ಪಾರ್ನ್​ ಫಿಲ್ಮ್​ ಕೇಸ್​; ಪೊಲೀಸರ ಮುಂದೆಯೇ ಗಂಡನ ಜೊತೆ ಹಿಂಗೆಲ್ಲ ಮಾಡಿ ಬಿಟ್ರಾ ಶಿಲ್ಪಾ ಶೆಟ್ಟಿ..?!

ಪಾರ್ನ್​ ಫಿಲ್ಮ್​ ಕೇಸ್​; ಪೊಲೀಸರ ಮುಂದೆಯೇ ಗಂಡನ ಜೊತೆ ಹಿಂಗೆಲ್ಲ ಮಾಡಿ ಬಿಟ್ರಾ ಶಿಲ್ಪಾ ಶೆಟ್ಟಿ..?!

ನೀಲಿ ಚಿತ್ರ ನಿರ್ಮಾಣ ಆರೋಪ ಪ್ರಕರಣದಲ್ಲಿ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಕಳೆದ ಒಂದು ವಾರದಿಂದ ಸಖತ್ ಸುದ್ದಿಯಾಗ್ತಿದ್ದಾರೆ. ಯಶಸ್ವಿ ಉದ್ಯಮಿಯಾಗಿರುವ ರಾಜ್​ ಕುಂದ್ರಾ ಅವರನ್ನ ಸದ್ಯ ಮುಂಬೈ ಪೊಲೀಸರು ಬಂಧಿಸಿದ್ದು, ಜುಲೈ 23 ರಿಂದ 27 ವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಕರಣ ಸಂಬಂಧ ಕಳೆದ ಎರಡು ದಿನಗಳ ಹಿಂದಷ್ಟೇ ಕ್ರೈಂ ಬ್ರ್ಯಾಂಚ್ ಪೊಲೀಸರು ಮುಂಬೈನ ಜುಹು ಬಳಿಯಲ್ಲಿರುವ ಶಿಲ್ಪಾ ಶೆಟ್ಟಿ ಹಾಗೂ ರಾಜ್​ ಕುಂದ್ರಾ ಬಂಗಲೆ ‘ಕಿನಾರ’ ಮೇಲೆ ದಾಳಿ ಮಾಡಿದ್ದರು. ತನಿಖೆಯಲ್ಲಿದ್ದ ಅಧಿಕಾರಿಗಳು ರಾಜ್​ ಕುಂದ್ರಾ ಅವರನ್ನೂ ಈ ವೇಳೆ ಕರೆದುಕೊಂಡು ಬಂದಿದ್ದರು.

blank

ಆಗ ತನಿಖಾಧಿಕಾರಿಗಳು ನಟಿ ಶಿಲ್ಪಾ ಶೆಟ್ಟಿ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಹೇಳಿಕೆ ದಾಖಲು ಮಾಡಿಕೊಳ್ಳುವ ವೇಳೆ ಶಿಲ್ಪಾ ಶೆಟ್ಟಿ ಗಂಡನ ಜೊತೆ ಕಿತ್ತಾಟ ನಡೆಸಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಗಂಡನ ಚಳಿ ಬಿಡಿಸಿರೋದಾಗಿ ವರದಿಯಾಗಿದೆ. ಬಳಿಕ ಶಾಕ್​ನಲ್ಲಿದ್ದ ಶಿಲ್ಪಾ, ಪೊಲೀಸರ ಮುಂದೆ ಕುಸಿದು ಬಿದ್ದಿದರು ಎನ್ನಲಾಗಿದೆ.

ಇದನ್ನೂ ಓದಿ:ರಾಜ್​ಕುಂದ್ರಾಗೆ ಮತ್ತಷ್ಟು ಸಂಕಷ್ಟ; ತನ್ನ ವಿರುದ್ಧ ಸಾಕ್ಷಿ ಹೇಳಲು ಮುಂದಾದ ತನ್ನದೇ ಉದ್ಯೋಗಿಗಳು

ರಾಜ್​ಕುಂದ್ರಾ ಅವರನ್ನ ಬಂಧಿಸಿ ವಿಚಾರಣೆಗಾಗಿ ಕರೆದುಕೊಂಡು ಬಂದಿದ್ದನ್ನ ನೋಡಿದ ಶಿಲ್ಪಾ ಶೆಟ್ಟಿ ತುಂಬಾ ಗಾಬರಿಯಾಗಿದ್ದಾರೆ. ಆರೋಪ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಿಲ್ಪಾಶೆಟ್ಟಿ ರಾಜ್ ಕುಂದ್ರಾ ಕಂಪನಿಯಲ್ಲಿ ತಮ್ಮ ಸಹಭಾಗಿತ್ವ ಇದೆ ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿಯನ್ನ ನೀಡಿಲ್ಲ. ಪೊಲೀಸರು ಬರೋಬ್ಬರಿ 2 ಗಂಟೆಗಳ ಕಾಲ ಹೇಳಿಕೆಯನ್ನ ದಾಖಲಿಸಿಕೊಂಡಿದ್ದಾರೆ.

blank

ಇನ್ನು ವಿಚಾರಣೆ ಬಳಿಕ ಮಾತನಾಡಿದ್ದ ಶಿಲ್ಪಾ ಶೆಟ್ಟಿ.. ನೀಲಿಚಿತ್ರಗಳ ಚಿತ್ರೀಕರಣದಲ್ಲಿ ನನ್ನ ಗಂಡ ಭಾಗಿಯಾಗಿಯಾದ ಬಗ್ಗೆ ನನಗ್ಯಾವುದೇ ಮಾಹಿತಿ ಇಲ್ಲ. ನನ್ನ ಗಂಡ ಮುಗ್ಧ ಮತ್ತು ನಿರಾಪರಾಧಿ. ಕಾಮೋದ್ರೇಕ ವಿಡಿಯೋಗಳಿಗೂ ಮತ್ತು ನೀಲಿ ಚಿತ್ರಗಳಿಗೂ ಬಹಳ ವ್ಯತ್ಯಾಸವಿದೆ ಎಂದು ಹೇಳುವ ಮೂಲಕ ಶಿಲ್ಪಾ ಶೆಟ್ಟಿ ತನ್ನ ಪತಿಯನ್ನು ಸಮರ್ಥಿಸಿಕೊಂಡಿದ್ದರು.

ಇದನ್ನೂ ಓದಿ: ನನ್ನ ಗಂಡ ಮುಗ್ಧ ಮತ್ತು ನಿರಾಪರಾಧಿ -ಮೌನ ಮುರಿದ ಶಿಲ್ಪಾ ಶೆಟ್ಟಿ

The post ಪಾರ್ನ್​ ಫಿಲ್ಮ್​ ಕೇಸ್​; ಪೊಲೀಸರ ಮುಂದೆಯೇ ಗಂಡನ ಜೊತೆ ಹಿಂಗೆಲ್ಲ ಮಾಡಿ ಬಿಟ್ರಾ ಶಿಲ್ಪಾ ಶೆಟ್ಟಿ..?! appeared first on News First Kannada.

Source: newsfirstlive.com

Source link