ಶ್ರೀಲಂಕಾ ಆಟಗಾರನಿಗೆ ಹಾರ್ದಿಕ್ ಪಾಂಡ್ಯ ಬ್ಯಾಟ್​ ಗಿಫ್ಟ್​ ಕೊಟ್ಟಿದ್ಯಾಕೆ..?

ಶ್ರೀಲಂಕಾ ಆಟಗಾರನಿಗೆ ಹಾರ್ದಿಕ್ ಪಾಂಡ್ಯ ಬ್ಯಾಟ್​ ಗಿಫ್ಟ್​ ಕೊಟ್ಟಿದ್ಯಾಕೆ..?

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಗಮನಾರ್ಹ ಪ್ರದರ್ಶನ ನೀಡದಿದ್ದರೂ, ಕ್ರಿಕೆಟ್ ಅಭಿಮಾನಿಗಳ ಹೃದಯ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು…! ಆಗಾಗ ಸಹಾಯಾಸ್ತ ಚಾಚುತ್ತಾ ಸುದ್ದಿಯಾಗ್ತಿದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ, ಮೊದಲ ಟಿ20  ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ ತಂಡದಲ್ಲಿ ಡೆಬ್ಯು ಮಾಡಿದ್ದ ಆಲ್​ರೌಂಡರ್ ಚಮಿಕಾ ಕರುಣರತ್ನೆಗೆ ಬ್ಯಾಟ್ ಗಿಫ್ಟ್​ ನೀಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಈ ಕುರಿತ ವಿಡಿಯೋವನ್ನ ಇನ್ಸ್​ಟಾಗ್ರಾಮ್​​ನಲ್ಲಿ ಪೋಸ್ಟ್​ ಮಾಡಿರುವ ಚಮಿಕಾ ಕರುಣರತ್ನೆ, ತಮ್ಮ ರೋಲ್​ ಮಾಡೆಲ್​ ಹಾರ್ದಿಕ್ ಪಾಂಡ್ಯರಿಂದ ಬ್ಯಾಟ್ ಗಿಫ್ಟ್​ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಇದೇ ವೇಳೆ ಹಾರ್ದಿಕ್ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿರುವ ಯುವ ಆಟಗಾರ ಚಮಿಕ ಕರುಣರತ್ನೆ, ಈ ದಿನವನ್ನ ಎಂದಿಗೂ ಮರೆಯಲ್ಲ ಎಂದು ಬರೆದುಕೊಂಡಿದ್ದಾರೆ.

 

The post ಶ್ರೀಲಂಕಾ ಆಟಗಾರನಿಗೆ ಹಾರ್ದಿಕ್ ಪಾಂಡ್ಯ ಬ್ಯಾಟ್​ ಗಿಫ್ಟ್​ ಕೊಟ್ಟಿದ್ಯಾಕೆ..? appeared first on News First Kannada.

Source: newsfirstlive.com

Source link