ಸೋತರು ದಾಖಲೆ ಬರೆದ ಭವಾನಿ ದೇವಿ; ಒಲಿಂಪಿಕ್ಸ್ ಕತ್ತಿವರಸೆಯಲ್ಲಿ ಇವರ ಸಾಧನೆ ನೋಡಿ

ಸೋತರು ದಾಖಲೆ ಬರೆದ ಭವಾನಿ ದೇವಿ; ಒಲಿಂಪಿಕ್ಸ್ ಕತ್ತಿವರಸೆಯಲ್ಲಿ ಇವರ ಸಾಧನೆ ನೋಡಿ

ನವದೆಹಲಿ: ಚೊಚ್ಚಲ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇದೇ ಮೊದಲ ಬಾರಿಗೆ ಭಾರತದ ಪರ ಸೈಬರ್ ಫೆನ್ಸಿಂಗ್ ಕ್ರೀಡೆಯಲ್ಲಿ ಭಾಗವಹಿಸಿದ ಭವಾನಿ ದೇವಿಯವರು 1ನೇ ಪಂದ್ಯದಲ್ಲಿ ಜಯ ಸಾಧಿಸಿದ್ದರು. ತುನಿಶಿಯಾ ದೇಶದ ನಡಿಯ ಅಝೀಝಿರನ್ನು 15-3 ಅಂತರದಿಂದ ಸೋಲಿಸುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ, ಯಾಕೋ ಎರಡನೇ ಸುತ್ತಿನಲ್ಲಿ ರಿಯೋ ಒಲಿಂಪಿಕ್ಸ್​ನ ಸೆಮಿ ಫೈನಲಿಸ್ಟ್ ಮತ್ತು ವಿಶ್ವದ ನಂ. 3 ಆಟಗಾರ್ತಿ ಮ್ಯಾನೊನ್ ಬ್ರುನೆಟ್​ ವಿರುದ್ಧ ಗೆಲುವು ಸುಲಭವಾಗಿರಲಿಲ್ಲ. ಹೀಗಾಗಿ ಭವಾನಿ ದೇವಿ ಸೇಬರ್ ಫೆನ್ಸಿಂಗ್‍ನ 32ನೇ ಸುತ್ತಿನಲ್ಲಿ ಮ್ಯಾನೊನ್ ಬ್ರುನೆಟ್ ವಿರುದ್ಧ 7-15 ಅಂತರದಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರಬಿದ್ದರೂ ಭವಾನಿ ದೇವಿ ಮಾತ್ರ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಹೌದು, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಭಾರತದ ಫೆನ್ಸಿಂಗ್‌ ಪಟು ಸಿಎ ಭವಾನಿ ದೇವಿ ಇತಿಹಾಸ ಸೃಷ್ಟಿಸಿದ್ದಾರೆ. ಭಾರತದ ಪರ ಫೆನ್ಸಿಂಗ್‌ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್​ಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಸಂಬಂಧ ಟ್ವೀಟ್​​ ಮಾಡಿರುವ ಭವಾನಿ ದೇವಿಯವರು, ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ನನಗೆ ಭಾರತದ ಪರವಾಗಿ ಫೆನ್ಸಿಂಗ್‌ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಆಡಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್​​ ಠಾಕೂರ್​​, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​​ಗೆ ಅನಂತ ಧನ್ಯವಾದಗಳು ಎಂದು ತಿಳಿಸಿದ್ದಾರೆ.

blank

ಇನ್ನು, ಟೋಕಿಯೋ ಒಲಿಂಪಿಕ್ಸ್​ನಲ್ಲಿ ಸೋತರು ದಾಖಲೆ ಬರೆದ ಭವಾನಿ ದೇವಿ ಅವರು, ಭಾರತದ ಮೊದಲ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

The post ಸೋತರು ದಾಖಲೆ ಬರೆದ ಭವಾನಿ ದೇವಿ; ಒಲಿಂಪಿಕ್ಸ್ ಕತ್ತಿವರಸೆಯಲ್ಲಿ ಇವರ ಸಾಧನೆ ನೋಡಿ appeared first on News First Kannada.

Source: newsfirstlive.com

Source link