ಬಿಜೆಪಿಯಲ್ಲಿ ಮಂತ್ರಿ ಸ್ಥಾನಕ್ಕೆ ಓಪನ್ ವಾರ್ -ಮಂತ್ರಿಗಿರಿಗಾಗಿ ಸಿಡಿದೆದ್ದ ಮಾಮನಿ!

ಬಿಜೆಪಿಯಲ್ಲಿ ಮಂತ್ರಿ ಸ್ಥಾನಕ್ಕೆ ಓಪನ್ ವಾರ್ -ಮಂತ್ರಿಗಿರಿಗಾಗಿ ಸಿಡಿದೆದ್ದ ಮಾಮನಿ!

ಬೆಂಗಳೂರು: ಬಿಎಸ್ ಯಡಿಯೂರಪ್ಪ ಬದಲಾವಣೆ ಪ್ರಹಸನಕ್ಕೆ ತೆರೆ ಬಿದ್ದಿದೆ. ಕಳೆದೊಂದು ವಾರದಿಂದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ರಾಜೀನಾಮೆ ಪ್ರಸಂಗಕ್ಕೆ ಖುದ್ದು ಯಡಿಯೂರಪ್ಪನವರೇ ತೆರೆ ಎಳೆದಿದ್ದಾರೆ. ಸರ್ಕಾರಕ್ಕೆ 2 ವರ್ಷ ಪೂರೈಸಿದ ಸಂದರ್ಭದಲ್ಲೇ ಬಿಎಸ್​ವೈ ಪದತ್ಯಾಗ ಘೋಷಿಸಿ ಭಾವುಕ ವಿದಾಯ ಹೇಳಿದ್ದಾರೆ. ಸಿಎಂ ರಾಜೀನಾಮೆಯಿಂದಾಗಿ ಹಾಲಿ ಸರ್ಕಾರವನ್ನ ವಿಸರ್ಜನೆ ಮಾಡಿದ್ದಾರೆ. ಇದೀಗ ಹೊಸ ಮಂತ್ರಿ ಮಂಡಲ ರಚನೆಯಾಗಬೇಕಿದ್ದು, ಸಚಿವಕಾಂಕ್ಷಿಗಳು ಪಟ್ಟಕ್ಕಾಗಿ ಲಾಬಿ ಶುರು ಮಾಡಿದ್ದಾರೆ.

blank

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಲೇ ಇದೀಗ ಸಚಿವಾಕಾಂಕ್ಷಿಗಳು ಮಂತ್ರಿಗಿರಿಗಾಗಿ ಲಾಬಿ ಸ್ಟಾರ್ಟ್ ಮಾಡಿದ್ದಾರೆ. ಸಿಎಂ ರಾಜೀನಾಮೆಯಿಂದಾಗಿ ರಾಜ್ಯಪಾಲರು ಹಾಲಿ ಸರ್ಕಾರವನ್ನ ವಿಸರ್ಜನೆ ಮಾಡಿದ್ದಾರೆ. ಇದೀಗ ಹೊಸ ಮಂತ್ರಿ ಮಂಡಲ ರಚನೆಯಾಗಬೇಕಿದ್ದು, ನೂತನ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕಸರತ್ತು ಶುರು ಮಾಡಿದ್ದಾರೆ.

ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಮಾಮನಿ
ಕರ್ನಾಟಕದ ಬಿಜೆಪಿ ಭೀಷ್ಮ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಭಾವುಕರಾಗಿ ರಾಜೀನಾಮೆ ಪ್ರಕಟಿಸಿ ಬೆನ್ನಲ್ಲೇ ಕಮಲ ಪಾಳಯದಲ್ಲಿ ಮಂತ್ರಿ ಪಟ್ಟಕ್ಕಾಗಿ ಬಹಿರಂಗ ಸಮರ ಶುರುವಾಗಿದೆ. ರಾಜೀನಾಮೆ ಬೆದರಿಕೆ ಮೂಲಕ ಒತ್ತಡ ತಂತ್ರ ಹಾಕಲು ಮುಂದಾಗಿದ್ದಾರೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

blank

ಹೊಸ ಸರ್ಕಾರದ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆನಂದ್ ಮಾಮನಿ ವಿಧಾನಸಭಾ ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. ಬಹಿರಂಗವಾಗಿಯೇ ಮಂತ್ರಿ ಸ್ಥಾನಕ್ಕೆ ಆನಂದ ಮಾಮನಿ ಒತ್ತಾಯಿಸಿರುವ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಶಾಸಕ ಆನಂದ ಮಾಮನಿ, ಹೊಸ ಮಂತ್ರಿ ಮಂಡಲದಲ್ಲಿ ನನಗೆ ಸಚಿವ ಸ್ಥಾನ ಕೊಡಲೇಬೇಕು. ಮಂತ್ರಿ ಸ್ಥಾನ ಕೊಡದಿದ್ದರೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಎಚ್ಚರಿಸಿದ್ದಾರೆ. ಅಲ್ದೆ ನನಗೆ ಉಪಸಭಾಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ರಾಜ್ಯ ಹಾಗೂ ರಾಷ್ಟ್ರದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ.

ಒಟ್ಟಿನಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಹೊಸ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆಯಲು ಸಚಿವಾಕಾಂಕ್ಷಿಗಳು ಟವಲ್ ಹಾಕಲು ಶುರು ಮಾಡಿದ್ದಾರೆ. ಆದ್ರೆ ಯಾರಿಗೆ ಅದೃಷ್ಟ ಖುಲಾಯಿಸುತ್ತೆ ಅನ್ನೋದು ಕೆಲವೇ ದಿನದಲ್ಲಿ ಗೊತ್ತಾಗಲಿದೆ.

The post ಬಿಜೆಪಿಯಲ್ಲಿ ಮಂತ್ರಿ ಸ್ಥಾನಕ್ಕೆ ಓಪನ್ ವಾರ್ -ಮಂತ್ರಿಗಿರಿಗಾಗಿ ಸಿಡಿದೆದ್ದ ಮಾಮನಿ! appeared first on News First Kannada.

Source: newsfirstlive.com

Source link