‘ಕೊಹ್ಲಿ, ರೋಹಿತ್​, ಪಂತ್​ಗಿಂತ ಸೂರ್ಯ ಕಡಿಮೆಯಲ್ಲ’ -ಹಾಡಿ ಹೊಗಳಿದ ಆಶಿಶ್​ ನೆಹ್ರಾ

‘ಕೊಹ್ಲಿ, ರೋಹಿತ್​, ಪಂತ್​ಗಿಂತ ಸೂರ್ಯ ಕಡಿಮೆಯಲ್ಲ’ -ಹಾಡಿ ಹೊಗಳಿದ ಆಶಿಶ್​ ನೆಹ್ರಾ

ಕೊಹ್ಲಿ, ರೋಹಿತ್​, ರಿಶಬ್​ ಪಂತ್​ ಈ ಮೂವರಿಗಿಂತ ಸೂರ್ಯ ಕುಮಾರ್​​ ಯಾದವ್, ಕಡಿಮೆಯೇನಲ್ಲ. ಈ ಮಾತನ್ನ ಹೇಳಿರೋದು ಮಾಜಿ ವೇಗಿ ಆಶಿಶ್​ ನೆಹ್ರಾ. ಈಗಾಗಲೇ ಟೀಮ್​ ಇಂಡಿಯಾದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಆಟಗಾರರಷ್ಟೇ ಸಾಮರ್ಥ್ಯ, ಈಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿರುವ ಸೂರ್ಯನಿಗಿದ್ಯಾ ಎಂಬ ಚರ್ಚೆ ಜೋರಾಗಿದೆ.

ಇಷ್ಟು ದಿನ ಉಹಾಪೋಹದ ಚರ್ಚೆಗಳಿಗೆ ಕಾರಣವಾಗಿದ್ದ ರಿಪ್ಲೇಸ್​ಮೆಂಟ್​ ವಿಚಾರಕ್ಕೆ, ಬಿಸಿಸಿಐ ಅಧಿಕೃತ ಮಾಹಿತಿ ಹೊರಹಾಕುವ ಮೂಲಕ ಫುಲ್​​ಸ್ಟಾಪ್​ ಇಟ್ಟಿದೆ. ಸೂರ್ಯ ಕುಮಾರ್​​ ಹಾಗೂ ಪೃಥ್ವಿ ಶಾಗೆ ಮಣೆ ಹಾಕಿರುವ ಸೆಲೆಕ್ಷನ್​ ಕಮಿಟಿ, ಇಂಗ್ಲೆಂಡ್​​ ಟಿಕೆಟ್​ ನೀಡಿದೆ. ಇದೀಗ ಅಚ್ಚರಿಯೆಂಬಂತೆ ಸೂರ್ಯ ಕುಮಾರ್​ ಆಯ್ಕೆ ಆಗಿದ್ದೇಗೆ ಅನ್ನೋದು ಹೆಚ್ಚು ಚರ್ಚೆಗೆ ಗ್ರಾಸವಾಗ್ತಿದೆ.

blank

ಲಂಕಾ ಪ್ರವಾಸದಲ್ಲಿ ಸೂರ್ಯ ಕುಮಾರ್​​ ಮಿಂಚು
ಆದ್ರೆ ಈ ಎಲ್ಲಾ ಚರ್ಚೆಗಳಿಗೂ ಟೀಮ್​ ಇಂಡಿಯಾ 2ND STRING ತಂಡದ ಶ್ರೀಲಂಕಾ ಪ್ರವಾಸವೇ ಸಾಕ್ಷಿಯಾಗಿ ನಿಂತಿದೆ. ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ತನ್ನದೇ ವಿಭಿನ್ನ ಶೈಲಿಯ ಬ್ಯಾಟಿಂಗ್​ನಿಂದ ಗಮನ ಸೆಳೆದಿದ್ದು, ಸೂರ್ಯ ಕುಮಾರ್​​ ಯಾದವ್​. ಕೇವಲ ಏಕದಿನ ಸರಣಿ ಮಾತ್ರವಲ್ಲ, ಚುಟುಕು ಸರಣಿಯಲ್ಲೂ ಅದೇ ಡಾಮಿನೇಟಿಂಗ್​ ಪ್ರದರ್ಶನ ಮುಂದುವರೆದಿದೆ.

‘ಅನುಮಾನ, ಹಿಂಜರಿಕೆಯಿಲ್ಲದೆ ಆಡುತ್ತಾನೆ’’

‘ಸೂರ್ಯ ಕುಮಾರ್​ ಮೊದಲ ಎಸೆತವನ್ನೇ ಈಗಾಗಲೇ ಶತಕ ಸಿಡಿಸಿದ ಬ್ಯಾಟ್ಸ್​ಮನ್ ಎಂಬಂತೆ ಎದುರಿಸುತ್ತಾರೆ. ಅಲ್ಲಿ ಯಾವುದೇ ಅನುಮಾನ, ಹಿಂಜರಿಕೆ ಕಾಣುವುದಿಲ್ಲ. ದೇಶಿ ಆಟಗಾರ ಮಿಂಚುವುದನ್ನ ನೋಡಲು ಖುಷಿಯಾಗುತ್ತದೆ’’

ಮೊಹಮದ್​ ಕೈಫ್​, ಮಾಜಿ ಕ್ರಿಕೆಟಿಗ

blank

ಸೂರ್ಯ ಕುಮಾರ್​​ ಯಾದವ್​ ನೀಡಿದ ಈ ಪ್ರದರ್ಶನವನ್ನ, ಇದೀಗ ವಿಶ್ವ ಕ್ರಿಕೆಟ್​ ಲೋಕ ಕೊಂಡಾಡ್ತಿದೆ. ಭಾರತದ ಹಾಲಿ ಹಾಗೂ ಮಾಜಿ ಆಟಗಾರರಂತೂ, ಸೂರ್ಯನ ಪ್ರದರ್ಶನಕ್ಕೆ ಹೊಗಳಿಕೆಯ ಸುರಿಮಳೆಯನ್ನೇಗೈದಿದ್ದಾರೆ. ಅದರಲ್ಲೂ ಮಾಜಿ ವೇಗಿ ಆಶಿಶ್​​ ನೆಹ್ರಾ ಅಂತೂ ಸೂರ್ಯ, ಕೊಹ್ಲಿ, ರೋಹಿತ್​, ರಿಷಭ್​ ಪಂತ್​ ಇವರಿಗಿಂತ ಕಡಿಮೆಯೇನಲ್ಲ ಎಂದಿದ್ದಾರೆ.

‘ಕೊಹ್ಲಿ,ರೋಹಿತ್​,ಪಂತ್​ಗಿಂತ ಸೂರ್ಯ ಕಡಿಮೆಯಲ್ಲ’
‘ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ರಿಷಭ್​ ಪಂತ್​, ಹಾರ್ದಿಕ್​ ಪಾಂಡ್ಯ.. ಇವರಿಗಿಂತ ಸೂರ್ಯ ಕುಮಾರ್​ ಏನು ಕಡಿಮೆಯೇನಲ್ಲ. ಈತ ಅವರಿಗೆ ಸಮಾನನಾಗಿದ್ದಾನೆ. ಸಿಕ್ಕ ಅವಕಾಶಗಳ ಸರಿಯಾಗಿ ಬಳಸಿಕೊಂಡಿದ್ದಾನೆ’

ಆಶಿಶ್​ ನೆಹ್ರಾ, ಮಾಜಿ ಕ್ರಿಕೆಟಿಗ

ಹೌದು, ಆಶಿಶ್​​ ನೆಹ್ರಾ ಹೇಳಿದಂತೆ ಸೂರ್ಯ ಕುಮಾರ್​​ ಯಾದವ್​ ಸಿಕ್ಕ ಅವಕಾಶಗಳನ್ನೆಲ್ಲಾ ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ 62ರ ಸರಾಸರಿಯಲ್ಲಿ 124 ರನ್​, ಟಿ 20 ಮಾದರಿಯಲ್ಲಿ ಆಡಿದ 3 ಇನ್ನಿಂಗ್ಸ್​ಗಳಲ್ಲಿ 139 ರನ್​ ಕಲೆ ಹಾಕಿರೋದೇ ಇದಕ್ಕೆ ಸಾಕ್ಷಿ. ಮುಂದೆಯೂ ಹೀಗೆ ಅವಕಾಶ ಸಿಕ್ಕರೆ ಕೊಹ್ಲಿ, ರೋಹಿತ್​, ಪಂತ್​ ಹಾಗೂ ಹಾರ್ದಿಕ್​ ಪಾಂಡ್ಯಗೆ ಸರಿ ಸಮನಾಗಿ ಸೂರ್ಯ ನಿಲ್ತಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

The post ‘ಕೊಹ್ಲಿ, ರೋಹಿತ್​, ಪಂತ್​ಗಿಂತ ಸೂರ್ಯ ಕಡಿಮೆಯಲ್ಲ’ -ಹಾಡಿ ಹೊಗಳಿದ ಆಶಿಶ್​ ನೆಹ್ರಾ appeared first on News First Kannada.

Source: newsfirstlive.com

Source link