ್ದೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇಡೀ ಚಿತ್ರರಂಗವೇ ನಮಗೆ ಕುಟುಂಬವಾಗಿತ್ತು. ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಹೇಳಿದರು.

The post ರವೀಂದ್ರ ಕಲಾಕ್ಷೇತ್ರದಲ್ಲಿ ನಟಿ ಜಯಂತಿ ಅಂತಿಮ ದರ್ಶನ ವ್ಯವಸ್ಥೆ appeared first on News First Kannada.

Source: newsfirstlive.com

Source link