ಬಿಎಸ್​​ವೈ ರಾಜೀನಾಮೆ ಬಳಿಕ ಭಾವುಕರಾದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ಬಿಎಸ್​​ವೈ ರಾಜೀನಾಮೆ ಬಳಿಕ ಭಾವುಕರಾದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ಬೆಂಗಳೂರು: ಬಿಎಸ್​​ ಯಡಿಯೂರಪ್ಪ ಅವರು ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ ಎಂದು ರಾಜ್ಯಪಾಲರ ಭೇಟಿಯ ಬಳಿಕ ಸ್ಪಷ್ಟಪಡಿಸಿದರು. ಆದರೆ ಬಿಎಸ್​ವೈ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರೆ, ಹಿಂದೆ ನಿಂತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಭಾವುಕರಾಗಿದ್ದು ಕಂಡು ಬಂತು.

ಬಿಎಸ್​​ವೈ ರಾಜೀನಾಮೆ ಕುರಿತು ಟ್ವೀಟ್​ ಮಾಡಿರುವ ರೇಣುಕಾಚಾರ್ಯ ಅವರು, ದಶಕಗಳ ನಿಮ್ಮ(BSY)ಸಂಘಟನೆ ಮತ್ತು ರಾಜಕೀಯ ಸೇವೆ ಲಕ್ಷಾಂತರ ಕಾರ್ಯಕರ್ತರು ಮತ್ತು ಅನೇಕ ನಾಯಕರನ್ನು ಸೃಷ್ಟಿಸಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಕೊಡುಗೆ ಅಪಾರ. ಮುಂದೆಯು ನಿಮ್ಮ ಮಾರ್ಗದರ್ಶನ ನಮಗೆಲ್ಲರಿಗು ಇರಲೇಬೇಕು.

ನನ್ನ ರಾಜಕೀಯ ಜೀವನದ ಆದಿಯಿಂದ ಇಂದಿನವರೆಗೆ ಯಡಿಯೂರಪ್ಪಾಜಿ ಜೊತೆಯ ನನ್ನ ಪಯಣದ ಅತ್ಯಂತ ಬೇಸರದ ದಿನ ಇಂದು ಎಂದು ಬರೆದುಕೊಂಡಿದ್ದಾರೆ.

The post ಬಿಎಸ್​​ವೈ ರಾಜೀನಾಮೆ ಬಳಿಕ ಭಾವುಕರಾದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ appeared first on News First Kannada.

Source: newsfirstlive.com

Source link