‘ಲವ್ ಫೇಲ್ ಆಗಿದೆ’ ಅಂತ ಭಯಂಕರ ‘ಸೂಸೈಡ್ ನಾಟಕ’ವಾಡಿದ ಯುವಕ

‘ಲವ್ ಫೇಲ್ ಆಗಿದೆ’ ಅಂತ ಭಯಂಕರ ‘ಸೂಸೈಡ್ ನಾಟಕ’ವಾಡಿದ ಯುವಕ

ಮುಂಬೈ: ಇನ್​​ಸ್ಟಾಗ್ರಾಂನಲ್ಲಿ ಜನಪ್ರಿಯತೆ ಗಳಿಸಿದ್ದ ವ್ಯಕ್ತಿಯೋರ್ವ ತನ್ನ ನಕಲಿ ಸೂಸೈಡ್ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪೊಲೀಸರಿಂದ ಅರೆಸ್ಟ್ ಆಗಿದ್ದಾನೆ.

ಇರ್ಫಾನ್ ಖಾನ್ ಎಂಬಾತ ತನಗೆ ಲವ್ ಫೇಲ್ಯೂರ್ ಆಗಿದೆ.. ನಾನು ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ ಎಂದು ರೈಲ್ವೇ ಟ್ರ್ಯಾಕ್ ಮೇಲೆ ನಿಂತು ತನ್ನ ಮೇಲೆ ರೈಲು ಹರಿದಂತೆ ವಿಡಿಯೋವೊಂದನ್ನ ಸ್ಪೆಷಲ್ ಎಫೆಕ್ಟ್​ಗಳನ್ನ ಯೂಸ್ ಮಾಡಿ ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ಮೂಲಕ ತನ್ನ ಫಾಲೋವರ್​ಗಳನ್ನ ಹೆಚ್ಚಿಸಿಕೊಳ್ಳಬೇಕೆಂದು ಮುಂದಾದ ಇರ್ಫಾನ್ ಖಾನ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ವೈರಲ್ ಆದ ವಿಡಿಯೋ ಮುಂಬೈ ಪೊಲೀಸರ ಗಮನಕ್ಕೆ ಬಂದಿದ್ದು ಸದ್ಯ ಮುಂಬೈ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆತನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಆರೋಪಿ ತನ್ನ ವಿಡಿಯೋವನ್ನ ಡಿಲೀಟ್ ಮಾಡಿದ್ದು ಪೊಲೀಸರ ಮುಂದೆ ಕ್ಷಮೆ ಕೇಳಿದ್ದಾನಂತೆ. ಅಲ್ಲದೇ ವಿಡಿಯೋದ ಮುಂದುವರೆದ ಭಾಗವಾಗಿ ಪಾರ್ಟ್ 2 ಅನ್ನು ತಯಾರಿಸಬೇಕೆಂದುಕೊಂಡಿದ್ದೆ.. ಆ ಪಾರ್ಟ್​ನಲ್ಲಿ ನಾನು ಸಾವಿನಿಂದ ಎಚ್ಚೆತ್ತುಕೊಂಡು ತಾಯಿಯ ಜೊತೆ ಸಂತಸದಿಂದ ಜೀವನ ಸಾಗಿಸುತ್ತಿರುವ ವಿಡಿಯೋ ಮಾಡಬೇಕೆಂದುಕೊಂಡಿದ್ದೆ ಎಂದು ಹೇಳಿದ್ದಾನೆ.

ಇನ್ನು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 188, 336 ಮತ್ತು 505(1) ಇಂಡಿಯನ್ ರೈಲ್ವೇ ಆ್ಯಕ್ಟ್ 145 ಮತ್ತು 147 ಅಡಿ ಕೇಸ್ ದಾಖಲಿಸಲಾಗಿದೆ.

The post ‘ಲವ್ ಫೇಲ್ ಆಗಿದೆ’ ಅಂತ ಭಯಂಕರ ‘ಸೂಸೈಡ್ ನಾಟಕ’ವಾಡಿದ ಯುವಕ appeared first on News First Kannada.

Source: newsfirstlive.com

Source link