ಮತ್ತೆ ಕಿರುತೆರೆಗೆ ಮರಳಿದ ಶರಣ್ಯಾ ಶೆಟ್ಟಿ.. ಆಕಾಶ್ ಪ್ರೇಯಸಿಯಾಗಿ ರಿ ಎಂಟ್ರಿ

ಮತ್ತೆ ಕಿರುತೆರೆಗೆ ಮರಳಿದ ಶರಣ್ಯಾ ಶೆಟ್ಟಿ.. ಆಕಾಶ್ ಪ್ರೇಯಸಿಯಾಗಿ ರಿ ಎಂಟ್ರಿ

ಗಟ್ಟಿಮೇಳ ಧಾರವಾಹಿಯಲ್ಲಿ ಅಮೂಲ್ಯ, ವೇದಾಂತ್​ ನಡುವೆ ಬಂದಿದ್ದ ಸಾಹಿತ್ಯಾ ನಿಮಗೆಲ್ಲ ನೆನಪು​ ಇರ್ಬೇಕಲ್ಲ. ಅದೆಲ್ಲಾ ಓಕೆ, ಈಗ್ಯಾಕೆ ಅವ್ರ ಹೆಸರು ಅನ್ನೋದು ನಿಮ್ಮ ಪ್ರಶ್ನೆ ಅಲ್ವಾ..ವಿಷ್ಯ ಇದೆ ರೀ. ಅದೇನ್​ ಅಂದ್ರೇ ಸಾಹಿತ್ಯಾ ಅಂದ್ರೇ ಶರಣ್ಯಾ ಶೆಟ್ಟಿ ಮತ್ತೆ ಕಿರುತೆರೆಗೆ ಮರಳಿದ್ದಾರೆ.

ಹೌದು, ಶರಣ್ಯಾ ನೆಗೆಟಿವ್​ ಶೇಡ್​ ಪಾತ್ರದೊಂದಿಗೆ ವೀಕ್ಷಕರ ಮುಂದೆ ಬಂದಿದ್ದಾರೆ. ಡೋಂಟ್​ ವರೀ ಮತ್ತೇ ರೌಡಿ ಬೇಬಿ, ವೇದ್​ ನಡುವೆಯಲ್ಲ. ಬದಲಿಗೆ ಆಕಾಶದೀಪ ಧಾರವಾಹಿಯಲ್ಲಿ ಆಕಾಶ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದಾರೆ.

blank

ಈಗಾಗಲೇ ಶರಣ್ಯ ಅಭಿನಯಿಸಿರೋ ಎಪಿಸೋಡ್‌ ಟೆಲಿಕಾಸ್ಟ್ ಆಗಿದೆ. ಆಕಾಶ್‌ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಳ್ಳೋ ಸೀನ್‌ ಸದ್ಯ ನಡೆಯುತ್ತಿದೆ. ಈ ಎಪಿಸೋಡ್‌ನಲ್ಲಿ ಟ್ವಿಸ್ಟ್ ಕೂಡ ಇರ್ಲಿದೆ ಅಂತಾ ಹೇಳಲಾಗ್ತಿದೆ.

ಗಟ್ಟಿಮೇಳ ಧಾರವಾಹಿಯ ನಂತರ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ಶರಣ್ಯ, ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ.
ಕರಾವಳಿ ಬೆಡಗಿ ಶರಣ್ಯಾ ಮೂಲತಃ ಮಾಡಲ್​. ಗಟ್ಟಿಮೇಳ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಇದ್ರಲ್ಲಿ ಅವರು ಸುಮಾರು ಎಂಟು ತಿಂಗಳು ಪಾತ್ರ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರವಾಗಿದ್ದರು.

ಇದೀಗ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಕಾಶದೀಪ ಧಾರವಾಹಿ ಮೂಲಕ ಮತ್ತೆ ಬಣ್ಣ ಹಚ್ಚಿದ್ದು, ವಿಲನ್​ ಕ್ಯಾರಕ್ಟರ್​ನಲ್ಲಿ ಶರಣ್ಯಾರನ್ನು ಕಣ್ತುಂಬಿಕೊಳ್ಳಬಹುದು.

blank

The post ಮತ್ತೆ ಕಿರುತೆರೆಗೆ ಮರಳಿದ ಶರಣ್ಯಾ ಶೆಟ್ಟಿ.. ಆಕಾಶ್ ಪ್ರೇಯಸಿಯಾಗಿ ರಿ ಎಂಟ್ರಿ appeared first on News First Kannada.

Source: newsfirstlive.com

Source link