ಚಿನ್ನ ಗೆದ್ದ ಚೀನಾ ಸ್ಪರ್ಧಿಗೆ ಡ್ರಗ್ಸ್ ಟೆನ್ಶನ್.. ಮೀರಾಬಾಯಿ ಚಾನುಗೇ ಚಿನ್ನದ ಪದಕ ಸಿಗುವ ಸಾಧ್ಯತೆ

ಚಿನ್ನ ಗೆದ್ದ ಚೀನಾ ಸ್ಪರ್ಧಿಗೆ ಡ್ರಗ್ಸ್ ಟೆನ್ಶನ್.. ಮೀರಾಬಾಯಿ ಚಾನುಗೇ ಚಿನ್ನದ ಪದಕ ಸಿಗುವ ಸಾಧ್ಯತೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಮೀರಾಬಾಯಿ ಚಾನು ವೇಯ್ಟ್ ಲಿಫ್ಟಿಂಗ್​ನಲ್ಲಿ ಬೆಳ್ಳಿಪದಕ ಗೆದ್ದಿದ್ದಾರೆ.. ಆದ್ರೆ ಮೀರಾಬಾಯಿ ಚಾನುಗೆ ಅಸಲಿಗೆ ಚಿನ್ನದ ಪದಕವೇ ಒಲಿದುಬರುವ ಸಾಧ್ಯತೆ ಇದೆ.

ಇದಕ್ಕೆ ಕಾರಣ ಚೀನಾದ ಕ್ರೀಡಾಪಟು ಝೀಹುಯಿ ಅವರಿಗೆ ಇದೇ ಶನಿವಾರ ಆ್ಯಂಟಿಡೋಪ್ ಪರೀಕ್ಷೆ ಮಾಡಲಾಗುತ್ತದೆ ಈ ಪರೀಕ್ಷೆಯಲ್ಲಿ ಝೀಹುಯಿ ಫೇಲ್ ಆದಲ್ಲಿ ಝೀಹುಯಿ ಅವರಿಗೆ ನೀಡಲಾಗಿರುವ ಚಿನ್ನದ ಪದಕವನ್ನ ಹಿಂಪಡೆದು ಮೀರಾಬಾಯಿ ಚಾನು ಅವರಿಗೆ ಬೆಳ್ಳಿಪದಕದ ಬದಲಿಗೆ ಚಿನ್ನದ ಪದಕ ನೀಡಲಾಗುತ್ತದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಮೊದಲ ಬೆಳ್ಳಿಪದಕ ಗೆದ್ದ ಭಾರತದ ಮೀರಾಬಾಯಿ ಚಾನು

ಇನ್ನು ಒಲಿಂಪಿಕ್ಸ್ ರೂಲ್​ಬುಕ್​ನಲ್ಲಿ ಒಂದು ವೇಳೆ ಚಿನ್ನದ ಪದಕ ಗೆದ್ದ ಕ್ರೀಡಾಪಟು ಆ್ಯಂಟಿಡೋಪ್ ಟೆಸ್ಟ್​ನಲ್ಲಿ ಸೋತರೆ ಬೆಳ್ಳಿಪದಕ ಪಡೆದ ಕ್ರೀಡಾಪಟುವಿನ ಪದಕವನ್ನು ಬೆಳ್ಳಿಯಿಂದ ಚಿನ್ನಕ್ಕೆ ಅಪ್​ಗ್ರೇಡ್ ಮಾಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.

ಏನಿದು ಆ್ಯಂಟಿಡೋಪ್ ಟೆಸ್ಟ್..?
ವೇಯ್ಟ್​ಲಿಫ್ಟಿಂಗ್​ನಂಥ ಕ್ರೀಡೆಯಲ್ಲ ಭಾಗವಹಿಸಿದ್ದ ಕ್ರೀಡಾಪಟುಗಳು ಹೆಚ್ಚು ಭಾರ ಎತ್ತಲು ಬೇಕಾಗುವ ಹೆಚ್ಚಿನ ಶಕ್ತಿಗಾಗಿ ಯಾವುದಾದರೂ ಮಾದರಿಯ ಡ್ರಗ್ ಸೇವಿಸಿದ್ದರೆ ಅಥವಾ ಇಂಜೆಕ್ಟ್ ಮಾಡಿಕೊಂಡಿದ್ದರೇ ಎಂದು ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಕ್ರೀಡಾಪಟು ಡ್ರಗ್ ಸೇವನೆ ಮಾಡಿದ್ದು ಪತ್ತೆಯಾದಲ್ಲಿ ಅವರಿಗೆ ನೀಡಲಾದ ಪದಕ, ಪ್ರಶಸ್ತಿ, ಗೌರವಗಳನ್ನು ಹಿಂಪಡೆದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಗೆದ್ದ ಬೆಳ್ಳಿ ಪದಕ ಭಾರತಾಂಬೆಗೆ ಅರ್ಪಣೆ: ಮೀರಾಬಾಯಿ ಚಾನು

ಸಾಮಾನ್ಯವಾಗಿ ಕ್ರೀಡಾಪಟುವಿನ ಮೂತ್ರ, ಎಂಜಲು, ಬೆವರು, ರಕ್ತ, ಕೂದಲು ಮತ್ತು ಉಗುರುಗಳ ಮೂಲಕ ಈ ಪರೀಕ್ಷೆಯನ್ನ ನಡೆಸಲಾಗುತ್ತದೆ. ಹೆಚ್ಚಾಗಿ ಮೂತ್ರ ಪರೀಕ್ಷೆ ನಡೆಸುವ ಮೂಲಕ ಡ್ರಗ್ ಅಂಶವನ್ನ ಪತ್ತೆಹಚ್ಚಲಾಗುತ್ತದೆ.

The post ಚಿನ್ನ ಗೆದ್ದ ಚೀನಾ ಸ್ಪರ್ಧಿಗೆ ಡ್ರಗ್ಸ್ ಟೆನ್ಶನ್.. ಮೀರಾಬಾಯಿ ಚಾನುಗೇ ಚಿನ್ನದ ಪದಕ ಸಿಗುವ ಸಾಧ್ಯತೆ appeared first on News First Kannada.

Source: newsfirstlive.com

Source link