‘ಷಡ್ಯಂತ್ರ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ’ ಕಾಂಗ್ರೆಸ್​​ ಕಿಡಿ

‘ಷಡ್ಯಂತ್ರ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ’ ಕಾಂಗ್ರೆಸ್​​ ಕಿಡಿ

ಬೆಂಗಳೂರು: ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ ಎಂದು ಟ್ವೀಟ್​​ ಮಾಡುವ ಮೂಲಕ ಕಾಂಗ್ರೆಸ್​ ರಾಜ್ಯ ಬಿಜೆಪಿ ನಾಯಕರ ಕಾಲೆಳೆದಿದೆ. ಬಿ.ಎಸ್​​ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಟಾರ್ಗೆಟ್​​ ಮಾಡಿ ಹೀಗೆ ಕಾಂಗ್ರೆಸ್​ ಟ್ವೀಟ್​​ ಮಾಡಿದೆ.

ಬಿ.ಎಸ್​​ ಯಡಿಯೂರಪ್ಪ ಮುಕ್ತ ಬಿಜೆಪಿ ಅಭಿಯಾನದಲ್ಲಿ ಯಶಸ್ವಿಯಾದ ಸಿ.ಟಿ ರವಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್​​ ಅವರಿಗೆ ಅಭಿನಂದನೆಗಳು. ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ. ಯಶಸ್ವಿಯಾಗಿ ಅವಧಿ ಪೂರೈಸುತ್ತೇನೆ ಎನ್ನುತ್ತಿದ್ದವರನ್ನು ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ಕಣ್ಣೀರು ಸುರಿಸುತ್ತಾ ಇಳಿದು ಹೋಗುವಂತೆ ಮಾಡಿದಿರಿ ಎಂದು ಕಾಂಗ್ರೆಸ್​ ಆರೋಪಿಸಿದೆ.

The post ‘ಷಡ್ಯಂತ್ರ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ’ ಕಾಂಗ್ರೆಸ್​​ ಕಿಡಿ appeared first on News First Kannada.

Source: newsfirstlive.com

Source link