ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭುಗಿಲೆದ್ದ ಹಿಂಸಾಚಾರ; 6 ಮಂದಿ ಪೊಲೀಸರ ಹತ್ಯೆ

ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭುಗಿಲೆದ್ದ ಹಿಂಸಾಚಾರ; 6 ಮಂದಿ ಪೊಲೀಸರ ಹತ್ಯೆ

ಅಸ್ಸಾಂ-ಮಿಜೋರಾಂ ಬಾರ್ಡರ್​ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು 6 ಮಂದಿ ಪೊಲೀಸ್ ಸಿಬ್ಬಂದಿಯನ್ನ ಹತ್ಯೆ ಮಾಡಲಾಗಿದೆ. ಕಳೆದ ವರ್ಷದ ಅಕ್ಟೋಬರ್​ನಿಂದೀಚೆಗೆ ಇದು ಎರಡನೇ ಬಾರಿ ನಡೆದ ಗಲಭೆಯಾಗಿದ್ದು ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ ಅಲ್ಲದೇ ಕೆಲವು ಗುಡಿಸಲು ಹಾಗೂ ಸಣ್ಣ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಹಿಂಸಾಚಾರಕ್ಕೆ ಹಲವು ವರ್ಷಗಳಿಂದ ಪರಿಹಾರವಾಗದೇ ಉಳಿದ ಗಡಿ ಸಮಸ್ಯೆ ಕಾರಣವಾಗಿದೆ.

ಹಿಂಸಾಚಾರ ನಡೆದಿದ್ದೇಕೆ..?

ಅಸ್ಸಾಂ ಮತ್ತು ಮಿಜೋರಾಂ ನಡುವಿನ ಬಾರ್ಡರ್​ ಸಮಸ್ಯೆ ಹಲವು ವರ್ಷಗಳಿಂದಲೂ ಇದ್ದು ಅಲ್ಲಿನ ಸರ್ಕಾರಗಳು ಗಡಿಯಲ್ಲಿ ಯಾವುದೇ ಚಟುವಟಿಕೆಗಳು ನಡೆಯದಂತೆ ಒಪ್ಪಂದ ಮಾಡಿಕೊಂಡಿದ್ದವು. ಈ ಮಧ್ಯೆ ಅಸ್ಸಾಂ ಗಡಿ ಪ್ರದೇಶದ ಲೈಲಾಪುರ ಗ್ರಾಮದ ಜನರು ಈ ಒಪ್ಪಂದವನ್ನು ಮುರಿದು ಕೆಲವು ತಾತ್ಕಾಲಿಕ ಶೆಡ್​ಗಳನ್ನ ನಿರ್ಮಿಸಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಮಿಜೋರಾಂ ಕಡೆಯ ಜನ ಆಶ ಶೆಡ್​ಗಳಿಗೆ ಬೆಂಕಿ ಹಚ್ಚಿದ್ದರಿಂದ ಹಿಂಸಾಚಾರ ನಡೆದಿದೆ ಎಂದು ಹೇಳಲಾಗಿದೆ.

The post ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಭುಗಿಲೆದ್ದ ಹಿಂಸಾಚಾರ; 6 ಮಂದಿ ಪೊಲೀಸರ ಹತ್ಯೆ appeared first on News First Kannada.

Source: newsfirstlive.com

Source link