ಬಿಎಸ್​ವೈ ರಾಜೀನಾಮೆ.. ಮನನೊಂದು ನೇಣಿಗೆ ಶರಣಾದ ಅಪ್ಪಟ ಅಭಿಮಾನಿ

ಬಿಎಸ್​ವೈ ರಾಜೀನಾಮೆ.. ಮನನೊಂದು ನೇಣಿಗೆ ಶರಣಾದ ಅಪ್ಪಟ ಅಭಿಮಾನಿ

ಚಾಮರಾಜನಗರ: ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಮನನೊಂದ ಬಿಎಸ್​ವೈ ಅಭಿಮಾನಿ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ. ರವಿ (35) ನೇಣಿಗೆ ಶರಣಾದ ಬಿ.ಎಸ್.ವೈ ಅಭಿಮಾನಿ..

ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಬಿ.ಎಸ್.ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದನಂತೆ.. ನಿನ್ನೆ ಬಿಎಸ್​ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕ್ಷಣದಿಂದ ಸಾಕಷ್ಟು ನೊಂದಿದ್ದ ರವಿ ನಿನ್ನೆ ಹೋಟೆಲ್​ನಲ್ಲೇ ನೇಣು ಹಾಕಿಕೊಂಡು‌ ಆತ್ಮಹತ್ಯೆಗೆ ಶರಣಾಗಿದ್ದಾನೆ.

The post ಬಿಎಸ್​ವೈ ರಾಜೀನಾಮೆ.. ಮನನೊಂದು ನೇಣಿಗೆ ಶರಣಾದ ಅಪ್ಪಟ ಅಭಿಮಾನಿ appeared first on News First Kannada.

Source: newsfirstlive.com

Source link