ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ವಾಟಾಳ್ ಬಂಧನ, ಬಿಡುಗಡೆ

ಬೆಂಗಳೂರು: ಚಿನ್ನದ ನಾಡು ಕೋಲಾರದ ಕೆಜಿಎಫ್‍ನಲ್ಲಿ ತಮಿಳು ನಾಮಫಲಕ ಹಾಕಿರೋದನ್ನ ವಿರೋಧಿಸಿ ಪ್ರತಿಭಟನೆ ಮಾಡಲು ಮುಂದಾಗಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿರೋ ಕೋಲಾರದ ಕೆಜಿಎಫ್‍ನಲ್ಲಿ ತಮಿಳುಮಯವಾಗ್ತಿದೆ. ಅಲ್ಲಿನ ನಗರಸಭೆ ತಮಿಳು ನಗರಸಭೆಯಾಗಿದೆ. ಅಂತಹ ನಗರಸಭೆಯ ಅಗತ್ಯ ರಾಜ್ಯಕ್ಕೆ ಇಲ್ಲ, ಕೂಡಲೇ ಕೆಜಿಎಫ್ ನಗರ ಸಭೆಯನ್ನ ವಜಾ ಮಾಡಬೇಕು ಎಂದು ಒತ್ತಾಯಿಸಿ ಇಂದು ರಾಜಭವನಕ್ಕೆ ಮುತ್ತಿಗೆ ಹಾಕಲು ವಾಟಾಳ್ ನಾಗರಾಜ್ ಮುಂದಾಗಿದ್ರು.

ವಾಟಾಳ್ ನಾಗರಾಜ್ ರಾಜಭವನಕ್ಕೆ ಮುತ್ತಿಗೆ ಹಾಕಲು ಮನೆಯಿಂದ ಹೊರಡುತ್ತಿದ್ದಂತೆ ನಗರದ ಪೊಲೀಸರು ಅವರನ್ನ ವಶಕ್ಕೆ ಪಡೆದಿರೋ ಘಟನೆ ಇಂದು ನಡೆದಿದೆ. ಕನ್ನಡಕ್ಕೆ ಕನ್ನಡ ನಾಡಿನಲ್ಲಿ ಕನ್ನಡವೇ ಮುಖ್ಯ, ಕನ್ನಡ ವಿರೋಧಿ ಚಟುವಟಿಕೆಗಳು ನಡೆಯಬಾರದು ಅನ್ನೋ ಕಾರಣಕ್ಕೆ ಹೋರಾಟಕ್ಕೆ ವಾಟಾಳ್ ಮತ್ತು ತಂಡ ಮುಂದಾಗಿತ್ತು. ಇದನ್ನೂ ಓದಿ: ಬಿಎಸ್‍ವೈ ರಾಜೀನಾಮೆಯಿಂದ ಲಿಂಗಾಯಿತ ಮತಗಳಲ್ಲಿ ಬದಲಾವಣೆ ಆಗಲ್ಲ: ಶಾಸಕ ರವೀಂದ್ರನಾಥ್

ಇಂದು ರಾಜ್ಯ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯಪಾಲರನ್ನ ಭೇಟಿ ಮಾಡುವ ಸಾಧ್ಯತೆ ಇದ್ದ ಕಾರಣ ರಾಜಭವನಕ್ಕೆ ಸೂಕ್ತ ಭದ್ರತೆಯನ್ನ ಪೊಲೀಸರು ನೀಡಿದ್ರು. ಹಾಗಾಗಿ ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಮೋದಿಯ ಇತ್ತೀಚಿನ ಬಲಿಪಶು: ರಣದೀಪ್ ಸಿಂಗ್ ಸುರ್ಜೆವಾಲಾ

blank

The post ರಾಜಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ವಾಟಾಳ್ ಬಂಧನ, ಬಿಡುಗಡೆ appeared first on Public TV.

Source: publictv.in

Source link