ರಾಜ್​ಕುಂದ್ರಾ ನೀಲಿ ಚಿತ್ರ ಪ್ರಕರಣ.. ಮಾಡೆಲ್ ಶೆರ್ಲಿನ್ ಚೊಪ್ರಾಗೆ ಸಮನ್ಸ್​

ರಾಜ್​ಕುಂದ್ರಾ ನೀಲಿ ಚಿತ್ರ ಪ್ರಕರಣ.. ಮಾಡೆಲ್ ಶೆರ್ಲಿನ್ ಚೊಪ್ರಾಗೆ ಸಮನ್ಸ್​

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧದ ನೀಲಿ ಚಿತ್ರ ನಿರ್ಮಾಣ ಆರೋಪ ಸದ್ಯ ಬಾಲಿವುಡ್ ಅಂಗಳದಲ್ಲಿ ಕೋಲಾಹಲ ಸೃಷ್ಟಿಸಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಸದ್ಯ ರಾಜ್ ಕುಂದ್ರಾ ಅವರನ್ನ ಬಂಧಿಸಿರುವ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆ ಆರಂಭಿಸುತ್ತಿರುವ ಪೊಲೀಸರಿಗೆ ಪ್ರಕರಣದ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ಹೊಸ ಹೊಸ ಲಿಂಕ್​​ಗಳು ಸಿಗುತ್ತಿವೆ.

ಇದರ ಮುಂದುವರಿದ ಭಾಗವಾಗಿ ಬಾಲಿವುಡ್ ನಟಿ ಹಾಗೂ ಮಾಡೆಲ್​ ಶೆರ್ಲಿನ್ ಚೋಪ್ರಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್​ ನೀಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ಕೋರಿ ನೋಟಿಸ್ ನೀಡಿದ್ದಾರೆ. ಬಾಲಿವುಡ್ ಮೂಲಗಳ ಪ್ರಕಾರ, ಶೆರ್ಲಿನ್ ಚೋಪ್ರಾ ಅವರ ವಿಚಾರಣೆಯ ನಂತರ ಇನ್ನೂ ಅನೇಕ ನಟಿಯರಿಗೆ ಸಮನ್ಸ್ ನೀಡಬಹುದು ಅಂತಾ ಹೇಳಲಾಗಿದೆ.

ರಾಜ್ ಕುಂದ್ರಾ ಅವರು ಅರೆಸ್ಟ್​ ಆದ ಕೆಲವು ದಿನಗಳ ಬೆನ್ನಲ್ಲೇ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಒಂದನ್ನ ಮಾಡಿದ್ದ ಶೆರ್ಲಿನ್ ಚೊಪ್ರಾ.. ಕಳೆದ ಕೆಲವು ದಿನಗಳಿಂದ ಮಾಧ್ಯಮದವರು ಮೆಸೇಜ್, ವಾಟ್ಸ್​​ಆ್ಯಪ್ ಚಾಟ್​, ಕರೆ ಹಾಗೂ ಇ-ಮೇಲ್ ಮಾಡಿ ಈ ಪ್ರಕರಣ ಬೆಳಕಿಗೆ ಬರಲು ನಿಮ್ಮ ಪಾತ್ರ ವಿದೆಯಾ ಎಂದು ಕೇಳುತ್ತಿದ್ದಾರೆ. ಇದೀಗ ನಾನು ಹೇಳ್ತಿರೋದು ಏನಂದ್ರೆ, ಮಜಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದು ಬೇರೆ ಯಾರೂ ಅಲ್ಲ ಎಂದಿದ್ದರು.

 

View this post on Instagram

 

A post shared by Sherni (@sherlynchopraofficial)

The post ರಾಜ್​ಕುಂದ್ರಾ ನೀಲಿ ಚಿತ್ರ ಪ್ರಕರಣ.. ಮಾಡೆಲ್ ಶೆರ್ಲಿನ್ ಚೊಪ್ರಾಗೆ ಸಮನ್ಸ್​ appeared first on News First Kannada.

Source: newsfirstlive.com

Source link