ಚೊಚ್ಚಲ ಒಲಿಂಪಿಕ್ಸ್​ನಲ್ಲೇ ಚಿನ್ನ ಗೆದ್ದ 13 ವರ್ಷದ ಬಾಲಕಿ​

ಚೊಚ್ಚಲ ಒಲಿಂಪಿಕ್ಸ್​ನಲ್ಲೇ ಚಿನ್ನ ಗೆದ್ದ 13 ವರ್ಷದ ಬಾಲಕಿ​

ಟೋಕಿಯೋ ಒಲಿಂಪಿಕ್ಸ್​​​ನ ನಾಲ್ಕನೇ ದಿನವಾದ ಇಂದು, ಕ್ರೀಡಾಭಿಮಾನಿಗಳಿಗೆ ರಸಭರಿತ ಮನರಂಜನೆ ಸಿಕ್ಕಿದೆ. ವಿವಿಧ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಪದಕ ಬೇಟೆಯಾಡುತ್ತಿದ್ದಾರೆ. ಆದರೆ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದು ಮಾತ್ರ ಜಪಾನಿನ ಈ 13 ವರ್ಷದ ಪೋರಿ. 13 ವರ್ಷದ ಮೊಮಿಜಿ ನಿಶಿಯಾ ತಮ್ಮ ಚೊಚ್ಚಲ ಒಲಿಂಪಿಕ್ಸ್​​​ನಲ್ಲೇ ಚಿನ್ನ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ.

ಇನ್ನು ಈ ಪದಕ ಗೆದ್ದಿರುವ ಬಗ್ಗೆ ಮಾತನಾಡಿರುವ ನಿಶಿಯಾ, ಸ್ವರ್ಣ ಗೆದ್ದಿರುವುದಕ್ಕೆ ಆನಂದಭಾಷ್ಪ ತಡೆಯಲಾಗುತ್ತಿಲ್ಲ. ನನ್ನ ಪಾಲಿಗಿದು ಮರೆಯಲಾಗದ ಕ್ಷಣ ಎಂದು ಸಂಸತ ವ್ಯಕ್ತಪಡಿಸಿದ್ದಾರೆ. ಸ್ಕೇಟಿಂಗ್​​ ಫನ್ನಿಯಾಗಿ ಆಡುವುದೇ ನನಗಿಷ್ಟ ಎಂದು ಹೇಳಿದ್ದಾಳೆ. ಈಕೆ ಸ್ಕೇಟ್​ಬೋರ್ಡಿಂಗ್​ ವಿಶ್ವ ಚಾಂಪಿಯನ್​ಶಿಪ್​​ನಲ್ಲೂ ಬೆಳ್ಳಿ ಪದಕ ಗೆದ್ದಿದ್ದಾಳೆ. ತನ್ನ 8ನೇ ವಯಸ್ಸಿನಲ್ಲೇ ಸ್ಕೇಟ್​ ಬೋರ್ಡಿಂಗ್​ ಆರಂಭಿಸಿದ್ಲು.

blank

ಮೊಮಿಜಿ ನಿಶಿಯಾ, ಸ್ಕೇಟ್​​ಬೋರ್ಡಿಂಗ್​​ನಲ್ಲಿ ಸ್ವರ್ಣಕ್ಕೆ ಮುತ್ತಿಕ್ಕಿದ್ದು, ಒಲಿಂಪಿಕ್ಸ್​ ಚಿನ್ನ ಗೆದ್ದ ವಿಶ್ವದ 2ನೇ ಅತೀ ಕಿರಿಯ ಪೋರಿ (13 ವರ್ಷ 330ದಿನ) ಎಂಬ ಇತಿಹಾಸ ಬರೆದಿದ್ದಾರೆ. ಮೊಮಿಜಿ ನಿಶಿಯಾ 15.26 ಸ್ಕೋರ್ ಮಾಡಿದ್ದಳು. ಇನ್ನು ಬ್ರೆಜಿಲ್​​ನ 13 ವರ್ಷದ ಬಾಲಕಿ ರಾಸ್ಯಾ ಲೀಲ್​ ಬೆಳ್ಳಿ​ ಪದಕ​, ಜಪಾನಿನ 16 ವರ್ಷದ ಫುಕಾ ನಾಕಾಯಮ ಕಂಚು ಪದಕ ಗೆದ್ದಿದ್ದಾರೆ. ಸ್ಕೇಟ್​ಬೋರ್ಡಿಂಗ್​ ಸ್ಪರ್ಧೆಯನ್ನ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್​ಗೆ ಪರಿಚಯಿಸಲಾಗಿದೆ.

1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ 3 ಮೀಟರ್ ಸ್ಪ್ರಿಂಗ್‌ಬೋರ್ಡ್ ಡೈವಿಂಗ್‌ನಲ್ಲಿ ಚಿನ್ನ ಗೆದ್ದ ಅಮೆರಿಕದ ಮಾರ್ಜೋರಿ ಗೆಸ್ಟ್ರಿಂಗ್ ಗೆದ್ದ ವಿಶ್ವದ ಕಿರಿಯ ವ್ಯಕ್ತಿ (13 ವರ್ಷ 138 ದಿನ) ಎನಿಸಿದ್ದಾರೆ. ಇನ್ನು ಈ ಹಿಂದೆ ಜಪಾನಿನವರಾದ ಕ್ಯೋಕೊ ಇವಾಸಕಿ ತಮ್ಮ 14ನೇ ವಯಸ್ಸಿನಲ್ಲಿ 1992 ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದು, ಜಪಾನಿನ 2ನೇ ಕಿರಿಯ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

The post ಚೊಚ್ಚಲ ಒಲಿಂಪಿಕ್ಸ್​ನಲ್ಲೇ ಚಿನ್ನ ಗೆದ್ದ 13 ವರ್ಷದ ಬಾಲಕಿ​ appeared first on News First Kannada.

Source: newsfirstlive.com

Source link