ಡ್ರಗ್ಸ್​ ಸಾಗಾಟ ಮಾಡ್ತಿದ್ದ 2 ನೈಜೀರಿಯನ್ಸ್​​ ಸೇರಿ 6 ಮಂದಿ ಬಂಧನ- 1.5 ಕೋಟಿ ಮೌಲ್ಯದ ಡ್ರಗ್ಸ್ ವಶ

ಡ್ರಗ್ಸ್​ ಸಾಗಾಟ ಮಾಡ್ತಿದ್ದ 2 ನೈಜೀರಿಯನ್ಸ್​​ ಸೇರಿ 6 ಮಂದಿ ಬಂಧನ- 1.5 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು: ನಗರದಲ್ಲಿ ಮಾದಕ ಸರಬರಾಜುಗಾರರ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನೈಜೀರಿಯನ್ ಪ್ರಜೆಗಳ ಸಹಿತ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ರಾಮಮೂರ್ತಿ ನಗರ ಹಾಗೂ ಯಲಹಂಕ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು 6 ಮಂದಿಯನ್ನು ಬಂಧಿಸಿ ಅವರಿಂದ 1.5 ಕೋಟಿ ಮೌಲ್ಯದ ಕೊಕೇನ್, ಎಕ್ಸ್ಟಸಿ ಪಿಲ್ಸ್, ಯಾಬಾ, ಎಲ್ ಎಲ್.ಎಸ್.ಡಿ ಜಪ್ತಿ ಮಾಡಿದೆ. ಇದೇ ವೇಳೆ ಕೃತ್ಯಕ್ಕೆ ಬಳಸಲಾಗಿದ್ದ ಕಾರು, ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ರಾಮಮೂರ್ತಿ ನಗರ ಹಾಗೂ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

blank

The post ಡ್ರಗ್ಸ್​ ಸಾಗಾಟ ಮಾಡ್ತಿದ್ದ 2 ನೈಜೀರಿಯನ್ಸ್​​ ಸೇರಿ 6 ಮಂದಿ ಬಂಧನ- 1.5 ಕೋಟಿ ಮೌಲ್ಯದ ಡ್ರಗ್ಸ್ ವಶ appeared first on News First Kannada.

Source: newsfirstlive.com

Source link