ನೀಲಿಚಿತ್ರ ಸುಳಿಯಲ್ಲಿ ಬಾಲಿವುಡ್ ಹಾಟ್ ಬೆಡಗಿ? -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ನೀಲಿಚಿತ್ರ ಸುಳಿಯಲ್ಲಿ ಬಾಲಿವುಡ್ ಹಾಟ್ ಬೆಡಗಿ? -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಯಾರಾಗ್ತಾರೆ ರಾಜ್ಯದ ಮುಂದಿನ ಮುಖ್ಯಮಂತ್ರಿ?

blank

ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ದೆಹಲಿ ಮಟ್ಟದಲ್ಲಿ ಸಕ್ರಿಯಗೊಂಡಿದೆ. ಬಿಎಸ್​ವೈ ರಾಜೀನಾಮೆ ನೀಡ್ತಿದ್ದಂತೆ ಸಂಭಾವ್ಯ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಜ್ಯದ ಹತ್ತಾರು ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿವೆ. ಆದ್ರೆ, ದೆಹಲಿ ವರಿಷ್ಠರು ಮಾತ್ರ ರಾಜ್ಯದ ಸಿಎಂ ಬಗ್ಗೆ ಸಸ್ಪೆನ್ಸ್ ಬಿಟ್ಟು ಕೊಟ್ಟಿಲ್ಲ. ಹೀಗಾಗಿ ಇವತ್ತು ಬೆಳಗ್ಗೆ ಬಿಜೆಪಿ ಸಂಸದೀಯ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿ ಕೆಲವು ನಾಯಕರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದ ಮುಂದಿನ ಸಿಎಂ ಯಾರೆಂಬುದು ಬಹುತೇಕ ನಿರ್ಧಾರವಾಗಲಿದೆ.

2. ಶಶಿಕಲಾ ಜೊಲ್ಲೆ ವಿರುದ್ಧ ಲೋಕಾಯುಕ್ತಕ್ಕೆ ದೂರು

blank
ಶಶಿಕಲಾ ಜೊಲ್ಲೆ ಮೊಟ್ಟೆ ಹಗರಣ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಶಶಿಕಲಾ ಜೊಲ್ಲೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಳಗಾವಿ ಲೋಕಾಯುಕ್ತ ಕಚೇರಿಯಲ್ಲಿ ವಕೀಲ ಸುರೇಂದ್ರ ಉಗಾರೆ ಎಂಬುವರು ದೂರು ದಾಖಲಿಸಿದ್ದಾರೆ. ಶಶಿಕಲಾ ಜೊಲ್ಲೆ ಜೊತೆಗೆ ಗಂಗಾವತಿ ಶಾಸಕ ಪರಮಣ್ಣ ಮುನವಳ್ಳಿ, ಶಶಿಕಲಾ ಜೊಲ್ಲೆ ಸಹೋದರ ಸಂಜಯ್ ಆರಗೆ, ಜೊಲ್ಲೆ ಆಪ್ತ ಕಾರ್ಯದರ್ಶಿ ಪ್ರಶಾಂತ್ ಘಾಟಗೆ ವಿರುದ್ಧವೂ ಲೋಕಾಯುಕ್ತದಲ್ಲಿ ದೂರು ನೀಡಲಾಗಿದೆ. ಮೊಟ್ಟೆ ಟೆಂಡರ್​​ ಅಕ್ರಮದಲ್ಲಿ ಶಶಿಕಲಾ ಜೊಲ್ಲೆ ಭಾಗಿಯಾಗಿರುವ ಬಗ್ಗೆ ನ್ಯೂಸ್​ ಫಸ್ಟ್​ ನಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು.

3. ವಿನಯ್ ಕುಲಕರ್ಣಿ ಜಾಮೀನು ಅರ್ಜಿ ಮುಂದೂಡಿಕೆ

blank
ಧಾರವಾಡ ಬಿಜೆಪಿ ಮುಖಂಡ ಯೋಗೇಶ್​ಗೌಡ ಹತ್ಯೆ ಪ್ರಕರಣ ಸಂಬಂಧ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದೀಗ ನ್ಯಾಯಮೂರ್ತಿ ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಜಾಮೀನು ಅರ್ಜಿಯನ್ನ ಕೈಗೆತ್ತಿಕೊಂಡಿತ್ತು. ಬಳಿಕ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

4. ಪ್ರವಾಹ ಬಂದ ಊರಲ್ಲಿ ಕುಡಿಯುವ ನೀರಿಲ್ಲ!
ಪ್ರವಾಹ ಬಂದ ಗ್ರಾಮಗಳಲ್ಲಿ ಇದೀಗ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ನದಿ ನೀರಲಗಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಲ್ಲದೇ ಪರದಾಡುವಂತಾಗಿದೆ. ನದಿ ನೀರಲಗಿ ಗ್ರಾಮದ ಕುಡಿಯುವ ನೀರಿನ ಮೂರು ಬೋರ್‌ವೆಲ್‌ಗಳು ಮುಳುಗಿ ಹೋಗಿವೆ. ಹೀಗಾಗಿ ಕುಡಿಯುವ ನೀರಿಲ್ಲದ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರನ್ನ ಪೂರೈಕೆ ಮಾಡಲಾಗುತ್ತಿದೆ. ದಿನಕ್ಕೆ ಒಂದು ಟ್ಯಾಂಕ್‌ನಂತೆ 2 ದಿನಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.

5. ತುಂಗಭದ್ರಾ ಜಲಾಶಯದ ಎಲ್ಲಾ ಗೇಟ್​ ಓಪನ್​

blank
ಹೊಸಪೇಟೆಯ ತುಂಗಭದ್ರಾ ಡ್ಯಾಂನ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ. ಹೀಗಾಗಿ ಜಲಾಶಯದ 33 ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ ಅಂತಾ ತುಂಗಭದ್ರಾ ಡ್ಯಾಂ ಬೋರ್ಡ್​ ತಿಳಿಸಿದೆ. ತುಂಗಭದ್ರಾ ಡ್ಯಾಂ ಭರ್ತಿಯಾಗಲು 2 ಅಡಿ ಮಾತ್ರ ಬಾಕಿ ಇದ್ದು, ಡ್ಯಾಂನ ಎಲ್ಲಾ ಗೇಟ್​ಗಳನ್ನು ಓಪನ್ ಮಾಡಿ ನದಿಗೆ ನೀರು ಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರ ವಹಿಸಬೇಕೆಂದು ತುಂಗಭದ್ರಾ ಡ್ಯಾಂ ಬೋರ್ಡ್​ ಅಧಿಕಾರಿಗಳು ತಿಳಿಸಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿ 1 ಸಾವಿರದ 631 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ತುಂಗಭದ್ರಾ ನದಿಗೆ 14 ಸಾವಿರದ 212 ಕ್ಯೂಸೆಕ್‌​ ನೀರು ಬಿಡಲಾಗುತ್ತಿದೆ.

6. ಬಸವಸಾಗರ ಜಲಾಶಯಕ್ಕೆ ಪ್ರವಾಸಿಗರ ದಂಡು
ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರ್ತಿದೆ. ಬಸವಸಾಗರ ಜಲಾಶಯ ತುಂಬಿ ತುಳುಕುತ್ತಿದ್ದು ಡ್ಯಾಂ ಗೇಟ್​ ತೆರೆದು ನದಿಗೆ ನೀರು ಬಿಡುತ್ತಿರುವ ದೃಶ್ಯ ನೋಡಲು ಪ್ರವಾಸಿಗರ ದಂಡೇ ಹರಿದು ಬಂದಿದೆ. ಜಲಾಶಯದಿಂದ ನೀರು ಬಿಡೋದನ್ನು ಕಣ್ತುಂಬಿಕೊಳ್ಳಲು ಜನ ಕುಟುಂಬ ಸಮೇತರಾಗಿ ಆಗಮಿಸಿ ಜಲಾಶಯದ ಅಂದ ಸವಿಯುತ್ತಿದ್ದಾರೆ. ಯಾದಗಿರಿ, ರಾಯಚೂರು, ಕಲಬುರಗಿಯಿಂದಲೂ ಜನ ಆಗಮಿಸುತ್ತಿದ್ದು, ಬಸವಸಾಗರ ಜಲಾಶಯದ ಸೊಬಗನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

7. ರಾಜಕೀಯ ಭವಿಷ್ಯದ ದಿಕ್ಸೂಚಿ ‘ದೀದಿ-ಸೋನಿಯಾ ಭೇಟಿ’

blank
2024 ರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಪ್ರತಿಪಕ್ಷಗಳನ್ನ ಭೇಟಿ ಮಾಡುತ್ತಿದ್ದಾರೆ. ಮೂರು ದಿನಗಳ ಕಾಲ ಎಲ್ಲ ಪ್ರತಿಪಕ್ಷಗಳನ್ನ ಭೇಟಿ ಮಾಡಿ ಮಾತುಕತೆ ನಡೆಸುತ್ತಿರೋ ಬ್ಯಾನರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಮತಾ ಆರೋಗ್ಯ ವಿಚಾರಿಸಲು ಸೋನಿಯಾ ಗಾಂಧಿ ಬಂಗಾಳ ಸಿಎಂ ಮಮತಾ ಅವ್ರನ್ನ ಕರೆಸಿಕೊಂಡಿದ್ದು ಅಂತಲೂ ಹೇಳಲಾಗುತ್ತಿದ್ದು ಒಟ್ಟಿನಲ್ಲಿ ಟಿಎಂಸಿ, ಎಐಸಿಸಿ ಒಳಗುಟ್ಟು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಮಮತಾ ಬ್ಯಾನರ್ಜಿ ಇಂದು ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ.

8. ಲಸಿಕೆ ಪಡೆದವರಿಗೂ ಡೆಲ್ಟಾ ತಳಿ ಸೋಂಕು ಸಾಧ್ಯತೆ

blank
ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರಿಗೂ ಡೆಲ್ಟಾ ರೂಪಾಂತರಿ ಸೋಂಕು ತಗುಲುವ ಸಾಧ್ಯತೆ ಇದೆ ಅಂತಾ ತಜ್ಞರು ಹೇಳಿದ್ದಾರೆ. ಡೆಲ್ಟಾ ರೂಪಾಂತರಿ ಲಸಿಕೆ ಪಡೆದವರಿಗೂ ತಗುಲಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ತಜ್ಞರು ಹೇಳಿದ್ದಾರೆ. ಡೆಲ್ಟಾ ರೂಪಾಂತರ ತಳಿಯ ಪ್ರಕರಣ ಹೆಚ್ಚಾಗಿರುವ ರಾಷ್ಟ್ರಗಳು ನಿರ್ಬಂಧ ಸಡಿಲಗೊಳಿಸುವ ಮೊದಲು ಡೆಲ್ಟಾ ಕುರಿತಾಗಿ ಎಚ್ಚರಿಕೆ ವಹಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

9. ಕುಂದ್ರಾ ದಂಪತಿಯ ‘2 ಅಕೌಂಟ್ಸ್​ ಸೀಜ್​​’

blank
ಖ್ಯಾತ ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಕುಂದ್ರಾ ವಿಚಾರಣೆಯನ್ನ ತೀವ್ರಗೊಳಿಸಿದ್ದಾರೆ. ಈ ಸಂಬಂಧ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್​ ಕುಂದ್ರಾ ಸಂಬಂಧಿತ ಎರಡು ಬ್ಯಾಂಕ್​ ಅಕೌಂಟ್​ಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೇ ಪೊಲೀಸರು ವಿಚಾರಣಾ ತನಿಖೆಯನ್ನ ತೀವ್ರಗೊಳಿಸುತ್ತಿದ್ದಾರೆ. ಇನ್ನು ಇವತ್ತು ರಾಜ್ ಕುಂದ್ರಾ ನ್ಯಾಯಾಂಗ ಬಂಧನ ಮುಕ್ತಾಯಗೊಳ್ಳಲಿದ್ದು, ಕೋರ್ಟ್ ವಿಚಾರಣೆಯಲ್ಲಿ ಕುಂದ್ರಾ ನ್ಯಾಯಾಂಗ ಬಂಧನವಾ? ಅಥವಾ ಪೊಲೀಸ್ ಕಸ್ಟಡಿನಾ ಅನ್ನೋದು ಇವತ್ತು ತಿಳಿಯಲಿದೆ.

10. ಹಾಟ್​ ನಟಿ ಶೆರ್ಲಿನ್​ಗೆ ಪೊಲೀಸರಿಂದ ಸಮನ್ಸ್​​

blank
ರಾಜ್​ ಕುಂದ್ರಾ ಅಶ್ಲೀಲ ಚಿತ್ರಗಳ ನಿರ್ಮಾಣ ಕೇಸ್​ ಬಾಲಿವುಡ್​ ಅಂಗಳದವರೆಗೂ ವಿಸ್ತರಿಸಿದೆ. ನೀಲಿ ಚಿತ್ರಗಳ ನಿರ್ಮಾಣದ ಕೇಸ್​ಗೆ ಸಂಬಂಧಿಸಿದಂತೆ ಬಾಲಿವುಡ್​ ಹಾಟ್​ ನಟಿ ಶರ್ಲಿನ್​ ಚೋಪ್ರಾಗೆ ಮುಂಬೈ ಕ್ರೈಂ ಪೊಲೀಸರು ಸಮನ್ಸ್ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ನಡುವೆ ಶರ್ಲಿನ್ ಚೋಪ್ರಾ ಬಾಂಬೆ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಂದ್ಹಾಗೆ ಶೆರ್ಲಿನ್ ಚೋಪ್ರಾ ವಿಚಾರಣೆ ಬಳಿಕ ಮತ್ತಷ್ಟು ನಟಿಯರಿಗೆ ಪೊಲೀಸರು ಸಮನ್ಸ್ ನೀಡೊ ಸಾಧ್ಯತೆ ಇದೆ.

The post ನೀಲಿಚಿತ್ರ ಸುಳಿಯಲ್ಲಿ ಬಾಲಿವುಡ್ ಹಾಟ್ ಬೆಡಗಿ? -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link