ಭಾರತ ಹೆಮ್ಮೆಯ ಕಾರ್ಗಿಲ್​​ ಕಲಿ ಮೇಜರ್​​ ರಾಜೇಶ್​​​​ ಸಿಂಗ್​​ ವೀರಗಾಥೆ

ಭಾರತ ಹೆಮ್ಮೆಯ ಕಾರ್ಗಿಲ್​​ ಕಲಿ ಮೇಜರ್​​ ರಾಜೇಶ್​​​​ ಸಿಂಗ್​​ ವೀರಗಾಥೆ

ಅಲ್ಲಿಗೊಮ್ಮೆ ಹೋದರೆ ಮುಗೀತು, ತಿರುಗಿ ವಾಪಸ್ ಬರೋದು ನಿಜಕ್ಕೂ ಅನುಮಾನವೇ. ಆದರೂ ನಮ್ಮ ಸೈನ್ಯ, ಶತ್ರು ಪಾಳಯಕ್ಕೆ ಸೆಡೆ ಮುರಿ ಕಟ್ಟಲು, ಎಗ್ಗಿಲ್ಲದೇ ನುಗ್ಗಿದ್ದರು. ಯಾವುದೇ ಮುಂದಾಲೋಚನೆಗೂ ತಲೆ ಕೊಡದೆ, ನೇರ ನೇರ ಗುಂಡಿನ ದಾಳಿ ನಡೆಸಿದ್ದರು. ಬಂಡೆಗಳ ನಡುವೆ ಅವಿತು ಅಪಾಯಕಾರಿ ದಾಳಿ ನಡೆಸಿದ ಈ ಕ್ರೂರ ದುಷ್ಟರ ಗುಂಡಿನ ದಾಳಿಗೆ ಬಲಿಯಾದ ಮತ್ತೊಬ್ಬ ವೀರ ಯೋಧ ಮೇಜರ್ ರಾಜೇಶ್ ಸಿಂಗ್ ಅಧಿಕಾರಿ. ಇವರ ವೀರ ಮರಣ ರೋಚಕವೆಷ್ಟೋ ಅಷ್ಟೇ ಕರುಣಾಜನಕ.

ಯುದ್ಧಕ್ಕೆ ಹೋಗೋ ಮುಂಚೆ ಒಮ್ಮೆ ತನ್ನ ಜೇಬಿನಲ್ಲಿದ್ದ ಕಾಗದವನ್ನು ನೋಡಿದ್ದರೆ, ವೀರ ಮರಣ ಹೊಂದಿದ ಆತ್ಮ ಇನ್ನಷ್ಟು ಹೆಮ್ಮೆಯಿಂದ ಶಾಂತವಾಗುತ್ತಿತ್ತೋ ಏನೋ. ಹೌದು.. ಇದು ಕಾರ್ಗಿಲ್​​​​ನಲ್ಲಿ ಹೋರಾಡಿ ವೀರ ಮರಣ ಹೊಂದಿದ ಮೇಜರ್ ರಾಜೀಶ್ ಸಿಂಗ್ ಅಧಿಕಾರಿಯವರ ವೀರಗಾಥೆ ಇದು. ಆ ಕಾಗದದಲ್ಲಿ ಏನಿತ್ತು? ಯಾಕೆ ಮೇಜರ್ ರಾಜೇಶ್ ಅದನ್ನು ಓದಲಿಲ್ಲ? ಎಲ್ಲವನ್ನು ಕೇಳಿದರೆ ಆ ವೀರ ಮೃತ ಯೋಧನ ಮೇಲೆ ಕರುಣೆ ಹೆಚ್ಚಾಗುತ್ತದೆ. ಅವರ ತ್ಯಾಗ ಬಲಿದಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ.

ಡಿಸೆಂಬರ್ 25 1970, ಉತ್ತರ ಪ್ರದೇಶದ ನೈನಿತಾಲ್​ನಲ್ಲಿ ಮೇಜರ್ ರಾಜೇಶ್ ಸಿಂಗ್ ಅಧಿಕಾರಿ ಜನಿಸಿದ್ದರು. ತನ್ನ ಶಾಲಾ ದಿನಗಳನ್ನು ಸೇಂಟ್ ಜೋಸೆಫ್​​ನಲ್ಲಿ ಮುಗಿಸಿ, ಸರ್ಕಾರಿ ಪದವಿ ಕಾಲೇಜ್​ನಲ್ಲಿ ತಮ್ಮ ವಿದ್ಯಾಭ್ಯಸವನ್ನು ಮುಗಿಸಿದ್ದರು. ಇಷ್ಟರ ಒಳಗಾಗಲೆ ರಾಜೇಶ್ ಅವರಿಗೆ ಭಾರತೀಯ ಸೇನೆ ಸೇರುವ ಕನಸು ಹುಟ್ಟಿಕೊಂಡ್ಡಿತ್ತು. ಈ ದೇಶದ ಸೇವೆ ಮಾಡಲು ತಾನು ಭಾರತೀಯ ಸೇನೆಯಲ್ಲಿ ಭಾಗಿಯಾಗುತ್ತೆನೆ ಎನ್ನುವ ಆಸೆ ಇಟ್ಟುಕೊಂಡಿದ್ದರು. ಅದರಂತೆ ಡಿಸೆಂಬರ್ 11 1993ರಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪರೀಕ್ಷೆಯನ್ನು ಪಾಸ್ ಮಾಡಿ ಯುವಕರ ರೆಜಿಮೆಂಟ್​ನಲ್ಲಿ ತನ್ನ ಕಾರ್ಯ ಶುರು ಮಾಡಿದ್ದರು.

 

ಇದೆ ರೆಜಿಮೆಂಟ್​​ನಲ್ಲಿ ಸತತ 5 ವರ್ಷಗಳ ಕಾಲ ಯೋಧನಾಗಿ ಸೇವೆ ಸಲ್ಲಿಸದ ರಾಜೇಶ್, ಅಲ್ಲಿಂದ ಮೇಜರ್ ಆಗಿ ಪ್ರಮೋಟ್ ಆಗಿ, 18 ಗ್ರೇನೇಡರೀಸ್ ತಂಡಕ್ಕೆ ನಾಯಕನಾಗಿ ತನ್ನ ಕೆಲಸ ಶುರು ಮಾಡಿದ್ದಾರೆ. ಈ ಹೊತ್ತಿಗೆ ರಾಜೇಶ್ ರವರು ತಮ್ಮ ಬಾಳ ಸಂಗಾತಿಯಾಗಿ ಕಿರಣ್ ಅವರೊಂದಿಗೆ ಮದುವೆ ಆಗಿ ಬಿಡ್ತಾರೆ. ಈ ಸುಖ ಸಂಸಾರ ದಿನಗಳು ಬಿಸಿ ಶಾಕಕ್ಕೆ ಕರಗುವ ಬೆಣ್ಣೆಯಂತೆ ಸಲೀಸಾಗಿ ನಡೆಯುವ ಕಾಲಕ್ಕೆ, ಭಾರತ ಪಾಕ್ ಗಡಿ ತುದಿಯಲ್ಲಿನ ಘರ್ಷಣೆಯ ಸದ್ದು ಕೇಳಿಸಲು ಶುರುವಾಗುತ್ತದೆ. ರಜೆಯ ಮೇಲೆ ಮನೆ ಸೇರಿದ್ದ ಎಲ್ಲ ಯೋಧರಿಗೂ, ಅಧಿಕಾರಿಗಳಿಗೂ ಕೂಡಲೇ ಸೇನೆಗೆ ಸೇರುವಂತೆ ಕರೆ ಬರುತ್ತದೆ.

ದೇಶ ಸೇವೆಯ ಕಿಚ್ಚು 
ಸಂಸಾರ ಸುಖವನ್ನು ಅನುಭವಿಸುತ್ತಿದ್ದ ರಾಜೇಶ್ ಅವರಿಗೆ ಸೇನೆಯ ಕೂಗಿಗೆ ಹಿಂದಿರುಗುವುದಕ್ಕೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ತಕ್ಷಣ ಮನೆಯವರಿಗೆಲ್ಲ ಸಮಾಧಾನ ಹೇಳಿ ಅಲ್ಲಿಂದ ನೇರವಾಗಿ ಕಾರ್ಗಿಲ್ ಯುದ್ಧ ಭೂಮಿಗೆ ಬಂದಿಳಿದ್ದಿದರು. 16 ಸಾವಿರ ಅಡಿ ಎತ್ತರದ ಕಾರ್ಗಿಲ್ ಪ್ರದೇಶ, ಚಳಿಗಾಲದಿಂದ ಹಿಮ ಬರಿತವಾಗಿತ್ತು. ಭಾರತ ಪಾಕ್ ನಡುವಿನ ಜೆಂಟಲ್ ಮೆಂಟ್ ಅಗ್ರಿಮೆಂಟ್ ಪ್ರಕಾರ, ಆ ಒಂದು ಜಾಗಕ್ಕೆ ಎರಡು ದೇಶದವರು ಕಾಲಿಡುವ ಹಾಗಿರಲಿಲ್ಲ. ಆದರೆ ಕುತಂತ್ರಿ ಪಾಕ್ ಭಾರತದ ಕಾರ್ಗಿಲ್ ಪ್ರಾಂತ್ಯಕ್ಕೆ ಬೆಕ್ಕಿನ ಹೆಜ್ಜೆ ಇಡುತ್ತಿತ್ತು. ಸಣ್ಣ ಪುಟ್ಟ ಘರ್ಷಣೆ ನಡೆಸುತ್ತಿದ್ದರು, ಭಾರತೀಯ ಸೇನೆ ಶಾಂತಿಯಿಂದಲೇ ಕಾಯುತ್ತಿತ್ತು. ಆದರೆ ಪಾಕ್ ಆರ್ಮಿಯ ಮೇಲೆ ಒಡಲ ಕಿಚ್ಚು ಹತ್ತಿಸಿಕೊಂಡಿತ್ತು ಭಾರತೀಯ ಸೇನೆ.

ಘರ್ಷಣೆ ತೀವ್ರತೆಗೆ ಹೋಗಬಾರದು, ಇದರಿಂದ ಕೇವಲ ಜೀವ ಹಾನಿ ಎನ್ನುವ ಮನಸ್ಥಿತಿಯಲ್ಲಿದ್ದ ಅಂದಿನ ಅಟಲ್ ಬಿಹಾರಿಯವರ ಸರ್ಕಾರ, ಒಂದು ಕಡೆ ಸರ್ಕಾರಿ ಮಾತುಕತೆಗಳು, ಇನ್ನೊಂದೆಡೆ ಮಿಲಿಟರಿ ಮಾತುಕತೆಗಳನ್ನು ನಡೆಸುತ್ತಿದ್ದರು. ಹೀಗೆ ಒಮ್ಮೆ ಶಾಂತಿಗಾಗಿ ಮಾತುಕತೆಯ ಮುಖಾಂತರ ಬಗೆಹರಿಸಿಕೊಳ್ಳಲು ನಿರ್ಧಾರ ಮಾಡಿದ ಆರ್ಮಿ, ಬಿಳಿ ನಿಶಾನೆಯೊಂದಿಗೆ ಲಾಹೋರ್​​ಗೆ ಬಸ್ ಮೂಲಕ ಎಲ್ಲರೂ ಹೋಗಿರ್ತಾರೆ, ಆದರೆ ಪಾಕಿಸ್ತಾನದಲ್ಲಿ ಎಲ್ಲರೂ ಯುದ್ಧದಲ್ಲಿ ಸೆಣಸಾಡಲು ಸಿದ್ಧವಾಗಿರ್ತಾರೆ, ಭಾರತೀಯ ಮಿಲಿಟರ್ ವಾಹನ ಗಡಿ ದಾಟುತ್ತಿದ್ದಂತೆ ಗುಂಡಿನ ದಾಳಿ ನಡೆಸಿ ಎಷ್ಟೋ ಹಾನಿ ಉಂಟು ಮಾಡುತ್ತಾರೆ. ಈ ಕೃತ್ಯವನ್ನು ಭಾರತೀಯ ಸರ್ಕಾರವಾಗಲಿ, ಭಾರತೀಯ ಸೇನೆಯಾಗಲಿ ಸಹಿಸುವುದಿಲ್ಲ. ಕೂಡಲೇ ಯುದ್ಧದ ಕಹಳೆಯನ್ನು ಮೊಳಗಿಸಿ ಬಿಡ್ತಾರೆ.

blank

ಇದೆ ಕಾರ್ಗಿಲ್ ಮಹಾ ಯುದ್ಧ. ಒಂದು ಸೈನ್ಯದ ಹಿಂದೆ ಮತ್ತೊಂದು ಸೈನ್ಯಗಳು ಶತ್ರು ಪಾಳಯದ ಹುಟ್ಟಡಗಿಸಲು ಕಾದು ಕೂತಿದ್ದರು. ಎರಡನೇ ಹಂತದ ದಾಳಿಯಗೆ ಮೇಜರ್ ರಾಜೇಶ್ ಸಿಂಗ್ ಅಧಿಕಾರಿಯವರ ತಂಡ ಸಿದ್ದವಾಗಿತ್ತು. ಅಧಿಕಾರಿಯವರ ಟ್ರೂಪ್ ಶಸ್ತ್ರಾಸ್ತ್ರ ಪ್ರಯೋಗದಲ್ಲಿ ಪ್ರಭಾವಿಯಾಗಿದ್ದರು. ಆದರೆ ಕಾರ್ಗಿಲ್ ಯುಧ್ದ ಭೂಮಿಯಿಂದ ಬರುತ್ತಿದ್ದ ಸಾವಿನ ಲೆಕ್ಕಗಳು ಆ ಯೋಧರನ್ನು ಕಂಗಾಲಾಗಿಸಿತ್ತು. ಆದರೆ ರಾಜೇಶ್ ಸಿಂಗ್ ಅಲ್ಲಿದ್ದ ಪ್ರತಿ ಯೋಧನ ಬಳಿ ಹೋಗಿ ದೇಶ ಸೇವೆಯ ಕಿಚ್ಚನ್ನು ಹಚ್ಚಿಸಿದರು. ಕುತಂತ್ರಿ ಪಾಕಿಗಳ ಮಾಡಿರುವ ಅನ್ಯಾಯವನ್ನು ನೆನೆಪಿಸಿದರು. ಎಲ್ಲರನ್ನು ಯುದ್ಧಕ್ಕೆ ಸನ್ನದ್ಧರಾಗಿಸಿ, ಶತ್ರು ಪಾಳಯದ ಎದೆ ಸೀಳಲು ಸಿದ್ಧರಾಗಿ ನಿಂತಿದ್ದರು.

ಪತ್ನಿಯನ್ನ ನೆನೆದು ಪತ್ರ
ಈ ಘರ್ಷಣೆಗಳ ನಡುವೆ ರಾಜೇಶ್ ಸಿಂಗ್ ರವರಿಗೆ ನೆನಪಾಗಿದ್ದು ತನ್ನ ಕುಟುಂಬದವರು. ಮದುವೆಯಾಗಿ 8 ತಿಂಗಳಾಗಿದ್ದ ಗರ್ಭೀಣಿ ಪತ್ನಿ. ತಾನು ಇನ್ನು ಕೆಲವು ದಿನಗಳಲ್ಲಿ ಯುದ್ಧ ಭೂಮಿಗೆ ಹೋಗಬಹುದು, ಅಲ್ಲಿ ತನ್ನ ಜೀವಕ್ಕೆ ಏನು ಬೇಕಾದರೂ ಆಗಬಹುದು ಎನ್ನುವ ಚಿಂತನೆಯಿಂದ, ತನ್ನ ಪತ್ನಿಯನ್ನು ನೆನೆದು ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ತನ್ನೆಲ್ಲ ಪ್ರೀತಿಯನ್ನು ತುಂಬಿ ಬರೆದಿರುತ್ತಾರೆ.

ದೇಶದ ಸುರಕ್ಷತೆ, ಮರ್ಯಾರೆ ಹಾಗೂ ದೇಶವನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿ ಭಾರತೀಯ ಸೇನೆಯ ಮೇಲಿದೆ. ಇದರಲ್ಲಿ ನನ್ನ ಭಾಗವೂ ಕಂಡಿತ ಇದ್ದೆ ಇರುತ್ತದೆ. ಕಾರ್ಗಿಲ್​​ನಲ್ಲೆ ನಿರಂತರವಾಗಿ ದಾಳಿ ಪ್ರತಿದಾಳಿಗಳು ನಡೆಯುತ್ತಲೆ ಇದೆ. ಇನ್ನು ಕೆಲವು ದಿನಗಳಲ್ಲಿ ನಾನು ಆ ಯುದ್ಧ ಭೂಮಿಯಲ್ಲಿ ಹೋರಾಡಬೇಕಾಗಬಹುದು. ಈ ವೇಳೆ ನನಗೆ ಏನೇ ಆದರು ನನ್ನನ್ನು ಕ್ಷಮಿಸು. ನಿನ್ನ ಒಡಲಲ್ಲಿ ಇರುವ ಪುಟ್ಟ ಕಂದಮ್ಮಗೆ ಈ ಕಾರ್ಗಿಲ್ ನೆಲೆಕ್ಕೆ ಕರೆತಂದು, ಈ ಜಾಗದಲ್ಲಿ ನಿನ್ನ ತಂದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳು ಎಂದಿದ್ದರು.

ಈ ಪ್ರೀತಿಯ ಪತ್ರ ಕಿರಣರಿಗೆ ತಲುಪಿದೆ. ಮನೆಯವರೆಲ್ಲ ಮಗನ ಬರುವಿಕೆಗೆ ಪ್ರಾರ್ಥನೆಯನ್ನು ಶುರು ಮಾಡಿದ್ದಾರೆ. ಆದರೆ ರಾಜೇಶರ ಪತ್ನಿ ಕಿರಣ ಮಾತ್ರ, ಹೆಮ್ಮೆಯ ನಗು ಬೀರಿ ತನ್ನ ಪ್ರೀತಿಯ ರಾಜೇಶ್ ಗೆ ಮರು ಉತ್ತರದ ಪತ್ರ ಬರೆದಿದ್ದಾರೆ. ಈ ಹೊತ್ತಿಗಾಗಲೇ, ಪಾಕಿಸ್ತಾನಿಯರ ದಾಳಿ ಹೆಚ್ಚಾಗಿದೆ. ರಾಜೇಶ್ ತನ್ನ ಟ್ರೂಪ್ ಜೊತೆ ಆಕಾಶ ಮಾರ್ಗವಾಗಿ ಹೆಲಿಕಾಪ್ಟರ್ ಮೂಲಕ ಚಲಿಸಿ ಅಲ್ಲಿ ಇಲ್ಲಿ ಇಲಿಗಳಂತೆ ಅಡಗಿ ಕೂತಿದ್ದ ಪಾಕ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ, ಆ ಯೋಧರ ಎಡೆ ಮುಡಿಕಟ್ಟಿದ್ದಾರೆ.

blank

ಯುದ್ಧ ಶುರುವಾಗಿ ತಿಂಗಳಾಗುತ್ತಿತ್ತು. ದಿನೇ ದಿನೇ ದಾಳಿಗಳು ಹೆಚ್ಚಾಗುತ್ತಲೇ ಇತ್ತು. ಹಗಲು ರಾತ್ರಿಯೆನ್ನದೆ ದಾಳಿಗೆ ಪ್ರತಿದಾಳಿಗಳು ನಡೆಯುತ್ತಲೆ ಇತ್ತು. ಮೇ 30ರಂದು ಯುದ್ಧಕ್ಕೆ ಹೋಗುವಾಗ ರಾಜೇಶ್ ಅವರ ಕೈಗೆ ಒಂದು ಪತ್ರ ಬಂದು ತಲುಪುತ್ತದೆ. 10 ತಿಂಗಳ ಹಿಂದೆಯಷ್ಟೆ ಕೈ ಹಿಡಿದ ಪತ್ನಿಯ ಪತ್ರ ಅದು. ತಾನು ಬರೆದ ಪತ್ರಕ್ಕೆ ಉತ್ತರ ಪತ್ರ ಅದು. ಆ ಒಂದು ಪತ್ರಕ್ಕಾಗಿ ರಾಜೇಶ್ ರವರು ಕಾತುರರಾಗಿದ್ದರು. ಅದರಲ್ಲಿ ತನ್ನ ಪತ್ನಿ ತನ್ನ ಪ್ರೀತಿಯನ್ನು ಹೇಳಿರುವುದು ರಾಜೇಶ್ ಕೇಳ ಬೇಕಿತ್ತು. ಆದರೆ ಅವರನ್ನು ಆ ಒಂದು ಪತ್ರವನ್ನು ಓದಲು ಅವರ ತಡೆದಿದ್ದು ಕರ್ತವ್ಯ.

ಪ್ರೀತಿಯನ್ನು ಹೇಳಿರುವುದು ರಾಜೇಶ್ ಕೇಳ ಬೇಕಿತ್ತು..
ಯುದ್ಧ ಭೂಮಿಗೆ ಹೋಗಲು ಸಿದ್ಧವಾಗಿ ನಿಂತಿದ್ದ ರಾಜೇಶ್ ರವರು ಪತ್ರ ತೆಗೆದು ಓದಿದರೆ ಎಲ್ಲಿ ಭಾವುಕರಾಗಿ, ತನ್ನ ಪರಾಕ್ರಮದಲ್ಲಿ ಕುಂದಿ ಬಿಡುತ್ತಾರೋ ಎನ್ನುವ ಭಯ ಕಾಡಿದೆ. ಯುದ್ಧಕ್ಕೆ ಹೋಗುವಾಗ ತಾಯಿ ಭಾರತಿಯ ನೆನಪಾಗಬೇಕೇ ಹೊರತು ಪತ್ನಿಯದ್ದಲ್ಲ ಎಂದು ಅದನ್ನು ತಮ್ಮ ಜೇಬಿನಲ್ಲೇ ಇಟ್ಟು ಕೊಂಡು ಮುಂದೆ ಸಾಗಿದರು. 16000 ಅಡಿ ಎತ್ತರದ ಕಾರ್ಗಿಲ್ ಪ್ರದೇಶ, ಕಣ್ಣಿಗೆ ಕಂಡರು ಕಾಣಿಸದಂತ ಪಾಕ್ ಬಂಕರ್​​ಗಳು ಅಲ್ಲಿ ಇಲ್ಲಿ. ಈ ಯುದ್ಧ ಭೂಮಿಯಲ್ಲಿ ನಡೆದು ಹೋಗುವುದು ಅಕ್ಷರಶಃ ನರಕದಲ್ಲಿ ನಡೆದಂತೆ ಇತ್ತು.

ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಮಿಷನ್ ಗನ್​​​ಗಳಿಂದ ಒಂದೇ ಸಮನೆ ರಭಸದ ಬುಲೆಟ್ಸ್ ಗಳು ಹೌಹಾರಿ ಬಂದವು. ಇದಕ್ಕೆ ಪ್ರತಿಯಾಗಿ ರಾಜೇಶ್ ರವರು 2 ರಾಕೆಟ್ ಲಾಂಚರ್ ಗಳನ್ನು ಆ ಬಂಕರ್ ಗಳಿಗೆ ಸಿಡುಸುವಂತೆ ಹೇಳಿ, ಅಲ್ಲಿದ್ದ ಮೂರ್ನಾಲ್ಕು ಪಾಕ್ ಸೈನಿಕರನ್ನು ಉಡಾಯಿಸಿದರು. ಹೆಜ್ಜೆ ಸದ್ದು ಕೇಳದಂತೆ ಮುಂದೆ ನಡೆಯುದಾಗ ಅಲ್ಲೆ ಇದ್ದ ಮೃತ್ಯು ಸ್ವರೂಪದ 4 ರಾಕ್ಷಸ ಪಾಕಿಗಳು ಹಿಂದೆ ಮುಂದೆಯಿಂದ ಮಿಷಿನ್ ಗನ್ ನಲ್ಲಿ ರಾಜೇಶ್ ಮೇಲೆ ಫೈರಿಂಗ್ ಆಗಿದೆ.

ಆ ಭೀಕರ ನೋವಿನಲ್ಲೂ ರಾಜೇಶ್ ತನ್ನ ಬಳಿಯಿದ್ದ ವೆಪನ್ ನಿಂದ ತಿರುಗು ಬಾಣವಾಗಿ ಇಬ್ಬರು ಪಾಕ್ ಯೋಧರನ್ನು ಬಲಿ ಪಡೆದಿದ್ದಾರೆ. ಶತ್ರು ಪಾಳಯದಿಂದ ಹೊರಟು ಬಂದ ಬುಲೆಟ್ಸ್ ನೇರವಾಗಿ ರಾಜೇಶ್ ಅವರ ಹೃದಯಕ್ಕೆ ನಾಟಿ, ಉಸಿರು ಉಳಿಸಿಕೊಳ್ಳಲು ಪರದಾಡಿದ್ದಾರೆ. ಆಗ ಅವರಿಗೆ ನೆನಪಿಗೆ ಬಂದಿದ್ದೆ ತನ್ನ ಪತ್ನಿ ಬರೆದ ಪತ್ರ ಜೇಬಿನಲ್ಲೆ ಇರೋದು. ಮೊಬ್ಬು ಕಣ್ಣಗಳಲ್ಲೆ ಅದನ್ನು ತೆಗೆಯಲು ಆಗದೆ ರಾಜೇಶ್ ವೀರ ಮರಣವಾಗಿದ್ದಾರೆ.

ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡುತ್ತ ವೀರ್ಗತಿಯನ್ನು ಹೊಂದಿದ ಅವರ ಶರೀರ 15 ದಿನಗಳವರೆಗೂ ಅದೇ ಜಾಗದಲ್ಲಿತ್ತು. ಮೇಜರ್ ರಾಜೇಶ್ ಹತರಾಗಿದ್ದಾರೆ ಅವರ ಶರೀರವನ್ನು ತರಲು ಸಾಧ್ಯವಾಗುತ್ತಿಲ್ಲ ಎಂದು ಮನೆಗೆ ವಿಷಯ ಮುಟ್ಟಿಸಿದ್ದಾರೆ. ಇದರಿಂದ ಮನೆಯವರೆಲ್ಲ ಕಂಗೆಟ್ಟು ಹೋದರು. ಪತ್ನಿ ಕಿರಣ್ ಹೆಮ್ಮೆಯಿಂದ ಉಸಿರಾಡಿದ್ದರು. 15 ದಿನದ ಬಳಿಕ ಅವರ ಶವ ಮನೆಗೆ ಬಂದಾಗಲೂ ಅವರ ಪತ್ನಿ ಕಣ್ಣೀರು ಹಾಕಿರಲಿಲ್ಲ. ನನ್ನ ಪತಿ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆಂಬ ಹೆಮ್ಮೆ ಅವರಲ್ಲಿತ್ತು. ಆದರೆ, ತಾವು ಬರೆದಿದ್ದ ಪತ್ರವನ್ನು ತೆರೆಯದೆ ಹಾಗೆಯೇ ಜೇಬಿನಲ್ಲಿ ಇಟ್ಟುಕೊಂಡಿರುವುದನ್ನು ನೋಡಿ ಅವರಿಗೆ ದುಃಖ ತಡೆಯಲಾಗಲಿಲ್ಲ. ನಿಂತಲ್ಲೆ ಕುಸಿದು, ಅದನ್ನು ಒಮ್ಮೆಯಾದರೂ ನೋಡಬಾರದೆ ಎಂದು ಗೋಳಾಡಿದರು ಕಿರಣ್.

ಪ್ರೀತಿಯ ರಾಜೇಶ್​ ಯುದ್ಧಕ್ಕೆ ಹೊರಟಿದ್ದಿರಿ. ನಿಮ್ಮ ದಿಟ್ಟ ತನ ಹಾಗೆ ಇರಲಿ, ಶತ್ರುಗಳನ್ನು ಬಿಡದೆ ಸೆದೆಬಡಿಯುವ ಸಾಮರ್ಥ್ಯ ನಿಮ್ಮಲ್ಲಿದೆ. ಎಲ್ಲವನ್ನು ಜಯಿಸಿ ಬನ್ನಿ. ಹಾಗೊಂದು ವೇಳೆ ನೀವು ಹುತಾತ್ಮರಾದರೆ, ನನ್ನ ಹೊಟ್ಟೆಯಲ್ಲಿ ಇರುವ ಮಗುವಿಗೆ ಆ ಕಾರ್ಗಿಲ್ ಪ್ರದೇಶವನ್ನು ಹೆಮ್ಮೆಯಿಂದ ತೋರಿಸುತ್ತೆನೆ. ಕಾರ್ಗಿಲ್ ಯುದ್ಧದ ಬಗ್ಗೆ ವಿವರವಾಗಿ ಹೇಳುತ್ತೇನೆ. ಅದರಲ್ಲಿ ತನ್ನ ತಂದೆಯ ಪಾತ್ರವನ್ನು ತಿಳಿಸುತ್ತೆನೆ. ಅಷ್ಟೆ ಅಲ್ಲ ಹುಟ್ಟುವ ಮಗು ಗಂಡಾಗಲಿ, ಹೆಣ್ಣಾಗಲಿ ಭಾರತೀಯ ಸೇನೆಗೆ ಸೇರಿಸುತ್ತೆನೆ. ನಿಮ್ಮಂತೆ ವೀರನಾಗಲು ಹೇಳುತ್ತೇನೆ ಎಂದು ಬರೆದಿದ್ದಾರೆ.

blank

ಈ ಪತ್ರವನ್ನೊಮ್ಮೆ ಯುದ್ಧಕ್ಕೆ ಹೋಗುವ ಮುಂಚೆ ಮೇಜರ್ ರಾಜೇಶ್ ಸಿಂಗ್ ಅಧಿಕಾರಿಯವರು ಓದಿದ್ದರೆ, ಅದೆಷ್ಟು ಹೆಮ್ಮೆ ಪಡುತ್ತಿದ್ದರೋ ಗೊತ್ತಿಲ್ಲ. ಆದ್ರೆ ಆ ಜೇಬಿನಲ್ಲಿ ಈ ಪತ್ರ ತನ್ನ ಪತ್ನಿಯ ಆಶಯವನ್ನು ಹಿಡಿದು ಅವರ ಜೊತೆಗೆ ಅಮರತ್ವವನ್ನು ಹೊಂದಿದೆ. ಈ ವೀರ ಯೋಧನನ್ನು ಇಂದು ಕಾರ್ಗಿಲ್ ವಿಜಯ ದಿವಸದ ದಿನ ನೆನೆಯಲು ನಮಗೂ ಹೆಮ್ಮೆ ಆಗುತ್ತದೆ.

ವಿಶೇಷ ವರದಿ: ಸುಮುಖ್ ಪರಾಶರ

The post ಭಾರತ ಹೆಮ್ಮೆಯ ಕಾರ್ಗಿಲ್​​ ಕಲಿ ಮೇಜರ್​​ ರಾಜೇಶ್​​​​ ಸಿಂಗ್​​ ವೀರಗಾಥೆ appeared first on News First Kannada.

Source: newsfirstlive.com

Source link