ಏನಮ್ಮ ನಿಮ್ಮಲ್ಲೂ ಮೊಟ್ಟೆ ಕಳ್ಳತನ ಮಾಡ್ತಾರಾ? -ಗೇಲಿ ಮಾಡಿದ ಸಿದ್ದರಾಮಯ್ಯ

ಏನಮ್ಮ ನಿಮ್ಮಲ್ಲೂ ಮೊಟ್ಟೆ ಕಳ್ಳತನ ಮಾಡ್ತಾರಾ? -ಗೇಲಿ ಮಾಡಿದ ಸಿದ್ದರಾಮಯ್ಯ

ಬಾಗಲಕೋಟೆ: ಬದಾಮಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ನ್ಯೂಸ್​ ಫಸ್ಟ್​ ನಡೆಸಿದ ಕುಟುಕು ಕಾರ್ಯಾಚರಣೆಯನ್ನ ಪ್ರಸ್ತಾಪಿಸಿ.. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನ ಗೇಲಿ ಮಾಡಿದರು.

ಬದಾಮಿಗೆ ಆಗಮಿಸಿದ ಸಿದ್ದರಾಮಯ್ಯರನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ವಾಗತಿಸಲು ಬಂದಿದ್ದರು. ಈ ವೇಳೆ ಹೂ-ಗುಚ್ಛ ನೀಡಲು ಬಂದ ಅಧಿಕಾರಿಗೆ ಏನಮ್ಮ..? ನಿಮ್ಮಲ್ಲೂ ಮೊಟ್ಟೆ ಕಳ್ಳತನ ಆಗ್ತಿವೆ ಏನಮ್ಮ? ಎಂದು ಪ್ರಶ್ನೆ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಬೆಂಬಲಿಗರು ನಗೆಗಡಲಲ್ಲಿ ತೇಲಿದರು.

The post ಏನಮ್ಮ ನಿಮ್ಮಲ್ಲೂ ಮೊಟ್ಟೆ ಕಳ್ಳತನ ಮಾಡ್ತಾರಾ? -ಗೇಲಿ ಮಾಡಿದ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link