ಬಿಎಸ್​ವೈ ಸೇವೆ ಅಗತ್ಯವಿತ್ತು, ಆದ್ರೆ ಹೈಕಮಾಂಡ್​ ನಿರ್ಧಾರದಂತೆ ನಡೆದುಕೊಳ್ತೇವೆ -ಬಿ.ಸಿ.ಪಾಟೀಲ್​

ಬಿಎಸ್​ವೈ ಸೇವೆ ಅಗತ್ಯವಿತ್ತು, ಆದ್ರೆ ಹೈಕಮಾಂಡ್​ ನಿರ್ಧಾರದಂತೆ ನಡೆದುಕೊಳ್ತೇವೆ -ಬಿ.ಸಿ.ಪಾಟೀಲ್​

ಬೆಂಗಳೂರು: ಬಿಎಸ್​ ಯಡಿಯೂರಪ್ಪ ಅವರ ಸೇವೆ ರಾಜ್ಯಕ್ಕೆ ಇನ್ನೂ ಅಗತ್ಯವಿತ್ತು. ಆದರೆ ಹೈಕಮಾಂಡ್​ ನಿರ್ಧಾರದಂತೆ ತಲೆಭಾಗಿದ್ದಾರೆ ಎಂದು ಬಿ.ಸಿ.ಪಾಟೀಲ್​ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್ ಅವರು, ಬಿಜೆಪಿ ಕಾರ್ಯಕರ್ತರಾಗಿ ಯಡಿಯೂರಪ್ಪ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅವರ ಸೇವೆ ಅಗತ್ಯವಿತ್ತು ಅನಿಸದರೂ ವರಿಷ್ಠ ತೀರ್ಮಾನದಂತೆ ನಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಪಕ್ಷದಲ್ಲಿ ವಲಸಿಗರು ಎಂಬ ಪ್ರಶ್ನೆ ಇಲ್ಲ. ನಾವು ವೈಯುಕ್ತಿಕವಾಗಿ ಯಾವುದೇ ನಿರ್ಧಾರ ಮಾಡೋದಿಲ್ಲ. ಹೈಕಮಾಂಡ್ ಏನು ಹೇಳುತ್ತೆ ಅಂತೆಯೇ ನಾವು ನಡೆದುಕೊಳ್ಳುತ್ತೇವೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಅದರದ್ದೇ ತತ್ವ, ಸಿದ್ಧಾಂತಗಳನ್ನು ಹೊಂದಿದೆ. ನಾವು ಬಂದ ಮೇಲೆ ಸರ್ಕಾರ ರಚನೆ ಆಯ್ತು. ನಮ್ಮನ್ನು ಮನೆ ಮಕ್ಕಳಂತೆ ನಡೆಸಿಕೊಂಡಿದ್ದಾರೆ. ಪಕ್ಷ ತನ್ನ ಘಟನೆ, ಗೌರವವನ್ನು ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದರು.

The post ಬಿಎಸ್​ವೈ ಸೇವೆ ಅಗತ್ಯವಿತ್ತು, ಆದ್ರೆ ಹೈಕಮಾಂಡ್​ ನಿರ್ಧಾರದಂತೆ ನಡೆದುಕೊಳ್ತೇವೆ -ಬಿ.ಸಿ.ಪಾಟೀಲ್​ appeared first on News First Kannada.

Source: newsfirstlive.com

Source link