ಟೇಬಲ್​ ಟೆನ್ನಿಸ್​- ಗೆದ್ದು ಕಮಾಲ್​ ಮಾಡಿದ ಶರತ್, 3ನೇ ಸುತ್ತಿಗೆ ಲಗ್ಗೆ

ಟೇಬಲ್​ ಟೆನ್ನಿಸ್​- ಗೆದ್ದು ಕಮಾಲ್​ ಮಾಡಿದ ಶರತ್, 3ನೇ ಸುತ್ತಿಗೆ ಲಗ್ಗೆ

ಟೋಕಿಯೋ ಒಲಿಂಪಿಕ್ಸ್​​​​ನಲ್ಲಿ ಪುರುಷರ ಟೇಬಲ್​ ಟೆನ್ನಿಸ್​​​​ ವಿಭಾಗದಲ್ಲಿ ಭಾರತದ ಶರತ್​ ಕಮಲ್​​​, ಪದಕದ ಭರವಸೆ ಮೂಡಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಪೋರ್ಚುಗಲ್​ನ ಟಿಯಾಗೋ ಪೊಲೊನಿಯಾರನ್ನ ಮಣಿಸಿ, 3ನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಎದುರಾಳಿ ವಿರುದ್ಧ ಮೊದಲ ಸೆಟ್​​ನಿಂದಲೇ ದಿಟ್ಟ ಹೋರಾಟ ನಡೆಸಿದ 39 ವರ್ಷದ ಶರತ್​, 4-2 (2-11 11-8 11-5 9-11 11-6 11-9) ಅಂತರದ ಗೆಲುವು ದಾಖಲಿಸಿದ್ದಾರೆ.

ಮೊದಲ ಸೆಟ್​​​ನಲ್ಲಿ ತೀವ್ರ ಹೋರಾಟ ನಡೆಸಿದ ಶರತ್​, ಮುಂದಿನ ಎರಡು ಸೆಟ್​​ಗಳಲ್ಲಿ ತಿರುಗೇಟು ನೀಡಿ, ಆಟವನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡರು. ಇಷ್ಟಾದರೂ ಪೊಲೊನಿಯಾ ಪೈಪೋಟಿಗೆ ಇಳಿದರಾದರೂ, ಆ ಸ್ಪರ್ಧೆಗೆ ತಮ್ಮ ಅನುಭವವನ್ನ ಉಪಯೋಗಿಸಿ ಎದುರಾಳಿಗೆ ದಿಟ್ಟ ಉತ್ತರ ನೀಡುವಲ್ಲಿ ಯಶಸ್ಸು ಕಂಡರು. ಇನ್ನು ಶರತ್, 3ನೇ ಸುತ್ತಿನಲ್ಲಿ ಪ್ರಸ್ತುತ ಚಾಂಪಿಯನ್ ಚೀನಾದ ಮಾ ಲಾಂಗ್‍ರ ಸವಾಲನ್ನು ಎದುರಿಸಲಿದ್ದಾರೆ.

The post ಟೇಬಲ್​ ಟೆನ್ನಿಸ್​- ಗೆದ್ದು ಕಮಾಲ್​ ಮಾಡಿದ ಶರತ್, 3ನೇ ಸುತ್ತಿಗೆ ಲಗ್ಗೆ appeared first on News First Kannada.

Source: newsfirstlive.com

Source link