ಪಾರ್ನ್ ಸಿನಿಮಾ ನಿರ್ಮಾಣ; ವಿಚಾರಣೆಗೆ ಕರೆದ ಬೆನ್ನಲ್ಲೇ ಮಧ್ಯಂತರ ಜಾಮೀನಿನ ಮೊರೆ ಹೋದ ಶೆರ್ಲಿನ್

ಪಾರ್ನ್ ಸಿನಿಮಾ ನಿರ್ಮಾಣ; ವಿಚಾರಣೆಗೆ ಕರೆದ ಬೆನ್ನಲ್ಲೇ ಮಧ್ಯಂತರ ಜಾಮೀನಿನ ಮೊರೆ ಹೋದ ಶೆರ್ಲಿನ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧದ ಅಶ್ಲೀಲ ಸಿನಿಮಾಗಳ ನಿರ್ಮಾಣ ಪ್ರಕರಣದ ಮುಂದುವರಿದ ಭಾಗವಾಗಿ ಬಾಲಿವುಡ್ ನಟಿ, ಮಾಡೆಲ್​ಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.

ಇದನ್ನೂ ಓದಿ: ನಿಮ್ಮ ಅಕ್ಕ ಮಾರ್ನಿಂಗ್ ಯೋಗ.. ಬಾವ ರಾತ್ರಿ ಯೋಗ ಹೇಳಿಕೊಡ್ತಾರೆ- ಟ್ರೋಲ್ ಆದ ಶಮಿತಾ ಶೆಟ್ಟಿ

ರಾಜ್ ಕುಂದ್ರಾ ಅವರು ಅರೆಸ್ಟ್​ ಆದ ಕೆಲವು ದಿನಗಳ ಬೆನ್ನಲ್ಲೇ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಒಂದನ್ನ ಮಾಡಿದ್ದ ಶೆರ್ಲಿನ್ ಚೊಪ್ರಾ.. ಕಳೆದ ಕೆಲವು ದಿನಗಳಿಂದ ಮಾಧ್ಯಮದವರು ಮೆಸೇಜ್, ವಾಟ್ಸ್​​ಆ್ಯಪ್ ಚಾಟ್​, ಕರೆ ಹಾಗೂ ಇ-ಮೇಲ್ ಮಾಡಿ ಈ ಪ್ರಕರಣ ಬೆಳಕಿಗೆ ಬರಲು ನಿಮ್ಮ ಪಾತ್ರ ವಿದೆಯಾ ಎಂದು ಕೇಳುತ್ತಿದ್ದಾರೆ. ಇದೀಗ ನಾನು ಹೇಳ್ತಿರೋದು ಏನಂದ್ರೆ, ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದು ಬೇರೆ ಯಾರೂ ಅಲ್ಲ ಎಂದಿದ್ದರು.

ಇದನ್ನೂ ಓದಿ: ರಾಜ್​ಕುಂದ್ರಾ ನೀಲಿ ಚಿತ್ರ ಪ್ರಕರಣ.. ಮಾಡೆಲ್ ಶೆರ್ಲಿನ್ ಚೊಪ್ರಾಗೆ ಸಮನ್ಸ್​

ಮುಂಬೈ ಪೊಲೀಸರು ಸಮನ್ಸ್ ಕಳುಹಿಸಿದ ಬೆನ್ನಲ್ಲೇ ಶೆರ್ಲಿನ್ ಚೋಪ್ರಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು ಮಧ್ಯಂತರ ಜಾಮೀನು ಕೋರಿದ್ದಾರೆ. ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕಿರುವ ಶೆರ್ಲಿನ್ ಚೋಪ್ರಾ ಇದೀಗ ಬೇಲ್ ಮೂಲಕ ವಿಚಾರಣೆಯಿಂದ ದೂರವುಳಿಯಲು ಮುಂದಾಗಿದ್ದಾರೆ.

The post ಪಾರ್ನ್ ಸಿನಿಮಾ ನಿರ್ಮಾಣ; ವಿಚಾರಣೆಗೆ ಕರೆದ ಬೆನ್ನಲ್ಲೇ ಮಧ್ಯಂತರ ಜಾಮೀನಿನ ಮೊರೆ ಹೋದ ಶೆರ್ಲಿನ್ appeared first on News First Kannada.

Source: newsfirstlive.com

Source link