ಶುಭಾಗೆ ಖುಷಿ ಕೊಟ್ಟು ಶಾಕ್ ಕೊಡ್ತಾರಾ ಬಿಗ್‍ಬಾಸ್?

ಪ್ರತಿ ದಿನ ಬೆಳಗ್ಗೆ ಬಿಗ್‍ಬಾಸ್ ಮನೆಯಲ್ಲಿ ಚಲನ ಚಿತ್ರ ಗೀತೆಯನ್ನು ಪ್ಲೇ ಮಾಡುವ ಮೂಲಕ ಸದಸ್ಯರನ್ನು ಎಚ್ಚರಿಸಲಾಗುತ್ತದೆ. ಆದರೆ ಬಿಗ್‍ಬಾಸ್ ಸೀಸನ್ 8ರಲ್ಲಿ ಇದೇ ಮೊದಲ ಬಾರಿಗೆ ಶುಭಾ ಪೂಂಜಾ ನಟನೆಯ ಹಾಡನ್ನು ವೇಕಪ್ ಸಾಂಗ್ ಆಗಿ ಹಾಕಲಾಗಿದೆ. ಈ ಕುರಿತಾಗಿ ಶುಭಾಗೆ ಸಖತ್ ಖುಷಿಯಾಗಿದೆ. ಶುಭಾಗೆ ಈ ಕ್ಷಣ ಸಂತೋಷ ಕೊಟ್ಟು ಬಿಗ್ ಬಾಸ್ ಶಾಕ್ ಕೋಡುತ್ತಾರ ಎಂದು ಚರ್ಚೆ ಈಗ ಶುರುವಾಗಿದೆ.

ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. 36ನೇ ದಿನದಂದು ಬಿಗ್‍ಬಾಸ್ ಶುಭಾ ಅವರ ನಟನೆಯ ‘ಮೊಗ್ಗಿನ ಮನಸ್ಸು’ ಸಿನಿಮಾದ ‘ಯಾಕಿಂಗ್ ಆಡ್ತಾರೋ ಈ ಹುಡುಗರು’ ಸಾಂಗ್ ಹಾಕಿದ್ದಾರೆ. ಆಗ ಶುಭಾ ನನ್ನ ಸಾಂಗ್ ಎಂದು ಸಂತೋಷದಿಂದ ಓಡಿ ಬಂದು ಡಾನ್ಸ್ ಮಾಡಿದ್ದಾರೆ. ಥ್ಯಾಕ್ಸ್ ಬಿಗ್‍ಬಾಸ್ ನನ್ನ ಸಾಂಗ್ ಹಾಕಿದ್ದಕ್ಕೆ ಎಂದು ಹೇಳಿ ಹಾಗಂತ ನನ್ನ ಕ್ರೇನ್ ಅಲ್ಲಿ ಮನೆಯಿಂದ ಆಚೆ ಎತ್ತಿಕೊಂಡು ಹೋಗಬೇಡಿ ಎಂದು ಹೇಳಿದ್ದಾರೆ.

ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ವಾರಂತ್ಯದಲ್ಲಿ ಬರುವ ಸೂಪರ್ ಸಂಡೇ ವಿತ್ ಸುದೀಪಾದಲ್ಲಿ ಎಲಿಮಿನೇಟ್ ಆಗಿ ಒಬ್ಬ ಸದಸ್ಯ ಮನೆಯಿಂದ ಆಚೆ ಬರಬೇಕಿತ್ತು. ಆದರೆ ಈ ವಾರ ಒಂದು ಟ್ವಿಸ್ಟ್ ಇರಲಿದೆ. ನಿಮ್ಮಲ್ಲಿಯೇ ಒಬ್ಬರು ಇದ್ದಕ್ಕಿದ್ದಂತೆ ಆಚೆ ಹೋಗಲಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಶುಭಾ ಸಾಂಗ್ ಪ್ಲೇ ಆಗುತ್ತಿದ್ದಂತೆ ನನ್ನು ಕರೆದುಕೊಂಡು ಹೋಗಬೇಡಿ ಎಂದು ಶುಭಾ ಹೇಳಿದ್ದಾರೆ.

ಈ ಹಿಂದೆ ಬಿಗ್‍ಬಾಸ್‍ಗೆ ಶಮಂತ್ ಗೌಡ ಅವರ ರಚನೆಯ ‘ಬಾ ಗುರು ಸಾಂಗ್’ ಹಾಕಿ ಎಂದು ಮನವಿ ಮಾಡಿದ್ದರು. ಆದರೆ ಬಿಗ್‍ಬಾಸ್ ಶಮಂತ್ ಅವರ ಕೋರಿಕೆಯನ್ನು ಈಡೇರಿಸಿ ಅಂದೇ ಕೊರೊನಾ ಎಂದು ಸ್ಪರ್ಧಿಗಳನ್ನು ಹೊರಗೆ ಕರೆದಿದ್ದರು. ಈಗ ಶುಭಾ ಅವರ ಸಿನಿಮಾದ ಸಾಂಗ್ ಹಾಕಿದ್ದಾರೆ. ಈ ಕಾರಣಕ್ಕೆ ಶುಭಾ ಅವರು ಆಚೆ ಬರುತ್ತಾರೆ ಎನ್ನುವ ಅನುಮಾನ ಶುರುವಾಗಿದೆ.

The post ಶುಭಾಗೆ ಖುಷಿ ಕೊಟ್ಟು ಶಾಕ್ ಕೊಡ್ತಾರಾ ಬಿಗ್‍ಬಾಸ್? appeared first on Public TV.

Source: publictv.in

Source link