BSY ನೆಮ್ಮದಿಯಿಂದ ಇರಲಿ.. ರಾಜೀನಾಮೆ ವಿಚಾರ ಮೊದಲೇ ಗೊತ್ತಿತ್ತು -ಸಿದ್ದರಾಮಯ್ಯ

BSY ನೆಮ್ಮದಿಯಿಂದ ಇರಲಿ.. ರಾಜೀನಾಮೆ ವಿಚಾರ ಮೊದಲೇ ಗೊತ್ತಿತ್ತು -ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೀಗ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರೆ. ಈ ಸಂಬಂಧ ಟ್ವೀಟ್​​ ಮಾಡಿರುವ ಸಿದ್ದರಾಮಯ್ಯ ಅವರು, ಬಿ.ಎಸ್​ ಯಡಿಯೂರಪ್ಪ ಅವರ ಬಗ್ಗೆ ನನಗೆ ಅನುಕಂಪವಿದೆ. ಅವರಿಗೆ ವಯಸ್ಸಾಯ್ತು ಎಂದು ಬಿಜೆಪಿ ಪಕ್ಷದ ದೆಹಲಿ ನಾಯಕರೇ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರ ಮುಂದಿನ ಜೀವನ ಸುಖಕರವಾಗಿರಲಿ, ನೆಮ್ಮದಿ ಸಿಗಲಿ ಎಂದಷ್ಟೇ ನಾನು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನನಗೆ ಬಿ.ಎಸ್​​ ರಾಜೀನಾಮೆ ನೀಡುವ ವಿಚಾರ ಮೊದಲೇ ಗೊತ್ತಿತ್ತು, ಇದು ನಿರೀಕ್ಷಿತವಾದುದು. ನಾನು ಈ ಹಿಂದೆ ಹೇಳಿರುವುದು ನಿಜವಾಗಿದೆ. ಈ ಬಗ್ಗೆ ಸಂಭ್ರಮ ಪಡುವಂತಹದ್ದೇನೂ ಇಲ್ಲ. ಭ್ರಷ್ಟ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಿದಾಗಲೇ ನಾವು ಸಂಭ್ರಮಿಸುವುದು. ಅಂತಹ ದಿನಗಳು ಸದ್ಯದಲ್ಲಿಯೇ ಬರಲಿದೆ ಎಂದು ಮತ್ತೊಂದು ಟ್ವೀಟ್​​ನಲ್ಲಿ ಸಿದ್ದರಾಮಯ್ಯ ಕುಟುಕಿದ್ದಾರೆ.

The post BSY ನೆಮ್ಮದಿಯಿಂದ ಇರಲಿ.. ರಾಜೀನಾಮೆ ವಿಚಾರ ಮೊದಲೇ ಗೊತ್ತಿತ್ತು -ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link