‘BSY ಹೋರಾಟಗಾರ.. ಅವರ ಕಣ್ಣೀರು ನೋಡಿದ್ರೆ ಅಸಾಧ್ಯ ಒತ್ತಡವಿದ್ದಿದ್ದು ತಿಳಿಯುತ್ತೆ’

‘BSY ಹೋರಾಟಗಾರ.. ಅವರ ಕಣ್ಣೀರು ನೋಡಿದ್ರೆ ಅಸಾಧ್ಯ ಒತ್ತಡವಿದ್ದಿದ್ದು ತಿಳಿಯುತ್ತೆ’

ಬೆಂಗಳೂರು: ಬಿ.ಎಸ್​​ ಯಡಿಯೂರಪ್ಪ ಹೋರಾಟದ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಹೇಳಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಟ್ವೀಟ್​​ ಮಾಡಿರುವ ದಿನೇಶ್​​ ಗುಂಡೂರಾವ್​​, ನಮ್ಮ ಸಿದ್ದಾಂತ ಹಾಗೂ ಪಕ್ಷ ಬೇರೆಯಾಗಿರಬಹುದು. ಆದರೆ, ಬಿ.ಎಸ್​ ಯಡಿಯೂರಪ್ಪ ಮಾತ್ರ ಹೋರಾಟದ ರಾಜಕಾರಣಿ ಎಂದರು.

ಇನ್ನು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ.ಎಸ್​​ ಯಡಿಯೂರಪ್ಪ ಅವರ 5 ದಶಕಗಳ ರಾಜಕೀಯ ಜೀವನದ ಬಗ್ಗೆ ನನಗೆ ಹೆಮ್ಮೆಯಿದೆ. ಬಿಜೆಪಿ ಹೈಕಮಾಂಡ್​​ ಗೌರವಯುತ ವಿದಾಯಕ್ಕೆ ಅವಕಾಶ ನೀಡಬೇಕಿತ್ತು. ಆದರೆ, ಬಿ.ಎಸ್​ ಯಡಿಯೂರಪ್ಪ ಕಣ್ಣೀರು ಹಾಕಿದ್ದು ನೋಡಿದರೆ ರಾಜೀನಾಮೆ ನೀಡುವ ಹಿಂದೆ ಅಸಾಧ್ಯವಾದ ಒತ್ತಡವಿತ್ತು ಎಂದು ತಿಳಿಯುತ್ತದೆ ಎಂದು ಟ್ವೀಟ್​​​ ಮಾಡಿದ್ದಾರೆ.

ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಕೂಡಲೇ ಕಾಂಗ್ರೆಸ್​, ಜೆಡಿಎಸ್​ ಸೇರಿದಂತೆ ಬಿಜೆಪಿ ನಾಯಕರು ಟ್ವೀಟ್​ ಮಾಡಿದ್ದಾರೆ. ಎಲ್ಲರೂ ಬಿ.ಎಸ್​ ಯಡಿಯೂರಪ್ಪ ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ.

The post ‘BSY ಹೋರಾಟಗಾರ.. ಅವರ ಕಣ್ಣೀರು ನೋಡಿದ್ರೆ ಅಸಾಧ್ಯ ಒತ್ತಡವಿದ್ದಿದ್ದು ತಿಳಿಯುತ್ತೆ’ appeared first on News First Kannada.

Source: newsfirstlive.com

Source link