‘ಅಂದು ಬಸವಣ್ಣ.. ಇಂದು ಯಡಿಯೂರಪ್ಪ’- 12ನೇ ಶತಮಾನದ ಘಟನೆ ನೆನಪಿಸಿದ ಸತೀಶ್ ಜಾರಕಿಹೊಳಿ

‘ಅಂದು ಬಸವಣ್ಣ.. ಇಂದು ಯಡಿಯೂರಪ್ಪ’- 12ನೇ ಶತಮಾನದ ಘಟನೆ ನೆನಪಿಸಿದ ಸತೀಶ್ ಜಾರಕಿಹೊಳಿ

ಬೆಳಗಾವಿ: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ವಿಚಾರವಾಗಿ ಗೋಕಾಕ್​ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಬಿಜೆಪಿ ಪಕ್ಷದ ಆರಂತರಿಕ ವಿಚಾರ.. ಆದರೆ ಅಧಿಕಾರದಿಂದ ಕೆಳಗೆ ಇಳಿಸುವ ರೀತಿ ಸರಿಯಲ್ಲ. ಪಕ್ಷದಿಂದ ಯಡಿಯೂರಪ್ಪ ಮೇಲೆ ಒತ್ತಡ ಹಾಕಲಾಗಿದೆ. ಅದು ಕೆಟ್ಟ ಬೆಳವಣಿಗೆ ಅನಿಸುತ್ತಿದೆ. ಭಾವುಕರಾಗಿ ಯಡಿಯೂರಪ್ಪ ಭಾಷಣ ಮಾಡಿದ್ರು. ಅತ್ಯಂತ ಪ್ರಭಾವಿ ನಾಯಕ ಭಾವುಕರಾಗಿ ಮಾತನಾಡಿದ್ದಾರೆ. ಅವರಿಗೆ ಗೌರವಯುತವಾಗಿ ಹೋಗಲು ಅವಕಾಶ ಮಾಡಿಕೊಡಬೇಕಿತ್ತು. ಒತ್ತಡ ತಂತ್ರದಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಿಂದ ಯಾವುದೇ ಒತ್ತಡವಿಲ್ಲ.. ನಾನೇ ವೈಯಕ್ತಿಕವಾಗಿ ರಾಜೀನಾಮೆ ಸಲ್ಲಿಸಿದ್ದೇನೆ

ಇದು 12ನೇ ಶತಮಾನವನ್ನು ನೆನಪಿಸುತ್ತಿದೆ.. ಮನುವಾದಿಗಳು ಬಸವಣ್ಣನನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದರು. ಬಸವಣ್ಣ ಸಹ ಮಂತ್ರಿಯಾಗಿ ಇದ್ದರು. ಸಾವಿರ ವರ್ಷಗಳ ಹಿಂದೆ ಯಡಿಯೂರಪ್ಪಗೆ ಇದು ಮರುಕಳಿಸಿದೆ. ಅಂದು ಮನುವಾದಿಗಳು ಯಶಸ್ವಿಯಾಗಿದ್ದರು, ಇಂದೂ ಯಶಸ್ವಿಯಾಗಿದ್ದಾರೆ. ಮನುವಾದಿಗಳ ವಿರುದ್ಧ ಯಡಿಯೂರಪ್ಪ ಹೋರಾಟ ಮಾಡಬೇಕು. ಒತ್ತಡದಿಂದ ಕೆಳಗೆ ಇಳಿಸಿದ್ದನ್ನ ಯಾರೂ ಸಹಿಸಲು ಸಾಧ್ಯವಿಲ್ಲ. ಬಸವಣ್ಣ ವಿರುದ್ಧ ಆಗಿರೋ ಪಿತೂರಿ ಯಡಿಯೂರಪ್ಪ ಅವರ ವಿರುದ್ಧವೂ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಲಾಭ, ನಷ್ಟ ಈಗಲೇ ಹೇಳೋಕೆ ಆಗಲ್ಲ. ಇಷ್ಟು ಅವಮಾನಗೊಳಿಸಬಾರದಿತ್ತು ಎಂಬುದು ನಮ್ಮ ಅಭಿಪ್ರಾಯ ಎಂದಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ಬಳಿಕ ಶಿಕಾರಿಪುರ ಜನತೆ ಬಗ್ಗೆ ಬಿಎಸ್​ವೈ ಹೇಳಿದ್ದೇನು..?

The post ‘ಅಂದು ಬಸವಣ್ಣ.. ಇಂದು ಯಡಿಯೂರಪ್ಪ’- 12ನೇ ಶತಮಾನದ ಘಟನೆ ನೆನಪಿಸಿದ ಸತೀಶ್ ಜಾರಕಿಹೊಳಿ appeared first on News First Kannada.

Source: newsfirstlive.com

Source link