ಜಸ್​​ಪ್ರಿತ್​ ಬುಮ್ರಾ, ಉಮೇಶ್ ಯಾದವ್ ಮಧ್ಯೆ ಜಂಗಿ ಕುಸ್ತಿ

ಜಸ್​​ಪ್ರಿತ್​ ಬುಮ್ರಾ, ಉಮೇಶ್ ಯಾದವ್ ಮಧ್ಯೆ ಜಂಗಿ ಕುಸ್ತಿ

ಸದ್ಯ ಬೌಲಿಂಗ್​​ ವಿಭಾಗಕ್ಕೆ ಮೇಜರ್​ ಸರ್ಜರಿಗೆ ಟೀಮ್​ ಇಂಡಿಯಾ ಮುಂದಾಗಿದೆ. ಅಭ್ಯಾಸ ಪಂದ್ಯದಲ್ಲಿ ಫ್ಲಾಪ್​ ಶೋ ತೋರಿದ ಈ ಬೌಲರ್​​ನನ್ನ ಬೆಂಚ್​ ಕಾಯಿಸಿ, ಮತ್ತೊಬ್ಬ ಬೌಲರ್​​ಗೆ ಚಾನ್ಸ್​ ನೀಡೋದಕ್ಕೆ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ.

ಈಗಾಗಲೇ ಮೊದಲ ಅಭ್ಯಾಸ ಪಂದ್ಯ ಮುಗಿಸಿರುವ ಟೀಮ್​ ಇಂಡಿಯಾ, 2ನೇ ಅಭ್ಯಾಸ ಪಂದ್ಯಕ್ಕೆ ರೆಡಿಯಾಗ್ತಿದೆ. ಆದರೆ ಅಭ್ಯಾಸ ಪಂದ್ಯದ ಜೊತೆಗೆ ಈ ಹಿಂದಿನ ಪ್ರದರ್ಶನದ ಆಧಾರದ ಮೇಲೆ ಸರಣಿಯ ಮೊದಲೆರಡು ಪಂದ್ಯಗಳ ಆಯ್ಕೆಗೆ ಟೀಮ್ ಇಂಡಿಯಾ ಚಿಂತನೆ ನಡೆಸಿದೆ. ಬೌಲಿಂಗ್​​ ಯುನಿಟ್​ನಲ್ಲಿ ಪ್ರಮುಖ ಬದಲಾವಣೆ​ಗೆ ಮುಂದಾಗಿದ್ದು, ಜಸ್​​ಪ್ರಿತ್​ ಬುಮ್ರಾ ಮತ್ತು ಉಮೇಶ್​ ಯಾದವ್​ ನಡುವೆ ಜಂಗಿ ಕುಸ್ತಿ ಏರ್ಪಟ್ಟಿದೆ.

ಬುಮ್ರಾ ಮತ್ತು ಉಮೇಶ್​ ನಡುವೆ ಸ್ಪರ್ಧೆ ಏರ್ಪಡಲು ಕಾರಣ, ಇಂಗ್ಲೆಂಡ್​ನ ಕೌಂಟಿ ಸೆಲೆಕ್ಟ್​ ಇಲೆವೆನ್​ ವಿರುದ್ಧ ನಡೆದ ಅಭ್ಯಾಸ ಪಂದ್ಯ. ಈ ಪಂದ್ಯದಲ್ಲಿ ಉಮೇಶ್​ ಯಾದವ್​ ಬೊಂಬಾಬ್​ ಬೌಲಿಂಗ್​ ಮಾಡಿದ್ರೆ, ಜಸ್​ಪ್ರಿತ್​ ಬುಮ್ರಾ ಮತ್ತೊಮ್ಮೆ ತೋರಿದ್ದು ಕಳಪೆ ಪ್ರದರ್ಶನ. ಹಾಗಾಗಿ ಬುಮ್ರಾ ಜಾಗಕ್ಕೆ ಉಮೇಶ್​ರನ್ನ ಆಡಿಸೋ ಲೆಕ್ಕಾಚಾರದಲ್ಲಿದೆ ಮ್ಯಾನೇಜ್​ಮೆಂಟ್​.

ಉಮೇಶ್​​ಗೆ ಚಾನ್ಸ್​ ನೀಡೋದಕ್ಕೆ ಕಾರಣವೇನು ಗೊತ್ತಾ..?
ಬುಮ್ರಾ ಅಭ್ಯಾಸ ಪಂದ್ಯದಲ್ಲಿ ಫೆಲ್ಯೂರ್ ಆಗಿರೋದಷ್ಟೆ ಅಲ್ಲ, ಇಂಗ್ಲೆಂಡ್​-ಆಸಿಸ್​ ಸರಣಿ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲೂ ಕಳಪೆ ಪ್ರದರ್ಶನ ತೋರಿದ್ದಾರೆ. ಅದರಲ್ಲೂ ಇಂಗ್ಲೆಂಡ್​ ಪಿಚ್​​ನಲ್ಲಿ ಬುಮ್ರಾ ತೋರಿದ ಫ್ಲಾಪ್​ ಶೋ, ಮ್ಯಾನೇಜ್​ಮೆಂಟ್​ಗೂ ತಲೆ ನೋವು ತರಿಸಿದೆ. ಸದ್ಯ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶಿಸಿದ ಉಮೇಶ್​, ಕಮ್​ಬ್ಯಾಕ್​ ಮಾಡೋ ನಿರೀಕ್ಷೆಯಲ್ಲಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಮ್ಯಾಜಿಕ್​ ಮಾಡಿದ ಉಮೇಶ್​, ಇಂಗ್ಲೆಂಡ್​ ಕಂಡೀಷನ್ಸ್​ ಅನ್ನು ಚೆನ್ನಾಗಿ ಅರಿತಿದ್ದಾರೆ. ಹಾಗೇ ಪೇಸ್​ ಆ್ಯಂಡ್​ ಸ್ವಿಂಗ್​ನಲ್ಲೂ ಬುಮ್ರಾಗಿಂತಲೂ ಉತ್ತಮವಾಗಿಯೇ ಇದೆ. ಹೀಗಾಗಿ ಜಸ್​ಪ್ರಿತ್​ ಬುಮ್ರಾ ಜಾಗಕ್ಕೆ ಉಮೇಶ್​​ರನ್ನೇ ಕಣಕ್ಕಿಳಿಸೋದು ಉತ್ತಮ ಎಂಬ ನಿರ್ಧಾರಕ್ಕೆ ಮ್ಯಾನೇಜ್​ಮೆಂಟ್ ಬಂದಿದೆ.

ಅಭ್ಯಾಸ ಪಂದ್ಯದಲ್ಲಿ ಉಮೇಶ್

  • ಓವರ್ 15
  • ಮೇಡನ್ 07
  • ರನ್ 22
  • ವಿಕೆಟ್ 03

ಅಭ್ಯಾಸ ಪಂದ್ಯದಲ್ಲಿ ಬುಮ್ರಾ

  • ಓವರ್ 15
  • ಮೇಡನ್ 06
  • ರನ್ 29
  • ವಿಕೆಟ್ 01

The post ಜಸ್​​ಪ್ರಿತ್​ ಬುಮ್ರಾ, ಉಮೇಶ್ ಯಾದವ್ ಮಧ್ಯೆ ಜಂಗಿ ಕುಸ್ತಿ appeared first on News First Kannada.

Source: newsfirstlive.com

Source link