ರಾಜಕೀಯ ಏಳುಬೀಳು ಕಂಡ ಬಿಎಸ್​​ವೈಗೆ ನೋವಾಗೋದು ಸಹಜ -ಮಾಜಿ ಸ್ಪೀಕರ್​​ ರಮೇಶ್​​ ಕುಮಾರ್​

ರಾಜಕೀಯ ಏಳುಬೀಳು ಕಂಡ ಬಿಎಸ್​​ವೈಗೆ ನೋವಾಗೋದು ಸಹಜ -ಮಾಜಿ ಸ್ಪೀಕರ್​​ ರಮೇಶ್​​ ಕುಮಾರ್​

ಕೋಲಾರ: ತಮ್ಮ ಸುಧೀರ್ಘ ರಾಜಕಾರಣದಲ್ಲಿ ಸಾಕಷ್ಟು ಏಳುಬೀಳು ಕಂಡ ಬಿ.ಎಸ್​​ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನೋವಾಗೋದು ಸಹಜ ಎಂದು ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್​​ ಕುಮಾರ್​​ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಕಾಂಗ್ರೆಸ್​ ಹಿರಿಯ ನಾಯಕ ರಮೇಶ್​​ ಕುಮಾರ್​​, ಯಡಿಯೂರಪ್ಪ ಬಗ್ಗೆ ಇಂತಹ ಸನ್ನಿವೇಶದಲ್ಲಿ ಯಾವುದೇ ಕಾರಣಕ್ಕೂ ಹಗುರವಾಗಿ ಮಾತಾಡಬಾರದು. ಇವರ ಆರೋಗ್ಯ ಚೆನ್ನಾಗಿರಲಿ, ಜನರ ಮಧ್ಯಯೇ ಇರಲಿ ಎಂದಿದ್ದಾರೆ.

ಯಾವುದೇ ಸಮುದಾಯವೂ ಯಾವ ಪಕ್ಷಕ್ಕೂ ಮೀಸಲಾಗಿಲ್ಲ, ಇದು ನಮ್ಮ ಭ್ರಮೆ. ಸಮುದಾಯಕ್ಕೆ ಒಬ್ಬ ನಾಯಕನ ಸೃಷ್ಟಿ ಅಸಾಧ್ಯ. ಯಡಿಯೂಪ್ಪ ಬಗ್ಗೆ ವೀರಶೈವ ಲಿಂಗಾಯತ ಸಮಾಜಕ್ಕೆ ಹೆಮ್ಮೆ ಇರೋದರಲ್ಲಿ ತಪ್ಪೇನಿಲ್ಲ. ಶಾಸಕರು ಜನರಿಂದಲೇ ಆಯ್ಕೆಯಾಗಬೇಕು. ನಾಯಕರು ಶಾಸಕರಿಂದಲೇ ಆಯ್ಕೆಯಾಗಬೇಕು. ಮಠಾಧೀಶರು ಕೇವಲ ಅಭಿಪ್ರಾಯ ನೀಡಬಹುದಷ್ಟೇ ಎಂದು ತಿಳಿಸಿದರು.

ಹೀಗೆ ಮುಂದುವರಿದ ಅವರು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್​ ಜವಾಬ್ದಾರಿ ಹೆಚ್ಚಿದೆ. ನಮ್ಮ ತಪ್ಪುಗಳನ್ನು ತಿದ್ದುಕೊಂಡು ಜನರಿಗೆ ಪರ್ಯಾಯ ಸರ್ಕಾರ ಕಟ್ಟಿಕೊಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: ‘BSY ಹೋರಾಟಗಾರ.. ಅವರ ಕಣ್ಣೀರು ನೋಡಿದ್ರೆ ಅಸಾಧ್ಯ ಒತ್ತಡವಿದ್ದಿದ್ದು ತಿಳಿಯುತ್ತೆ’

ಬಿ.ಎಸ್​ ಯಡಿಯೂರಪ್ಪ ಅಧಿಕಾರದಲ್ಲಿ ಇಲ್ಲದ ಮಾತ್ರಕ್ಕೆ ನಮಗೆ ಗೆಳತನ ಇರೋದಿಲ್ಲ. ಅಧಿಕಾರದಲ್ಲಿದ್ದ ಮಾತ್ರಕ್ಕೆ ದ್ವೇಷವೂ ಬರೋದಿಲ್ಲ. ಕುಟುಂಬದ ವ್ಯಾಮೋಹ ಕಡಿಮೆ ಮಾಡಿ ಎಂದು ಈಗಾಗಲೇ ಅವರಿಗೆ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

The post ರಾಜಕೀಯ ಏಳುಬೀಳು ಕಂಡ ಬಿಎಸ್​​ವೈಗೆ ನೋವಾಗೋದು ಸಹಜ -ಮಾಜಿ ಸ್ಪೀಕರ್​​ ರಮೇಶ್​​ ಕುಮಾರ್​ appeared first on News First Kannada.

Source: newsfirstlive.com

Source link