ಕಣ್ಣೀರ ರಾಜೀನಾಮೆ ಯಾಕೆ..? ವೈಫಲ್ಯಕ್ಕೋ.. ಒತ್ತಡಕ್ಕೋ.. ಬ್ಲಾಕ್‌ಮೇಲ್​ಗಾಗಿಯೋ..?- ಕಾಂಗ್ರೆಸ್​ ಪ್ರಶ್ನೆ

ಕಣ್ಣೀರ ರಾಜೀನಾಮೆ ಯಾಕೆ..? ವೈಫಲ್ಯಕ್ಕೋ.. ಒತ್ತಡಕ್ಕೋ.. ಬ್ಲಾಕ್‌ಮೇಲ್​ಗಾಗಿಯೋ..?- ಕಾಂಗ್ರೆಸ್​ ಪ್ರಶ್ನೆ

ಬೆಂಗಳೂರು: ಬಿಜೆಪಿಯ ದುರಾಡಳಿತದಿಂದ ಬೇಸತ್ತ ರಾಜ್ಯದ ಜನತೆ ಬಯಸುತ್ತಿರುವುದು “ನಾಯಕತ್ವ ಬದಲಾವಣೆ” ಅಲ್ಲ “ಸರ್ಕಾರದ ಬದಲಾವಣೆ” ಎಂದು ರಾಜ್ಯ ಕಾಂಗ್ರೆಸ್​ ಆಗ್ರಹಿಸಿದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ​ ಟ್ವೀಟ್ ಮಾಡಿರುವ ಬಿಜೆಪಿ.. ತಾಖತ್ತಿದ್ದರೆ, ನೈತಿಕತೆಯಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ, ರಾಜ್ಯವನ್ನು ಯಾರು ಆಳಬೇಕು ಎನ್ನುವುದನ್ನು ಜನರೇ ನಿರ್ಧರಿಸಲಿ.

ಬಿಎಸ್​ ಯಡಿಯೂರಪ್ಪ ಅವರ ರಾಜೀನಾಮೆ ವೈಫಲ್ಯಕ್ಕಾಗಿಯೇ? ಒತ್ತಡಕ್ಕಾಗಿಯೇ? ಅಸಹಕಾರಕ್ಕಾಗಿಯೇ? ಬೆದರಿಕೆಗಾಗಿಯೇ? ಬ್ಲಾಕ್‌ಮೇಲ್‌ಗಾಗಿಯೇ? ಯಾವ ಕಾರಣಕ್ಕಾಗಿ ಕಣ್ಣೀರಿನೊಂದಿಗೆ ರಾಜೀನಾಮೆ ನೀಡಿದ್ದು ಎನ್ನುವುದನ್ನ ರಾಜ್ಯದ ಜನತೆಗೆ ತಿಳಿಸುವಿರಾ ಎಂದು ಟ್ವೀಟ್ ಮಾಡಿದೆ. ಸಮರ್ಪಕ ಆಡಳಿತ ನಡೆಸಲು ನಿಮಗೆ ಯೋಗ್ಯತೆ ಒದಗಿಬರುವುದು ಯಾವಾಗ ಹೇಳುವಿರಾ ಎಂದು ಕೂಡ ಕರ್ನಾಟಕ ಬಿಜೆಪಿಗೆ ಪ್ರಶ್ನೆ ಮಾಡಿದೆ.

The post ಕಣ್ಣೀರ ರಾಜೀನಾಮೆ ಯಾಕೆ..? ವೈಫಲ್ಯಕ್ಕೋ.. ಒತ್ತಡಕ್ಕೋ.. ಬ್ಲಾಕ್‌ಮೇಲ್​ಗಾಗಿಯೋ..?- ಕಾಂಗ್ರೆಸ್​ ಪ್ರಶ್ನೆ appeared first on News First Kannada.

Source: newsfirstlive.com

Source link