BSY ರಾಜೀನಾಮೆ ಆಯ್ತು.. ಯಾರಾಗ್ತಾರೆ ಮುಂದಿನ ಸಿಎಂ? ಇಂದು ಬಿಜೆಪಿ ಸಂಸದೀಯ ಸಭೆ

BSY ರಾಜೀನಾಮೆ ಆಯ್ತು.. ಯಾರಾಗ್ತಾರೆ ಮುಂದಿನ ಸಿಎಂ? ಇಂದು ಬಿಜೆಪಿ ಸಂಸದೀಯ ಸಭೆ

ನಾಯಕತ್ವ ಬದಲಾವಣೆ ಬೆಳವಣಿಗೆಗೆ ಕೊನೆಗೂ ತೆರೆ ಬಿದ್ದಿದೆ. ಹೈಕಮಾಂಡ್ ಹೇಳಿದಂತೆ ಸಿಎಂ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ಬಿಎಸ್​ವೈ ಏನೋ ಗದ್ದುಗೆಯಿಂದ ಇಳಿದ್ರು. ಆದ್ರೆ ಮುಂದಿನ 2 ವರ್ಷಗಳ ಕಾಲ ಕರ್ನಾಟಕದ ಅಧಿಕಾರದ ಚುಕ್ಕಾಣಿ ಹಿಡಿಯೋರು ಯಾರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಬಿ.ಎಸ್ ಯಡಿಯೂರಪ್ಪ ಬಿಜೆಪಿ ದೆಹಲಿ ವರಿಷ್ಠರು ಹೇಳಿದಂತೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿದಿದ್ದಾರೆ. ಬಿಎಸ್​​​ವೈ ರಾಜೀನಾಮೆಯಿಂದಾಗಿ ಸಿಎಂ ಕುರ್ಚಿ ಈಗ ಖಾಲಿ ಇದೆ. ಆ ಕುರ್ಚಿ ಮೇಲೆ ಯಾರು ಕೂರ್ತಾರೆ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಉದ್ಭವಿಸಿದೆ. ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇದ್ರ ಜೊತೆಗೆ 2023ರ ಚುನಾವಣೆ ಹಾಗೂ ಜಾತಿ, ಸಮುದಾಯದ ಲೆಕ್ಕಾಚಾರ ಬೇರೆ ಇದೆ. ಹೀಗಾಗಿ ನಾಯಕರಿದ್ರೂ ಯಾರನ್ನ ಫೈನಲ್ ಮಾಡ್ಬೇಕು ಅನ್ನೋದು ಸದ್ಯ ಹೈಕಮಾಂಡ್​​​​​​​ಗೆ ಸವಾಲಾಗಿದೆ.

blank

ಮುಂದಿನ ಸಿಎಂ ಹೆಸರನ್ನ ಬಿಎಸ್​ವೈ ಬಾಯಿಂದಲೇ ಘೋಷಣೆ ಹೈಕಮಾಂಡ್ ಪ್ಲಾನ್ ಹಾಕಿದೆ ಎನ್ನಲಾಗಿತ್ತು. ಆದ್ರೆ ಯಡಿಯೂರಪ್ಪ ಮುಂದಿನ ಸಿಎಂ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಬಿಜೆಪಿ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರದ ಮೇಲಿದೆ.

ಸಿಎಂ ಆಯ್ಕೆ ಸಂಬಂಧ ಇಂದು ಬಿಜೆಪಿ ಸಂಸದೀಯ ಸಭೆ
ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ದೆಹಲಿ ಮಟ್ಟದಲ್ಲಿ ಸಕ್ರಿಯಗೊಂಡಿದೆ. ಬಿಎಸ್​ವೈ ರಾಜೀನಾಮೆ ನೀಡ್ತಿದ್ದಂತೆ ಸಂಭಾವ್ಯ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಜ್ಯದ ಹತ್ತಾರು ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿವೆ. ಆದ್ರೆ ದೆಹಲಿ ವರಿಷ್ಠರು ಮಾತ್ರ ರಾಜ್ಯದ ಸಿಎಂ ಬಗ್ಗೆ ಸಸ್ಪೆನ್ಸ್ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಇವತ್ತು ಬೆಳಗ್ಗೆ ಬಿಜೆಪಿ ಸಂಸದೀಯ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿ ಕೆಲವು ನಾಯಕರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದ ದಿನ ಸಿಎಂ ಯಾರೆಂಬುದು ಬಹುತೇಕ ನಿರ್ಧಾರವಾಗಲಿದೆ.

blank

ಇನ್ನು ನೂತನ ಸಿಎಂ ಸ್ಥಾನಕ್ಕೆ ಹೊಸಮುಖ, ಶುದ್ಧಹಸ್ತ ರಾಜಕಾರಣಿಗೆ ಸಿಎಂ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರ, ಗೋವಾ ಮಾದರಿಯಲ್ಲಿ ಹೊಸಬರ ಆಯ್ಕೆ ಆಗುವ ಸಾಧ್ಯತೆ ಇದೆ. ಮುಂದಿನ ಮುಖ್ಯಮಂತ್ರಿ ಆಯ್ಕೆ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇಬ್ಬರು ವೀಕ್ಷಕರನ್ನು ರಾಜ್ಯಕ್ಕೆ ಕಳುಹಿಸಲು ನಿರ್ಧರಿಸಿದೆ. ಕೇಂದ್ರದ ಮಾನವ ಸಂಪನ್ಮೂಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಅಲ್ಲದೆ ನಾಳೆ ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ನಡೆಯಲಿದೆ ಎನ್ನಲಾಗಿದ್ದು, ಅಲ್ಲಿ ವೀಕ್ಷಕರಾಗಿ ಆಗಮಿಸುವ ಹೈಕಮಾಂಡ್ ನಾಯಕರಿಂದ ಮುಂದಿನ ಸಿಎಂ ಯಾರು ಅನ್ನೋದು ಘೋಷಿಸಲಿದ್ದಾರೆ ಎನ್ನಲಾಗ್ತಿದೆ. ಹಾಗಾಗಿ ಗುರುವಾರ ಅಥವಾ ಶುಕ್ರವಾರ ರಾಜ್ಯದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

blank

ಸಿಎಂ ರೇಸ್​ನಲ್ಲಿರುವ ಬೀಳಗಿ ಶಾಸಕ ಮುರುಗೇಶ್ ನಿರಾಣಿ, ದೆಹಲಿಯಲ್ಲಿ ಕೆಲ ದಿನ ವಾಸ್ತವ್ಯ ಹೂಡಿದ್ದರು. ಸಿಎಂ ಸ್ಥಾನಕ್ಕೆ ಬಿಎಸ್​ವೈ ರಾಜೀನಾಮೆ ನೀಡ್ತಿದ್ದಂತೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಸಿಎಂ ಯಾರಾಗ್ತಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿರಾಣಿ, ಯಾರಾಗ್ತಾರೆ ಅಂತ ನನಗೆ ಗೊತ್ತಿಲ್ಲ. ಹೊಸ ಮುಖ ಸಿಎಂ ಆಗಿ ಬರಬಹುದು ಎಂದಿದ್ದಾರೆ.

ಬಿಎಸ್​ವೈ ಬದಲಾವಣೆ ಬೆಳವಣಿಗೆಗೆ ತೆರೆ ಬಿದ್ದಾಯ್ತು. ಆದ್ರೆ ರಾಜ್ಯದ ಮುಂದಿನ ಸಿಎಂ ಯಾರು? 2 ವರ್ಷಗಳ ಕಾಲ ರಾಜ್ಯವನ್ನ ಮುನ್ನಡೆಸೋರು ಯಾರು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯ ಉದ್ಭವಿಸಿರೋ ಈ ಪ್ರಶ್ನೆಗೆ ಇನ್ನೆರಡು ದಿನದಲ್ಲಿ ಉತ್ತರ ಸಿಗಲಿದೆ.

The post BSY ರಾಜೀನಾಮೆ ಆಯ್ತು.. ಯಾರಾಗ್ತಾರೆ ಮುಂದಿನ ಸಿಎಂ? ಇಂದು ಬಿಜೆಪಿ ಸಂಸದೀಯ ಸಭೆ appeared first on News First Kannada.

Source: newsfirstlive.com

Source link