ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಶಾಂತ್​ಗೆ ಕಿಚ್ಚನ ಚಪ್ಪಾಳೆ.. ಭಾವುಕರಾದ ಸಂಬರಗಿ

ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಶಾಂತ್​ಗೆ ಕಿಚ್ಚನ ಚಪ್ಪಾಳೆ.. ಭಾವುಕರಾದ ಸಂಬರಗಿ

ಪ್ರಶಾಂತ್​ ಸಂಬರಗಿ ಮಾಡಿದ್ದೆಲ್ಲ ತಪ್ಪು ಎನ್ನುವ ರೀತಿಯಲ್ಲಿ ಮನೆಯಲ್ಲಿ ಪೋಟ್ರೆಯಾದಂತಿದೆ. ಆದರೆ ಸೋಶಿಯಲ್​ ಮಿಡಿಯಾದಲ್ಲಿ ಮಾತ್ರಾ ಅವರ ಪರವಾಗಿ ಎಲ್ಲರೂ ಬ್ಯಾಟಿಂಗ್ ಮಾಡ್ತಿದ್ದಾರೆ.

ಈಗಾಗಲೇ ಸಾಕಷ್ಟು ಬಾರಿ ತಮ್ಮ ನೇರ ನುಡಿಯ ಮೂಲಕ ಮನೆಯ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಶಾಂತ್​ ಸಂಬರಗಿ ಕಿಚ್ಚನ ಚಪ್ಪಾಳೆಗೆ ಪಾತ್ರವಾಗಿದ್ದಾರೆ.

blank

ಯಾವುದೇ ಟಾಸ್ಕ್​ ಬಂದ್ರು ಪ್ರಶಾಂತ್​ ಅವರ ಇನ್ವಾಲ್ಮೆಂಟ್​ ಇದ್ರು ಕೂಡ ಅವರ ಬಗ್ಗೆ ಒಳ್ಳೆಯ ಒಪಿನಿಯನ್​ ಹೇಳಲ್ಲ ಅಂತಾ ಫ್ಯಾನ್ಸ್​ ಆರೋಪಿಸಿದ್ರು. ಈ ಹಿಂದೆ ಕೂಡ ಪ್ರಶಾಂತ್​ ಅವರಿಗೆ ಕಳಪೆ ನೀಡಿ ಜೈಲಿಗೆ ಕಳುಹಿಸಲಾಗಿತ್ತು. ಮತ್ತೆ ಕಳೆದ ವಾರ ಇದು ರೀಪಿಟ್​ ಆಗಿತ್ತು.

ಈ ಎಲ್ಲದರ ಬಗ್ಗೆ ಅವಲೋಕಿಸಿ ಒಂದು ವಾರದ ಆಟಕ್ಕೆ ನೀಡದೇ ಎಲ್ಲದ್ರ ಬಗ್ಗೆ ಮಾತನಾಡಿದ ಕಿಚ್ಚ, ಎಲ್ಲಾ ಸಾರಿ ಮಾತು ಕೆಟ್ಟದ್ರಲ್ಲಿ ಎಂಡ್​ ಆಗಲ್ಲ, ಇಲ್ಲಿ ಯಾರು ಕೆಟ್ಟವರಿಲ್ಲ, ಹಾಗಂತ ಎಲ್ಲರೂ ಒಳ್ಳೆಯವರೇ ಅಲ್ಲ. ಎಲ್ಲದ್ರಲ್ಲೂ ಒಂದು ದೃಷ್ಟಿ ಕೋನ ಇದೆ. ಎಲ್ಲಾ ಎಮೋಷನ್ಸ್ ಹೊರಗಡೆ ಹಾಕಿ ಅಂತಾ ಕಿವಿ ಮಾತು ಹೇಳ್ತಾರೆ ಸುದೀಪ್​.

ಕಿಚ್ಚಾ ಚಪ್ಪಾಳೆ ನೀಡಿದ ಕ್ಷಣ ಪ್ರಶಾಂತ್​ ಸಂಬರಗಿ ಭಾವುಕರಾದ್ರು. ಇದ್ರಿಂದ ನಂಗೆ ಇನ್ನಷ್ಟೂ ಶಕ್ತಿ ಬಂದಿದೆ.  ಕಳಪೆ ಪಡೆದ ಮೇಲೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ತುಂಬಾ ಖುಷಿಯಾಯ್ತು ಅಂತಾ ಹರ್ಷ ವ್ಯಕ್ತಪಡೆಸಿದ್ರು.

The post ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಶಾಂತ್​ಗೆ ಕಿಚ್ಚನ ಚಪ್ಪಾಳೆ.. ಭಾವುಕರಾದ ಸಂಬರಗಿ appeared first on News First Kannada.

Source: newsfirstlive.com

Source link