ಜೊಲ್ಲೆ ಮೊಟ್ಟೆ ಡೀಲ್: ಸಚಿವೆ ಜೊಲ್ಲೆ, ಶಾಸಕ ಪರಣ್ಣ ರಾಜೀನಾಮೆಗೆ ವಿ.ಎಸ್​. ಉಗ್ರಪ್ಪ ಆಗ್ರಹ

ಜೊಲ್ಲೆ ಮೊಟ್ಟೆ ಡೀಲ್: ಸಚಿವೆ ಜೊಲ್ಲೆ, ಶಾಸಕ ಪರಣ್ಣ ರಾಜೀನಾಮೆಗೆ ವಿ.ಎಸ್​. ಉಗ್ರಪ್ಪ ಆಗ್ರಹ

ಬಳ್ಳಾರಿ: ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದ ಸಚಿವೆ ಜೊಲ್ಲೆ, ಶಾಸಕ ಪರಣ್ಣ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ಆಗ್ರಹಿಸಿದ್ದಾರೆ.

ನಗರದಲ್ಲಿ ಇಂದು  ನ್ಯೂಸ್​ಫಸ್ಟ್​ನ ಜೊತೆ ಮಾತನಾಡಿದ ಅವರು ಸಚಿವೆ ಮತ್ತು ಶಾಸಕರ ಭ್ರಷ್ಟ ಮುಖವನ್ನ ರಾಜ್ಯದ ಜನತೆಗೆ ತೋರಿದ ನ್ಯೂಸ್​ಫಸ್ಟ್​ ತಂಡಕ್ಕೆ ಅಭಿನಂದಿಸಿದ್ದಾರೆ.

blank

ಇನ್ನು ಪ್ರಕರಣದ ಕುರಿತು ಮಾತನಾಡಿ  25 ಲಕ್ಷ ಪಡೆಯೋರು, 1 ಕೋಟಿಗೆ ಡಿಮ್ಯಾಂಡ್​ ಇಡೋರು ರಾಜೀನಾಮೆ ನೀಡಲೇ ಬೇಕೆಂದಿದ್ದಾರೆ. ಇಂದು ಭ್ರಷ್ಟಾಚಾರ ಯತಾ ರಾಜ ತಥಾ ಪ್ರಜಾ ಆಗಿದೆ. ಪ್ರಧಾನಿಯಿಂದ ಮಂತ್ರಿ, ಮಂತ್ರಿಯಿಂದ ಶಾಸಕರವರಿಗೂ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಾಗಿ ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲೇ ಬೇಕು ಎಂದಿದ್ದಾರೆ

The post ಜೊಲ್ಲೆ ಮೊಟ್ಟೆ ಡೀಲ್: ಸಚಿವೆ ಜೊಲ್ಲೆ, ಶಾಸಕ ಪರಣ್ಣ ರಾಜೀನಾಮೆಗೆ ವಿ.ಎಸ್​. ಉಗ್ರಪ್ಪ ಆಗ್ರಹ appeared first on News First Kannada.

Source: newsfirstlive.com

Source link