ರಾಜ್ಯಪಾಲರನ್ನು ಭೇಟಿಯಾದ ಸ್ಪೀಕರ್

ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು.

ಈ ಭೇಟಿಯ ವೇಳೆ, ಸ್ಪೀಕರ್ ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಧಾನಸಭಾ ಸಚಿವಾಲಯ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತಂತೆ ವಿವರಿಸಿದ್ದಾರೆ. ಅಲ್ಲದೆ ಇದೊಂದು ಸೌಹಾರ್ದಯುತ ಭೇಟಿ ಎನ್ನಲಾಗಿದೆ.

ಭೇಟಿ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ, ಭಾರತದ ಸಂವಿಧಾನ ಕುರಿತ ಚರ್ಚೆ, ಸಂಸದೀಯ ನಡೆವಳಿಕೆಯಲ್ಲಿ ಮೌಲ್ಯಗಳು ಮತ್ತು ತತ್ವ, ಸಿದ್ಧಾಂತಗಳು ಕುಸಿಯುತ್ತಿರುವ ಕುರಿತು ಚರ್ಚಿಸಿದ್ದಾರೆ ಎಂದು ವಿಧಾನಸಭಾಧ್ಯಕ್ಷರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

The post ರಾಜ್ಯಪಾಲರನ್ನು ಭೇಟಿಯಾದ ಸ್ಪೀಕರ್ appeared first on Public TV.

Source: publictv.in

Source link