ನಾನು ನನ್ನ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ: ನಿರಾಣಿ

– ಸಿಎಂ ಯಾರಾಗ್ತಾರೆ ಗೊತ್ತಿಲ್ಲ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ದೆಹಲಿಗೆ ತೆರಳಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಬೆಂಗಳೂರಿಗೆ ವಾಪಸ್ ಆಗಿದ್ದು, ನಾನು ನನ್ನ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ ಎಂದು ಹೇಳಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಿರಾಣಿ, ಮಾಧ್ಯಮದಲ್ಲಿ ಬರುತ್ತಿರೋ ವಿಷಯ ಸತ್ಯಕ್ಕೆ ದೂರವಾದದ್ದು. ಆರ್.ಎಸ್.ಎಸ್ ಜೊತೆಗೆ ಕಳೆದ 30 ವರ್ಷದಿಂದ ಸಂಬಂಧ ಇದೆ. ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಾ ಇದ್ದೇನೆ. ಹೈಕಮಾಂಡ್‍ಗೆ ಒಂದೂವರೆ ಸಾವಿರ ಕೋಟಿ ರೂಪಾಯಿ ಹಣ ಕೊಟ್ಟು ಮುರಗೇಶ್ ನಿರಾಣಿ ಸಿಎಂ ಆಗ್ತಾರೆ ಎನ್ನುವ ವಿಚಾರ ಸುಳ್ಳು. ನಾನೊಬ್ಬ ರೈತನ ಮಗ. ಕಾರ್ಮಿಕರಿಗೆ ಸಂಬಳ ಕೊಟ್ಟುಕೊಂಡು ಬಂದಿದ್ದೇನೆ. ಹೊರತು ಬೇರೆ ಯಾರಿಗೂ ಹಣ ಕೊಟ್ಟಿಲ್ಲ. ಬಿಜೆಪಿಯಲ್ಲಿ ಹಣ ತೆಗೆದುಕೊಳ್ಳುವ, ಕೊಡುವ ಸಂಸ್ಕೃತಿ ಇಲ್ಲ ಎಂದರು. ಇದನ್ನೂ ಓದಿ: ಲಿಂಗಾಯತ ಸಮುದಾಯಕ್ಕೆ ಸಿಎಂ ಸ್ಥಾನ ಸಾಧ್ಯತೆ – ಬೆಲ್ಲದ್, ನಿರಾಣಿ ಮಧ್ಯೆ ಭಾರೀ ಪೈಪೋಟಿ

ನಾನು ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಯಾರ ಅಪಾಯಿಂಟ್ಮೆಂಟ್ ಕೂಡ ಪಡೆದಿರಲಿಲ್ಲ. ನನ್ನ ಸಿಎಂ ಮಾಡುವಂತೆ ಯಾರ ಬಳಿ ಲಾಬಿ ಮಾಡಿಲ್ಲ. ಬಿಜೆಪಿಯಲ್ಲಿ ಆ ಪ್ರವೃತ್ತಿ ಇಲ್ಲ. ಸಾವಿರಾರು ಕೋಟಿ ಕೊಟ್ಟು ಸಿಎಂ ಅಗೋದೆಲ್ಲಾ ಸುಳ್ಳು ಅದೆಲ್ಲಾ ಸತ್ಯಕ್ಕೆ ದೂರವಾದ ವಿಷಯ. ವಿಜಯೇಂದ್ರಗೆ ಫ್ಲವರ್ ಕೊಡುವ ಫೋಟೋ ವೈರಲ್ ಆಗಿದೆ. ಅದು ಅವರು ಉಪಾಧ್ಯಕ್ಷ ಆಗಿರುವಾಗ ಕೊಡುತ್ತಿರೋ ಫ್ಲವರ್. ಸಿಎಂ ಯಾರು ಅಗುತ್ತಾರೆ ಅನ್ನೋದು ಗೊತ್ತಿಲ್ಲ. ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಿಯೋಗ ಬರುತ್ತೆ ನಾಳೆ. ಅವರು ಬಿಎಸ್‍ವೈ ಸೇರಿದಂತೆ ಶಾಸಕರ ಒಲವು ನೋಡಿಕೊಂಡು ಸಿಎಂ ಆಯ್ಕೆ ಮಾಡುತ್ತಾರೆ ಎಂದರು.

The post ನಾನು ನನ್ನ ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ: ನಿರಾಣಿ appeared first on Public TV.

Source: publictv.in

Source link