ಹಿರಿಯ ನಟಿ ಜಯಂತಿ ಇನ್ನು ನೆನಪು ಮಾತ್ರ; ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ

ಹಿರಿಯ ನಟಿ ಜಯಂತಿ ಇನ್ನು ನೆನಪು ಮಾತ್ರ; ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ

ಬೆಂಗಳೂರು: ಹಿರಿಯ ನಟಿ ಜಯಂತಿ (76) ಅವರು ಇನ್ನು ನೆನಪು ಮಾತ್ರ. ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾದ ಜಯಂತಿ ಅವರ ಅಂತ್ಯಕ್ರಿಯೆಯು ಹಿಂದೂ ಸಂಪ್ರದಾಯಂತೆ ನೆರವೇರಿತು.

ನಗರದ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆಗೂ ಮುನ್ನ ಜಯಂತಿ ಅವರಿಗೆ ಪೊಲೀಸ್ ಗೌರವ ಸಲ್ಲಿಸಲಾಯತು. ಬಳಿಕ ಅವರ ಪುತ್ರ ಕೃಷ್ಣ ಕುಮಾರ್ ಅವರು ಅಂತಿಮ ವಿಧಿವಿಧಾನವನ್ನ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಯಂತಿ ಕುಟುಂಬದವರು, ಅಭಿಮಾನಿಗಳು, ಚಿತ್ರರಂಗದ ಕೆಲವು ಪ್ರಮುಖರು ಹಾಜರಿದ್ದರು. ಕನ್ನಡದಲ್ಲಿ ಇವರ ಮೊದಲ ಸಿನಿಮಾ ಜೇನು ಗೂಡು. ಒಟ್ಟು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಯಂತಿ ನಟಿಸಿರುವ ಜಯಂತಿ ಕನ್ನಡದ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಕಳೆದ 30 ವರ್ಷಗಳಿಂದ ಜಯಂತಿ ಅಸ್ತಮಾ ಪೇಶೆಂಟ್ ಆಗಿದ್ರು.

ಇದನ್ನೂ ಓದಿ: ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ವಿಧಿವಶ

The post ಹಿರಿಯ ನಟಿ ಜಯಂತಿ ಇನ್ನು ನೆನಪು ಮಾತ್ರ; ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ appeared first on News First Kannada.

Source: newsfirstlive.com

Source link