ರೈಲ್ವೆ ಟ್ರಾಕ್​ ಮೇಲೆ ವೃದ್ಧೆ ಮೃತದೇಹ ಪತ್ತೆ ಪ್ರಕರಣ; ಕೊಲೆ ಮಾಡಿದ್ದ ಆರೋಪಿ ಅಂದರ್​​

ರೈಲ್ವೆ ಟ್ರಾಕ್​ ಮೇಲೆ ವೃದ್ಧೆ ಮೃತದೇಹ ಪತ್ತೆ ಪ್ರಕರಣ; ಕೊಲೆ ಮಾಡಿದ್ದ ಆರೋಪಿ ಅಂದರ್​​

ಬೆಂಗಳೂರು: ರೈಲ್ವೆ ಟ್ರಾಕ್​​ ಮೇಲೆ ವೃದ್ಧೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೀಗ ಟ್ವಿಸ್ಟ್​​ ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ ಪೊಲೀಸರ ತನಿಖೆಯಲ್ಲಿ ಬಾಲಚಂದ್ರ ಎಂಬಾತ ವೃದ್ಧೆಯನ್ನು ಹತ್ಯೆಗೈದು ಮೃತ ದೇಹವನ್ನು ರೈಲ್ವೆ ಹಳಿಯೊಂದರ ಮೇಲೆ ಹಾಕಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪ್ರಕರಣ ಸಂಬಂಧ ಆರೋಪಿ ಬಾಲಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಮೂಲದ ನಿವೃತ್ತ ಶಾಲಾ ಶಿಕ್ಷಕಿಯಾದ ನಿಂಗಮ್ಮ ಎಂಬುವರನ್ನು ಬಾಲಚಂದ್ರ ಮತ್ತು ಲತಾ ಎಂಬಾಕೆ ಸೇರಿ ಕೊಲೆ ಮಾಡಿದ್ದಾರೆ. ಇನ್ನು ಕೊಲೆ ಮಾಡಿದ ಬಾಲಚಂದ್ರನನ್ನು ಅರೆಸ್ಟ್​ ಮಾಡಿದ ಪೊಲೀಸರು ಈಗ ಆರೋಪಿ ಲತಾಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

ಇನ್ನು, ಲತಾ ನಿಂಗಮ್ಮ ಅವರ ಸೊಸೆ. ಇಬ್ಬರ ನಡುವೆ ಹಣಕಾಸು ವ್ಯವಹಾರ ಇತ್ತು. ಇದೇ ವಿಚಾರಕ್ಕಾಗಿ ಜಗಳವಾಡುತ್ತಿದ್ದಾಗ ನಿಂಗಮ್ಮ ಕುಸಿದು ಬಿದ್ದು ಪ್ರಜ್ಣೆ ಕಳೆದುಕೊಂಡಿದ್ದಾರೆ. ಬಳಿಕ ಲತಾ ಬಾಲಚಂದ್ರನ ಜೊತೆ ಸೇರಿ ನಿಂಗಮ್ಮನನ್ನು ರೈಲ್ವೆ ಟ್ರಾಕ್ ಮೇಲೆ ಬಿಸಾಡಿದ್ದಾರೆ. ಈ ವೇಳೆ ರೈಲು ಹರಿದು ನಿಂಗಮ್ಮನ ದೇಹ ಚಿದ್ರ ಚಿದ್ರವಾಗಿದೆ.

ಇದನ್ನೂ ಓದಿ: ಪತಿ ಹತ್ಯೆಗೆ ಪತ್ನಿಯೇ ಸುಪಾರಿ.. ಆ ಕ್ಷಣದಲ್ಲಿ ಸಿಕ್ಕಿ ಬಿದ್ದಳು ಖತರ್ನಾಕ್​ ಹೆಂಡತಿ!

ರೈಲ್ವೆ ಟ್ರಾಕ್​ನಿಂದ ನಿಂಗಮ್ಮರ ತಲೆ ಕದ್ದಿದ್ದ ಆರೋಪಿಗಳು ಲಾರಿಯೊಂದರಲ್ಲಿ ಹಾಕಿದ್ದರು. ಹೀಗಾಗಿ ಗ್ರಾನೈಟ್ ಲಾರಿಯಲ್ಲಿ ಮೃತ ಮಹಿಳೆಯ ತಲೆ ಪತ್ತೆಯಾಗಿದೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರ ಪೊಲೀಸ್​​ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು.

The post ರೈಲ್ವೆ ಟ್ರಾಕ್​ ಮೇಲೆ ವೃದ್ಧೆ ಮೃತದೇಹ ಪತ್ತೆ ಪ್ರಕರಣ; ಕೊಲೆ ಮಾಡಿದ್ದ ಆರೋಪಿ ಅಂದರ್​​ appeared first on News First Kannada.

Source: newsfirstlive.com

Source link