ರಾಜಕೀಯ ಭವಿಷ್ಯದ ದಿಕ್ಸೂಚಿ ‘ದೀದಿ-ಸೋನಿಯಾ ಭೇಟಿ’..!

ರಾಜಕೀಯ ಭವಿಷ್ಯದ ದಿಕ್ಸೂಚಿ ‘ದೀದಿ-ಸೋನಿಯಾ ಭೇಟಿ’..!

ನವದೆಹಲಿ: 2024 ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಪ್ರತಿಪಕ್ಷಗಳನ್ನ ಭೇಟಿ ಮಾಡುತ್ತಿದ್ದಾರೆ.

ಮೂರು ದಿನಗಳ ಕಾಲ ಎಲ್ಲ ಪ್ರತಿಪಕ್ಷಗಳನ್ನ ಭೇಟಿ ಮಾಡಿ ಮಾತುಕತೆ ನಡೆಸುತ್ತಿರೋ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಮತಾ ಆರೋಗ್ಯ ವಿಚಾರಿಸಲು ಸೋನಿಯಾ ಗಾಂಧಿ ಬಂಗಾಳ ಸಿಎಂ ಮಮತಾ ಅವ್ರನ್ನ ಕರೆಸಿಕೊಂಡಿದ್ದು ಅಂತಲೂ ಹೇಳಲಾಗುತ್ತಿದ್ದು, ಒಟ್ಟಿನಲ್ಲಿ ಟಿಎಂಸಿ, ಎಐಸಿಸಿ ಒಳಗುಟ್ಟು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಮಮತಾ ಬ್ಯಾನರ್ಜಿ ನಾಳೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ.

ಇಂದು ಸಂಜೆ ವೇಳೆಗೆ ದೆಹಲಿಗೆ ದೀದಿ ಆಗಮಿಸಲಿದ್ದು, ಜುಲೈ 29ರ ವರೆಗೂ ದೆಹಲಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ತಮ್ಮ ರಾಜಕೀಯ ನೆಲೆಯನ್ನು ವಿಸ್ತರಿಸಲಿಕೊಳ್ಳಲು ಮುಂದಾಗಿರುವ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ  ತಮ್ಮ ಶಾಹಿದ್ ದಿವಾಸ್ ಸಂದರ್ಭದ ಮಾಡಿದ್ದ ಭಾಷಣವನ್ನು ಬೇರೆ ಬೇರೆ ರಾಜ್ಯಗಳಲ್ಲೂ ಪ್ರಸಾರ ಮಾಡಿದ್ದರು. ಆದರೆ ದೀದಿ ದೆಹಲಿ ಭೇಟಿ ಕಿಡಿಕಾರಿರುವ ಬಂಗಾಳ ಬಿಜೆಪಿ, ಪಶ್ಚಿಮ ಬಂಗಾಳದಲ್ಲಿ ಭಾರೀ ಭ್ರಷ್ಟಾಚಾರ ನಡೆಸಿರುವ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಅವರು ಶರಣಾಗಳು ದೆಹಲಿಗೆ ಆಗಮಿಸುತ್ತಿದ್ದಾರೆ. ಭೇಟಿ ವೇಳೆ ಹೆಚ್ಚಿನ ಅನುದಾನಕ್ಕಾಗಿ ಮನವಿ ಮಾಡಿಕೊಳ್ಳಲಿದ್ದಾರೆ ಎಂದಿದೆ. 

The post ರಾಜಕೀಯ ಭವಿಷ್ಯದ ದಿಕ್ಸೂಚಿ ‘ದೀದಿ-ಸೋನಿಯಾ ಭೇಟಿ’..! appeared first on News First Kannada.

Source: newsfirstlive.com

Source link