ಇಂದು ಇಂಡೋ-ಲಂಕಾ 2ನೇ ಟಿ20 ಹಣಾಹಣಿ -ಪಡಿಕ್ಕಲ್​, ಋತುರಾಜ್​ ಮಾಡ್ತಾರಾ ಪಾದಾರ್ಪಣೆ?

ಇಂದು ಇಂಡೋ-ಲಂಕಾ 2ನೇ ಟಿ20 ಹಣಾಹಣಿ -ಪಡಿಕ್ಕಲ್​, ಋತುರಾಜ್​ ಮಾಡ್ತಾರಾ ಪಾದಾರ್ಪಣೆ?

ಶ್ರೀಲಂಕಾ ಪ್ರವಾಸದ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈ ಸರಣಿಯಲ್ಲಿ ಚೊಚ್ಚಲ ಕರೆ ಪಡೆದಿದ್ದ ಆಟಗಾರರೆಲ್ಲಾ, ಡೆಬ್ಯು ಮಾಡಿದ್ದಾಗಿದೆ. ಆದ್ರೆ ತಂಡ ಪ್ರಕಟಿಸುವ ಮುಂಚೆಯಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಇಬ್ಬರು ಆಟಗಾರರು, ಇನ್ನೂ ಬೆಂಚ್​ ಕಾಯ್ತಿದ್ದಾರೆ.

ವಿವಿಧ ಕಾರಣಗಳಿಂದ ಸೆನ್ಸೇಷನ್​ ಹುಟ್ಟುಹಾಕಿದ್ದ ಶ್ರೀಲಂಕಾ ವಿರುದ್ಧದ ಚುಟುಕು ಸಮರ, ಇದೀಗ ಅಂತ್ಯಕ್ಕೆ ಬಂದು ತಲುಪಿದೆ. ಈ ಸರಣಿಯಲ್ಲಿ ಅದ್ಬುತ ಪ್ರದರ್ಶನ ಹೊರಹಾಕಿರುವ ಟೀಮ್ ಇಂಡಿಯಾ, ಈಗ ಮತ್ತೊಂದು ವಿಜಯದೊಂದಿಗೆ ಟಿ20 ಸಿರೀಸ್​ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆದ್ರೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ಮಾತ್ರ, ಇಬ್ಬರು ಆಟಗಾರರ ಮೇಲೆಯೇ ನೆಟ್ಟಿದೆ.

blank

ಲಂಕಾ ಸರಣಿಯಲ್ಲಿ ಈಗಾಗಲೇ 9 ಮಂದಿಯ ಡೆಬ್ಯು
ಹೌದು, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್​ ಜೊತೆ ಚೊಚ್ಚಲ ಕರೆ ಪಡೆದಿದ್ದ ನಾಲ್ವರು ಆಟಗಾರರು ಸೇರಿದಂತೆ, ಒಟ್ಟು 9 ಮಂದಿ ಲಂಕಾ ಸರಣಿಯಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಆದ್ರೆ ಸರಣಿಗೂ ಮುನ್ನ ಸಾಕಷ್ಟು ಗಮನ ಸೆಳೆದಿದ್ದ ಇಬ್ಬರೂ ಆಟಗಾರರು ಮಾತ್ರ, ಬೆಂಚ್ ಬಿಸಿ ಮಾಡ್ತಿದ್ದಾರೆ. ಹೀಗಾಗಿಯೇ ಈ ದೇಶಿ ಸೂಪರ್​​ಸ್ಟಾರ್​ಗಳು ಪಾದಾರ್ಪಣೆ ಮಾಡ್ತಾರಾ? ಎಂಬ ಕುತೂಹಲ ಮೂಡಿಸಿದೆ.

blank

ದೇಶಿ ಸೂಪರ್​ಸ್ಟಾರ್​ ಆಟಗಾರರ ಪಾದಾರ್ಪಣೆಗೆ ಸಿದ್ಧವಾಯ್ತಾ ವೇದಿಕೆ?
ಲಂಕಾ ಸರಣಿಯಲ್ಲಿ ಡೆಬ್ಯು ರೇಸ್​ನಲ್ಲಿ ಮೊದಲಿನಿಂದಲೂ ಕೇಳೀ ಬರ್ತಿದ್ದ ಹೆಸರು ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್.. ಆದ್ರೆ ಈ ಇಬ್ಬರು ಜೊತೆ ಚೊಚ್ಚಲ ಕರೆ ಪಡೆದಿದ್ದ ಕೃಷ್ಣಪ್ಪ ಗೌತಮ್​​, ಚೇತನ್ ಸಕಾರಿಯಾ, ನಿತೀಶ್ ರಾಣಾ, ವರುಣ್ ಚಕ್ರವರ್ತಿ ಡೆಬ್ಯು ಮಾಡಿದ್ರು. ಆದ್ರೆ ಸರಣಿ ಆರಂಭಕ್ಕೂ ಮುನ್ನವೇ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ದೇವದತ್​ ಪಡಿಕ್ಕಲ್ ಬೆಂಚ್ ಕಾಯ್ತಿರೋದು ನಿಜಕ್ಕೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಆದ್ರೆ ಇಂದಿನ 2ನೇ ಟಿ20 ಪಂದ್ಯದಲ್ಲಿ ಅಥವಾ ಅಂತಿಮ ಟಿ20 ಪಂದ್ಯದಲ್ಲಿ ಇವರಿಬ್ಬರ ಕನಸು ನನಸಾಗುವ ಸಾಧ್ಯತೆ ಇದೆ. ಯಾಕಂದ್ರೆ ಈ ಇಬ್ಬರು ಡೆಬ್ಯುಗೆ ಅರ್ಹ ಆಟಗಾರರು. ದೇಶಿ ಕ್ರಿಕೆಟ್​ನಲ್ಲಿನ ಸಾಧನೆ, ಅನುಭವ ಅಪಾರ.. ಹೀಗಾಗಿಯೇ ಈ ಇಬ್ಬರ ಡೆಬ್ಯು ಖಾಯಂ ಅಂತಾನೇ ಹೇಳಲಾಗ್ತಿದೆ.

ಸರಣಿ ಮುನ್ನ ಎಲ್ಲರಿಗೂ ಅವಕಾಶ ನೀಡುವ ಧ್ಯೇಯದ ಬಗ್ಗೆ ಮಾತನಾಡಿದ್ದ ದ್ರಾವಿಡ್, ಈ ಇಬ್ಬರಿಗೂ ಪ್ರತಿಶತ 100ರಷ್ಟು ಅವಕಾಶ ಕಲ್ಪಿಸ್ತಾರೆ ಅನ್ನೋದೆ ಅಭಿಮಾನಿಗಳ ನಂಬಿಕೆಯಾಗಿದೆ.

The post ಇಂದು ಇಂಡೋ-ಲಂಕಾ 2ನೇ ಟಿ20 ಹಣಾಹಣಿ -ಪಡಿಕ್ಕಲ್​, ಋತುರಾಜ್​ ಮಾಡ್ತಾರಾ ಪಾದಾರ್ಪಣೆ? appeared first on News First Kannada.

Source: newsfirstlive.com

Source link