ಬಿಎಸ್‍ವೈ ಮೋದಿಯ ಇತ್ತೀಚಿನ ಬಲಿಪಶು: ರಣದೀಪ್ ಸಿಂಗ್ ಸುರ್ಜೆವಾಲಾ

ನವದೆಹಲಿ: ಹಿರಿಯ ಬಿಜೆಪಿ ನಾಯಕರಿಗೆ ಒತ್ತಾಯಪೂರ್ವಕ ರಾಜೀನಾಮೆ ಕೊಡಿಸುತ್ತಿರುವ ಮೋದಿ ಅವರ ಇತ್ತೀಚಿನ ಬಲಿಪಶು ಯಡಿಯೂರಪ್ಪ ಎಂದು ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳ ಆಯ್ಕೆ ಶಾಸಕರ ಇಚ್ಛೆಯ ಪ್ರಕಾರ ನಡೆಯುವುದಿಲ್ಲ. ಬದಲಾಗಿ ದೆಹಲಿಯ ದಬ್ಬಾಳಿಕೆಯ ಪ್ರಕಾರ ನಡೆಯಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದೇ ಅಕ್ರಮವಾಗಿದೆ. ಭ್ರಷ್ಟಾಚಾರ ಹಾಗೂ ಶಾಸಕರ ಪಕ್ಷಾಂತರದಿಂದ ಬಂದಿದ್ದಾಗಿದೆ. ಮೋದಿ ಅವರು ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನ, ಹಿಂಸೆ ರಾಜೀನಾಮೆ ನೀಡುವುದಕ್ಕೆ ಕಾರಣವಾಗಿದ್ದು, ಒತ್ತಾಯಪೂರ್ವಕ ರಾಜೀನಾಮೆ ನೀಡುವ ಸಾಲಿನಲ್ಲಿ ಯಡಿಯೂರಪ್ಪ ಮೋದಿ ಅವರ ಇತ್ತೀಚಿನ ಬಲಿಪಶುವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಬಂಪರ್ ಗಿಫ್ಟ್

ಸುಮಿತ್ರಾ ಮಹಾಜನ್, ಸುಷ್ಮಾ ಸ್ವರಾಜ್, ಉಮಾ ಭಾರತಿ, ಸಿಪಿ ಠಾಕೂರ್, ಎಕೆ ಪಟೇಲ್, ಹರೇನ್ ಪಾಂಡ್ಯ, ಹರೇನ್ ಪಾಠಕ್, ಕಲ್ಯಾಣ್ ಸಿಂಗ್, ಮುಂತಾದವರನ್ನು ಪಕ್ಷದಲ್ಲಿ ಒತ್ತಾಯಪೂರ್ವಕವಾಗಿ ತೆರೆಮರೆಗೆ ಸರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ರವಿಶಂಕರ್ ಪ್ರಸಾದ್, ಹರ್ಷವರ್ಧನ್, ಸುಶೀಲ್ ಮೋದಿ ಅವರನ್ನು ನೇಪಥ್ಯಕ್ಕೆ ಸರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದಾರೆ.

The post ಬಿಎಸ್‍ವೈ ಮೋದಿಯ ಇತ್ತೀಚಿನ ಬಲಿಪಶು: ರಣದೀಪ್ ಸಿಂಗ್ ಸುರ್ಜೆವಾಲಾ appeared first on Public TV.

Source: publictv.in

Source link