ಬಿಎಸ್​ವೈ ರಾಜೀನಾಮೆ; ಹೇಗಿರಲಿದೆ ಮುಂದಿನ ಸಚಿವ ಸಂಪುಟ.. ಯಾರು ಇನ್.. ಯಾರಿಗೆ ಕೊಕ್..?

ಬಿಎಸ್​ವೈ ರಾಜೀನಾಮೆ; ಹೇಗಿರಲಿದೆ ಮುಂದಿನ ಸಚಿವ ಸಂಪುಟ.. ಯಾರು ಇನ್.. ಯಾರಿಗೆ ಕೊಕ್..?

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಗಳ ನೇಮಕದ ವಿಚಾರ ಮುನ್ನೆಲೆಗೆ ಬಂದಿದ್ದು.. ನೂತನ ಮುಖ್ಯಮಂತ್ರಿಗಳ ಕ್ಯಾಬಿನೆಟ್‌ನಲ್ಲಿ ಯಾರ್ಯಾರು ಇರ್ತಾರೆ ಇಡೀ ಸಂಪುಟದಲ್ಲಿ ಎಲ್ಲಾ ಹೊಸ ಮುಖದವರೇ ಇರ್ತಾರಾ? ಅಥವಾ ಹಿರಿಯ ಅನುಭವಿ ರಾಜಕಾರಣಿಗಳೇ ಇರ್ತಾರಾ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

blank

ನ್ಯೂಸ್‌ಫಸ್ಟ್‌‌ಗೆ ನೂತನ ಸಚಿವ ಸಂಪುಟದ ಬಗ್ಗೆ ಕೆಲವೊಂದಿಷ್ಟು ಮಾಹಿತಿ ಲಭ್ಯವಾಗಿದ್ದು ಈ ಬಾರಿ ಸಚಿವ ಸಂಪುಟಕ್ಕೆ, ಹಾಲಿ ಸಚಿವರಲ್ಲಿ 10 ರಿಂದ 12 ಮಂದಿಗೆ ಕೊಕ್ ನೀಡುವ ಸಾಧ್ಯತೆ ಎನ್ನಲಾಗಿದೆ. ಜೊತೆಗೆ ವಲಸೆ ಬಂದು ಸಚಿವರಾಗಿದ್ದವರ ಪಟ್ಟಿಯಲ್ಲೂ ಎರಡು ಅಥವಾ ಮೂರು ಮಂದಿಯನ್ನು ಕೈ ಬಿಡುವ ಸಾಧ್ಯತೆ ಇದೆಯಂತೆ. ಇದರ ಜೊತೆಗೆ ಕೇರಳ ಮಾದರಿಯಂತೆ ಹೊಸಮುಖದ ನಾಯಕರನ್ನೇ ಕರೆ ತಂದು ಸಚಿವರಾಗಿ ಮಾಡುವ ಸಾಧ್ಯತೆಯಿದೆ. ಹಿರಿಯರು, ಅನುಭವಿಗಳನ್ನು ನೇರವಾಗಿ ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ.

blank

The post ಬಿಎಸ್​ವೈ ರಾಜೀನಾಮೆ; ಹೇಗಿರಲಿದೆ ಮುಂದಿನ ಸಚಿವ ಸಂಪುಟ.. ಯಾರು ಇನ್.. ಯಾರಿಗೆ ಕೊಕ್..? appeared first on News First Kannada.

Source: newsfirstlive.com

Source link