ಸಿಎಂ ಸ್ಥಾನದ ಪದತ್ಯಾಗ ಮಾಡುತ್ತಲೇ ಶಿಕಾರಿಪುರ ಜನತೆಗೆ ಕೃತಜ್ಞತೆ ಸಲ್ಲಿಸಿದ ಬಿ.ಎಸ್. ಯಡಿಯೂರಪ್ಪ

ಸಿಎಂ ಸ್ಥಾನದ ಪದತ್ಯಾಗ ಮಾಡುತ್ತಲೇ ಶಿಕಾರಿಪುರ ಜನತೆಗೆ ಕೃತಜ್ಞತೆ ಸಲ್ಲಿಸಿದ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ರಾಜಭವನದಲ್ಲಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಹಂಗಾಮಿ ಸಿಎಂ ಬಿ ಎಸ್ ಯಡಿಯೂರಪ್ಪ ಮಾತನಾಡಿ ಈ ಸಮಯದಲ್ಲಿ ನಮ್ಮ ನಾಯಕರು, ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ.. ವಿಶೇಷವಾಗಿ ಶಿಕಾರಿಪುರದ ಜನರಿಗೆ ಈ ಸಮಯದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. 75 ವರ್ಷ ದಾಟಿದವರಿಗೆ ಈವರೆಗೆ ಅವಕಾಶ ಕೊಟ್ಟಿಲ್ಲ.. ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ಮಾಡಿಕೊಟ್ರು.. ಹೀಗಾಗಿ ಕೃತಜ್ಞತೆ ಸಲ್ಲಿಸ್ತೇನೆ.. 2 ತಿಂಗಳ ಹಿಂದೆಯೇ ರಾಜೀನಾಮೆಗೆ ನಿ್ಧರಿಸಿದ್ದೆ.. ಇಂದು ಸಾಧನಾ ಸಮಾವೇಶದ ಹಿನ್ನೆಲೆ ಇಂದು ರಾಜೀನಾಮೆ ಸಲ್ಲಿಸಿದ್ದೇನೆ. ಈ ವೇಳೆ ರಾಜ್ಯದ ಜನತೆಗೆ ಶಿಕಾರಿಪುರದ ಜನತೆಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

The post ಸಿಎಂ ಸ್ಥಾನದ ಪದತ್ಯಾಗ ಮಾಡುತ್ತಲೇ ಶಿಕಾರಿಪುರ ಜನತೆಗೆ ಕೃತಜ್ಞತೆ ಸಲ್ಲಿಸಿದ ಬಿ.ಎಸ್. ಯಡಿಯೂರಪ್ಪ appeared first on News First Kannada.

Source: newsfirstlive.com

Source link