ರೈತರ ಹೋರಾಟ ಬೆಂಬಲಿಸಿ ಟ್ರ್ಯಾಕ್ಟರ್​​ ಓಡಿಸಿದ ರಾಹುಲ್​​ ಗಾಂಧಿ; ಕೃಷಿ ಕಾಯ್ದೆಗೆ ತೀವ್ರ ವಿರೋಧ

ರೈತರ ಹೋರಾಟ ಬೆಂಬಲಿಸಿ ಟ್ರ್ಯಾಕ್ಟರ್​​ ಓಡಿಸಿದ ರಾಹುಲ್​​ ಗಾಂಧಿ; ಕೃಷಿ ಕಾಯ್ದೆಗೆ ತೀವ್ರ ವಿರೋಧ

ನವದೆಹಲಿ: ನೂತನ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರೈತರ ಹೋರಾಟ ಮುಂದುವರಿದಿದೆ. ಈ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿಯವರು, ಟ್ರಾಕ್ಟರ್​​ ಓಡಿಸುವ ಮೂಲಕ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿದರು.

ಹೌದು, ಇಂದು ರಾಹುಲ್ ಗಾಂಧಿ ಸಂಸತ್​​ಗೆ ಟ್ರಾಕ್ಟರ್​​​ ಓಡಿಸಿಕೊಂಡು ಬಂದರು. ಈ ವೇಳೆ ಮಾತಾಡಿದ ರಾಹುಲ್​​, ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸಂಸತ್​​ಗೆ ಟ್ರಾಕ್ಟರ್​​ ತಂದಿರುವುದಾಗಿ ತಿಳಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರ ಧ್ವನಿ ಅಡಗಿಸುತ್ತಿದೆ ಎಂದು ಕೆಂಡಕಾರಿದರು.

ಸಂಸತ್​​ನಲ್ಲಿ ರೈತರ ಪ್ರತಿಭಟನೆ ಬಗ್ಗೆ ಚರ್ಚಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ಉದ್ಯಮಿಗಳ ಪರ ಎಂದು ಇಡೀ ಜಗತ್ತಿಗೆ ಗೊತ್ತಾಗಿದೆ. ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆಯಲೇಬೇಕು, ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ‘ಷಡ್ಯಂತ್ರ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ’ ಕಾಂಗ್ರೆಸ್​​ ಕಿಡಿ

ರಾಹುಲ್​​ ಗಾಂಧಿ ಅವರೊಂದಿಗೆ ಸಂಸತ್​​ಗೆ ಆಗಮಿಸಿದ ಕಾಂಗ್ರೆಸ್​ ಸಂಸದರು ಕೇಂದ್ರದ ವಿರುದ್ಧ ಘೋಷಣೆಗಳು ಕೂಗಿದರು. 3 ಕೃಷಿ ಕಾನೂನುಗಳ ಹಿಂಪಡೆಯುವಂತೆ ಒತ್ತಾಯಿಸಿದರು.

The post ರೈತರ ಹೋರಾಟ ಬೆಂಬಲಿಸಿ ಟ್ರ್ಯಾಕ್ಟರ್​​ ಓಡಿಸಿದ ರಾಹುಲ್​​ ಗಾಂಧಿ; ಕೃಷಿ ಕಾಯ್ದೆಗೆ ತೀವ್ರ ವಿರೋಧ appeared first on News First Kannada.

Source: newsfirstlive.com

Source link